ಕನ್ನಡಪ್ರಭ ವಾರ್ತೆ ಭಟ್ಕಳ
ತಾಲ್ಲೂಕಿನ ಸರ್ಪನಕಟ್ಟೆಯಲ್ಲಿ ಈರಪ್ಪ ಎಂ. ನಾಯ್ಕ ಗರಡಿಕರ್ ಮತ್ತು ಜ್ಯೋತಿ ಈರಪ್ಪ ನಾಯ್ಕ ಗರಡಿಕರ್ ಮಾಲಿಕತ್ವದ ಎಂಜಿಎಂ ಪೆಟ್ರೋಲಿಯಂ ಹೆಸರಿನ ಪೆಟ್ರೋಲ್ ಬಂಕ್ ಜು.24ರಂದು ಬೆಳಗ್ಗೆ 10 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.ನೂತನ ಪೆಟ್ರೋಲ್ ಬಂಕನ್ನು ಮಾಜಿ ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಲಿದ್ದಾರೆ. ಸರ್ಪನಕಟ್ಟೆ ಭಾಗದಲ್ಲಿ ನೂತನ ಪೆಟ್ರೋಲ್ ಬಂಕ್ ಆರಂಭವಾಗುತ್ತಿರುವುದು ಜನತೆಗೆ ಅನುಕೂಲವಾಗಿದೆ. ಭಟ್ಕಳ ಪಟ್ಟಣದ ಮಣ್ಕುಳಿಯಲ್ಲಿ ಪೆಟ್ರೋಲ್ ಬಂಕ್ ನಂತರ ಬೈಂದೂರಿನ ಶಿರೂರು ತನಕ ಯಾವುದೇ ಪೆಟ್ರೋಲ್ ಬಂಕ್ ಇರಲಿಲ್ಲ. ಇದೀಗ ಸರ್ಪನಕಟ್ಟೆಯಲ್ಲಿ ಈರಪ್ಪ ಎಂ. ನಾಯ್ಕ ಗರಡಿಕರ್ ಮತ್ತು ಜ್ಯೋತಿ ಈರಪ್ಪ ನಾಯ್ಕ ಗರಡಿಕರ್ ದಂಪತಿಗಳು ಹೊಸದಾಗಿ ಇಂಡಿಯನ್ ಆಯಿಲ್ ಕಂಪೆನಿಯ ಪೆಟ್ರೋಲ್ ಬಂಕ್ ಆರಂಭಿಸುತ್ತಿರುವುದು ಈ ಭಾಗದ ಜನರು ವಾಹನಗಳಿಗೆ ಪೆಟ್ರೋಲ್, ಡಿಸೇಲ್ ತುಂಬಿಸಿಕೊಳ್ಳಲು ಅನುಕೂಲವಾಗಿದೆ. ಎಂಜಿಎಂ ಪೆಟ್ರೋಲ್ ಬಂಕನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದ್ದು, ಇದು ದಿನ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಸರ್ಪನಕಟ್ಟೆಯಲ್ಲಿ ಎಂಜಿಎಂ ಸೌಹಾರ್ದ ಸಹಕಾರಿ ಹುಟ್ಟು ಹಾಕಿ ತಾಲ್ಲೂಕಿನ ವಿವಿಧ ಭಾಗದಲ್ಲಿ 7 ಶಾಖೆ ತೆರೆದು ಯಶಸ್ವಿ ಆಗಿರುವ ಈರಪ್ಪ ಗರಡಿಕರ್ ಪೆಟ್ರೋಲ್ ಬಂಕ್ ಉದ್ಯಮಕ್ಕೆ ಕಾಲಿಡುವುದರ ಮೂಲಕ ತಮ್ಮ ವ್ಯವಹಾರದ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ. ಸರ್ಪನಕಟ್ಟೆ ಭಾಗದಲ್ಲಿ ಪೆಟ್ರೋಲ್ ಬಂಕ್ ಇಲ್ಲದೇ ಇರುವುದರಿಂದ ಜನತೆಯ ಅನುಕೂಲಕ್ಕಾಗಿ ಪೆಟ್ರೋಲ್ ಬಂಕ್ ಮಾಡಲಾಗಿದೆ. ಜನತೆ ಇದರ ಸದುಪಯೋಗ ಪಡೆಯಬೇಕೆಂದು ಈರಪ್ಪ ಎಂ. ನಾಯ್ಕ ಗರಡಿಕರ್ ಮತ್ತು ಜ್ಯೋತಿ ಈರಪ್ಪ ನಾಯ್ಕ ಗರಡಿಕರ್ ತಿಳಿಸಿದರು.