ಸಾರಾಂಶ
ಹಿರಿಯೂರು ನಗರದ ಶ್ರೀಶೈಲ ವೃತ್ತದಲ್ಲಿ ಶಂಕರ್ ನಾಗ್ ಅಭಿಮಾನಿಗಳ ಕಲಾವೇದಿಕೆ ವತಿಯಿಂದ ನಟ ಶಂಕರ್ ನಾಗ್ ರವರ 35ನೇ ವರ್ಷದ ಚಿರಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಂಕರ್‌ನಾಗ್ ಚಿರಸ್ಮರಣೆ ಕಾರ್ಯಕ್ರಮದಲ್ಲಿ ದಿವುಶಂಕರ್ ಆಗ್ರಹಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ಶ್ರೀಶೈಲ ವೃತ್ತದಲ್ಲಿ ಶಂಕರ್‌ನಾಗ್ ಅಭಿಮಾನಿಗಳ ಕಲಾವೇದಿಕೆ ವತಿಯಿಂದ ನಟ, ನಿರ್ದೇಶಕ ಶಂಕರ್‌ನಾಗ್ ರವರ 35ನೇ ವರ್ಷದ ಚಿರಸ್ಮರಣೆ ಹಾಗೂ ಗಾನಬ್ರಹ್ಮ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರ 5ನೇ ವರ್ಷದ ಸವಿ ನೆನಪಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮ ಉದ್ದೇಶಿಸಿ ಸಂಘದ ಅಧ್ಯಕ್ಷ ಎಚ್.ಸಿ.ದಿವು ಶಂಕರ್ ಮಾತನಾಡಿ, ಸರ್ಕಾರಕ್ಕೆ ಶಂಕರ್‌ನಾಗ್ ಅವರ ಬಗ್ಗೆ ಗೌರವ ಇದ್ದರೆ ಬೆಂಗಳೂರು ನಗರದ ಯಾವುದಾದರೂ ಒಂದು ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಬೇಕು. ಮೆಟ್ರೋ ಶಂಕರ್ ಅವರ ಕನಸಾಗಿತ್ತು. ಎಲ್ಲಾ ಕಲಾ ಪ್ರಕಾರದ 50 ವರ್ಷ ಮೇಲ್ಪಟ್ಟ ಕಲಾವಿದರಿಗೆ ತಾಲೂಕು ಮಟ್ಟದಲ್ಲಿ ಗುರುತಿಸಿ ಮಾಸಾಶನವನ್ನು ನೀಡಬೇಕು. ರೈಲುಗಳಲ್ಲಿ, ಬಸ್ಸಿನಲ್ಲಿ ಕಲಾವಿದರಿಗೆ ಉಚಿತ ಪ್ರಯಾಣಕ್ಕೆ ಪಾಸ್ ನೀಡಬೇಕು ಎಂದರು.
ಈ ವೇಳೆ ನಿವೃತ್ತ ಪೊಲೀಸ್ ದಫೇದಾರ್ ತಿಪೇಸ್ವಾಮಿ, ಡಾ.ರಾಜಕುಮಾರ್ ಕಲಾ ಪರಿಷತ್ ರಾಜ್ಯಾಧ್ಯಕ್ಷ ಕೆ.ಪರಶುರಾಮ ಗೊರಪ್ಪ, ರಂಗಭೂಮಿ ಕಲಾವಿದೆ, ಹರಿಕಥೆ ವಿದ್ವಾನ್ ರತ್ನ, ಶಾಂತಾ, ಸಿದ್ದೇಶ್ , ವಿನೋದ್ ಕುಮಾರ್, ಮೋಹನ್, ಜಗದೀಶ್, ರಂಗಸ್ವಾಮಿ, ಕಾರ್ತಿಕ್, ತಿಪ್ಪೇಸ್ವಾಮಿ, ಬಹದ್ದೂರ್ ಮತ್ತು ಶಂಕರನಾಗ್ ಅಭಿಮಾನಿಗಳು ಹಾಜರಿದ್ದರು. ಕಾರ್ಯಕ್ರಮದ ಅಂಗವಾಗಿ ನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು,ಹಣ್ಣು,ಬ್ರೆಡ್ಡು ವಿತರಿಸಲಾಯಿತು.