ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಮಿಡಿಗೇಶಿ ನೆಲದಲ್ಲಿ ಈ ಹಿಂದೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾಗ ನನ್ನ ಮನವಿಗೆ ಸ್ಪಂದಿಸಿ ಸರ್ಕಾರಿ ಶಾಲೆಯ ಮಕ್ಕಳಿಗೆ ಶೂ ಭಾಗ್ಯ ಘೋಷಿಸಿದ್ದರು. ಅದು ಮುಂದುವರಿದು ಇಡೀ ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ವರವಾಯಿತು ಇದು ಮಿಡಿಗೇಶಿ ನೆಲದ ಗುಣ ಎಂದು ಶಾಸಕ ಕೆ.ಎನ್.ರಾಜಣ್ಣ ನೆನಪಿಸಿದರು.ತಾಲೂಕಿನ ಮಿಡಿಗೇಶಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತದಿಂದ ನಡೆದ ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಅಂದು ಸಿಎಂ ಬಳಿ ವಿದ್ಯಾರ್ಥಿಗಳ ಪರವಾಗಿ ದನಿ ಎತ್ತಿ ಶೂ ಭಾಗ್ಯ ದೊರಕಿಸಿ ಕೊಟ್ಟು ಮಿಡಿಗೇಶಿ ಇತಿಹಾಸ ಸೃಷ್ಠಿಸಿದೆ. ಇದು ರಾಜ್ಯದ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ವರದಾನವಾಗಿದೆ ಎಂದರು.ಭೂಮಿಗೆ ಬೆಲೆ ಹೆಚ್ಚುತ್ತಿದ್ದು, ರೈತರು ಭೂ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ, ಮಿಡಿಗೇಶಿ ಹೋಬಳಿ ಸದಾ ಕಾಲ ನನಗೆ ಆಶೀರ್ವಾದ ಮಾಡಿರುವ ಹೋಬಳಿ, ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ. ರೈತರ ಮನೆ ಬಾಗಿಲಿಗೆ ಹೋಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದು,ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು. ಸಾಗುವಳಿ ಚೀಟಿ ವಿತರಣೆ ವಿಳಂಬವಾಗಿದೆ. ಕಾಲ ಮಿತಿಯಲ್ಲಿ ವಿಲೇವಾರಿ ಮಾಡೋಣ, ನಲ್ಲೇಕಾಮನಹಳ್ಳಿಗೆ 32 ನಿವೇಶನದ ಹಕ್ಕು ಪತ್ರ, ಚಂದ್ರಬಾವಿಗೆ 25, ನಾರಪ್ಪನಹಳ್ಳಿಗೆ 16, ಚಿನ್ನೆಹಳ್ಳಿಗೆ 17, ನಾಗಲಾಪುರ 118 ನಿವೇಶನ , ರಾಜೀವ್ ಗಾಂಧಿ ವಸತಿ ಯೋಜನೆಯಡಿ ಹಂಚಲಾಗುತ್ತಿದೆ. ಬಸವ ವಸತಿ ಯೋಜನೆ ಮಿಡಿಗೇಶಿಯಲ್ಲಿ 35 ಕಾರ್ಯಾದೇಶ ಪತ್ರ, ಒಟ್ಟು 218 ಮನೆ ಕಟ್ಟಲು ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ಹಾಗೂ ವಿವಿಧ ಇಲಾಖೆಗಳಿಂದ ಸವಲತ್ತುಗಳನ್ನು ವಿತರಿಸಲಾಗುತ್ತಿದೆ. 98 ಜನಕ್ಕೆ ಪೌತಿ ಖಾತೆ ಕೊಡುತ್ತಿದ್ದೇವೆ ಜನರ ಮನೆ ಬಾಗಿಲಿಗೆ ಹೋಗಿ ಅವರ ಕೆಲಸ ಕಾರ್ಯ ಮಾಡಿಕೊಡುವುದು ಜನಸಂಪರ್ಕಸಭೆಯ ಮೂಲ ಉದ್ದೇಶ ಈ ಹೋಬಳಿಯಲ್ಲಿ 1009 ಫಲಾನುಭವಿಗಳಿಗೆ ವಿವಿಧ ಸೌಲಭ್ಯ ನೀಡುತ್ತಿದ್ದೇವೆ ಎಂದರು.
ರೈತರು, ಕೃಷಿಕರು ಹಾಗೂ ಕೂಲಿಕಾರ್ಮಿಕರು ತಮಗಿರುವ ಜಮೀನಿನ ಭೂ ದಾಖಲೆಗಳನ್ನು ಸರಿಪಡಿಸಿಕೊಂಡು ಸರ್ಕಾರದ ಸೌಲಭ್ಯ ಪಡೆದು ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳಿ. ಮುಂದಿನ ಜನ ಸಂಪರ್ಕ ಸಭೆಯು ನ.5ರಂದು ದೊಡ್ಡೇರಿಯಲ್ಲಿ ನಡೆಯಲಿದ್ದು,ಶ್ರೀಸಾಮಾನ್ಯರ ಕೆಲಸ ಕಾರ್ಯಗಳು ನಡೆಯಲಿವೆ ಎಂದರು.ಎಡಿಸಿ ತಿಪ್ಪೇಸ್ವಾಮಿ ಮಾತನಾಡಿ, ಜಮೀನು ಇಲ್ಲದವರು ಕೃಷಿ ಕಾರ್ಮಿಕರಾಗಿ ಸರ್ಕಾರದ ಸೌಲಭ್ಯ ಪಡೆದರೆ ಜಮೀನು ಇರುವವರು ದಾಖಲೆ ಸರಿಪಡಿಸಿಕೊಂಡು ಸೌಲಭ್ಯ ಪಡೆಯಲು ಮುಂದಾಗಬೇಕು. ಸರ್ಕಾರ ಎರಡು ವರ್ಷದಿಂದ ದುರಸ್ತಿ ಪೌತಿ ಖಾತೆ ಅಂದೋಲನ ಕೈಗೊಂಡಿದ್ದು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು.
ತಹಸೀಲ್ದಾರ್ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳ ನೂರಾರು ಯೋಜನೆಗಳನ್ನು ಜನತೆಗೆ ತಲುಪಿಸುವುದೇ ಇದರ ಉದ್ದೇಶ. ಹಕ್ಕುಪತ್ರ, ನಿವೇಶನ ಮತ್ತು ಸಾಮಾಜಿಕ ಭದ್ರತಾ ಯೋಜನೆಯಡಿ ದೊರೆಯುವ ಎಲ್ಲ ಸೌಲಭ್ಯಗಳನ್ನು 1009 ಫಲಾನುಭವಿಗಳಿಗೆ ಆದೇಶ ನೀಡುತ್ತಿದ್ದು ಸರ್ಕಾರದಿಂದ ಪೋಡಿ ಅಂದೋಲ ಮಾಡಲಾಗುತ್ತಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷರಾರ ಲಕ್ಷೀದೇವಮ್ಮ, ಜಿಪಂ ಡಿಎಸ್ 2 ಸಂಜೀವಪ್ಪ, ಎಸಿ ಗೋಟೂರು ಶಿವಪ್ಪ, ಡಿವೈಎಸ್‌ಪಿ ಮಂಜುನಾಥ್,ತಾಪಂ ಇಓ ಲಕ್ಷ್ಮಣ್,ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಮುಖಂಡ ಜಿ.ಜೆ.ರಾಜಣ್ಣ, ಕೆಪಿಸಿಸಿ ಮೆಂಬರ್ ಎಂ.ಎಸ್.ಮಲ್ಲಿಕಾರ್ಜುನಯ್ಯ, ಗ್ಯಾರಂಟಿ ಸಮಿತಿ ಅಧ್ಯಕ್ಷ ಬಡವನಹಳ್ಳಿ ಹೂವಿನ ಚೌಡಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಟಿ.ಗೋವಿಂದಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಚಿಕ್ಕಮ್ಮ, ಸದಸ್ಯ ರಾಜ್‌ಗೋಪಾಲ್, ಶನಿವಾರಂರೆಡ್ಡಿ, ರಂಗಶ್ವಾಮಿ, ಲೋಕೇಶ್, ಚಿತ್ತಪ್ಪ,ಶಿವಣ್ಣ, ಪಿಡಿಒ ರಂಗನಾಥ್ , ಕಂದಾಯಧಿಕಾರಿ ವೇಣುಗೋಪಾಲ್ ಗ್ರಾಮ ಸಹಾಯಕರು ಹಾಗೂ ಸಾರ್ವಜನಿಕರು ಇದ್ದರು.