ಮೆಸ್ಕಾಂ ಪುತ್ತೂರು, ಬಂಟ್ವಾಳ ವಿಭಾಗ: ಮಳೆಗಾಲ ಮುನ್ನೆಚ್ಚರಿಕೆ ಸೂಚನೆ

| Published : May 25 2024, 12:45 AM IST

ಮೆಸ್ಕಾಂ ಪುತ್ತೂರು, ಬಂಟ್ವಾಳ ವಿಭಾಗ: ಮಳೆಗಾಲ ಮುನ್ನೆಚ್ಚರಿಕೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆ, ಗಾಳಿ, ಗುಡುಗು, ಮಿಂಚು ಹೆಚ್ಚಾಗಿ ಬರುವ ಸಂಭವವಿರುವುದರಿಂದ, ಸಾರ್ವಜನಿಕರು ತುಂಡಾಗಿ ಬಿದ್ದಿರುವ ವಿದ್ಯುತ್‌ ಲೈನ್‌ಗಳನ್ನು ಮುಟ್ಟುವುದಾಗಲಿ, ವಿದ್ಯುತ್‌ ಕಂಬ ಹಾಗೂ ಇತರೆ ವಿದ್ಯುತ್‌ ಉಪಕರಣಗಳನ್ನು ಮುಟ್ಟುವುದಾಗಲೀ, ಜಾನುವಾರುಗಳನ್ನು ವಿದ್ಯುತ್‌ ಕಂಬಕ್ಕೆ ಕಟ್ಟುವುದಾಗಲೀ, ಬಟ್ಟೆ ಒಣಗಲು ವಿದ್ಯುತ್‌ ಕಂಪನಿಯ ಸಾಮಾಗ್ರಿಗಳನ್ನು ಬಳಸುವುದಾಗಲೀ ಮಾಡಬಾರದು ಎಂದು ಸಾರ್ವಜನಿಕರಲ್ಲಿ ಮೆಸ್ಕಾಂ ಮನವಿ ಮಾಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ(ಮೆಸ್ಕಾಂ) ವ್ಯಾಪ್ತಿಯಲ್ಲಿ ಪ್ರಸ್ತುತ ಮುಂಗಾರು ಅವಧಿಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಮಳೆ, ಗಾಳಿ, ಗುಡುಗು, ಮಿಂಚು ಹೆಚ್ಚಾಗಿ ಬರುವ ಸಂಭವವಿರುವುದರಿಂದ, ಸಾರ್ವಜನಿಕರು ತುಂಡಾಗಿ ಬಿದ್ದಿರುವ ವಿದ್ಯುತ್‌ ಲೈನ್‌ಗಳನ್ನು ಮುಟ್ಟುವುದಾಗಲಿ, ವಿದ್ಯುತ್‌ ಕಂಬ ಹಾಗೂ ಇತರೆ ವಿದ್ಯುತ್‌ ಉಪಕರಣಗಳನ್ನು ಮುಟ್ಟುವುದಾಗಲೀ, ಜಾನುವಾರುಗಳನ್ನು ವಿದ್ಯುತ್‌ ಕಂಬಕ್ಕೆ ಕಟ್ಟುವುದಾಗಲೀ, ಬಟ್ಟೆ ಒಣಗಲು ವಿದ್ಯುತ್‌ ಕಂಪನಿಯ ಸಾಮಾಗ್ರಿಗಳನ್ನು ಬಳಸುವುದಾಗಲೀ ಮಾಡಬಾರದು ಎಂದು ಕೋರಿದೆ.

ವಿದ್ಯುತ್‌ ಅವಘಡದ ಬಗ್ಗೆ ಮುನ್ಸೂಚನೆ ಕಂಡು ಬಂದಲ್ಲಿ ತಕ್ಷಣ 24X7 ಗ್ರಾಹಕ ಸೇವಾ ಕೇಂದ್ರದ ಸಂಖ್ಯೆ ‘1912’ ಗೆ ದೂರು ದಾಖಲಿಸಿ ಅಥವಾ ಗ್ರಾಹಕ ಸೇವಾ ಕೇಂದ್ರದ ವಾಟ್ಸ್‌ಆ್ಯಪ್‌ ನಂಬರ್‌ 9483041912 ಗೆ ಸಂದೇಶ ಕಳುಹಿಸಿ ಅಥವಾ ‘ನನ್ನ ಮೆಸ್ಕಾಂ’ ಆ್ಯಪ್‌ ಮೂಲಕ ಮಾಹಿತಿ ನೀಡಬಹುದು.ಬಾಕ್ಸ್‌----

ಪುತ್ತೂರು. ಬಂಟ್ವಾಳದಲ್ಲಿ ಇವರಿಗೆ ದೂರು ನೀಡಿ

ಮೆಸ್ಕಾಂ ಪುತ್ತೂರು ಮತ್ತು ಬಂಟ್ವಾಳ ವಿಭಾಗಗಳ ವ್ಯಾಪ್ತಿಯಲ್ಲಿ ಅತೀ ತುರ್ತು ಸಂದರ್ಭದಲ್ಲಿ ಈ ಕೆಳಕಂಡ 24x7 ಸೇವಾಕೇಂದ್ರಗಳಲ್ಲಿ ದೂರನ್ನು ದಾಖಲಿಸಿ ಸಮಸ್ಯೆಯನ್ನು ಪರಿಹರಿಸಲು ಸಂಪರ್ಕಿಸಬಹುದಾಗಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಸೇವಾ ಕೇಂದ್ರದ ಹೆಸರು, ದೂರವಾಣಿ ಸಂಖ್ಯೆಪುತ್ತೂರು ವಿಭಾಗ1 ಪುತ್ತೂರು ನಗರ ಉಪವಿಭಾಗ 08251-236393/94808330132 ಪುತ್ತೂರು ಗ್ರಾಮಾಂತರ ಉಪವಿಭಾಗ 08251-2856833 ಕಡಬ ಉಪವಿಭಾಗ 94808413694 ಸುಳ್ಯ ಉಪವಿಭಾಗ 0 8257-233299/94808330155 ಸುಬ್ರಹ್ಮಣ್ಯ ಉಪವಿಭಾಗ 08257-281355ಬಂಟ್ವಾಳ ವಿಭಾಗ1 ಬಿ.ಸಿ ರೋಡ್ 08255-2333692 ಬಂಟ್ವಾಳ 08255-2349103 ವಿಟ್ಲ 08255-2393094 ಬೆಳ್ತಂಗಡಿ 08256-2340645 ಉಜಿರೆ 08256-2376666 ಧರ್ಮಸ್ಥಳ 9448289648