ನರೇಗಾ ಕಾಯ್ದೆ ಜಾರಿಯಿಂದ ಕಾರ್ಮಿಕರ ವಲಸೆ ತಪ್ಪಿದೆ: ನ್ಯಾಯಾಧೀಶ ಸಿದ್ದರಾಜು

| Published : May 02 2024, 12:18 AM IST

ನರೇಗಾ ಕಾಯ್ದೆ ಜಾರಿಯಿಂದ ಕಾರ್ಮಿಕರ ವಲಸೆ ತಪ್ಪಿದೆ: ನ್ಯಾಯಾಧೀಶ ಸಿದ್ದರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಮಿಕರ ಮೇಲಿನ ಶೋಷಣೆ ತಡೆಯುವ ಉದ್ದೇಶದಿಂದಲೇ ದೇಶದಲ್ಲಿ ಕಾರ್ಮಿಕ ದಿನಾಚರಣೆ ಆರಂಭಿಸಲಾಯಿತು. ಕಾರ್ಮಿಕರ ಸ್ಥಿತಿಗತಿ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದಾಗಲೇ ಕಾರ್ಮಿಕ ದಿನಾಚರಣೆಗೆ ನಿಜವಾಥ ಅರ್ಥ ಬರುತ್ತದೆ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಸಿದ್ದರಾಜು ಹೇಳಿದರು.

ರಾಣಿಬೆನ್ನೂರು: ನರೇಗಾ ಕಾಯ್ದೆ ಜಾರಿಗೆ ಬಂದಾಗಿನಿಂದ ದುಡಿಯುವ ವರ್ಗಕ್ಕೆ ಅನುಕೂಲವಾಗಿದ್ದು, ಕಾರ್ಮಿಕರು ವಲಸೆ ಹೋಗುವುದನ್ನು ತಪ್ಪಿಸಿದಂತಾಗಿದೆ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಸಿದ್ದರಾಜು ಹೇಳಿದರು.

ಇಲ್ಲಿನ ಗೌರಿಶಂಕರ ನಗರದ ನಿವೃತ್ತ ನೌಕರರ ಭವನದಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ತಾಲೂಕು ಪಂಚಾಯಿತಿ, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ಬಂಡವಾಳಶಾಹಿಗಳು ಕಾರ್ಮಿಕರನ್ನು 15 ಗಂಟೆ ದುಡಿಸಿಕೊಳ್ಳುತ್ತಿದ್ದರು ಹಾಗೂ ಅವರಿಗೆ ಸೂಕ್ತ ರಕ್ಷಣೆ ಇರುತ್ತಿರಲಿಲ್ಲ. ಈ ಅನ್ಯಾಯದ ವಿರುದ್ಧ ಹೋರಾಡಲು ದೇಶ-ವಿದೇಶಗಳಲ್ಲಿ ಸಂಘಟನೆಗಳು ಹುಟ್ಟಿಕೊಂಡವು. ಕಾರ್ಮಿಕರ ಮೇಲಿನ ಶೋಷಣೆ ತಡೆಯುವ ಉದ್ದೇಶದಿಂದಲೇ ದೇಶದಲ್ಲಿ ಕಾರ್ಮಿಕ ದಿನಾಚರಣೆ ಆರಂಭಿಸಲಾಯಿತು. ಕಾರ್ಮಿಕರ ಸ್ಥಿತಿಗತಿ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದಾಗಲೇ ಕಾರ್ಮಿಕ ದಿನಾಚರಣೆಗೆ ನಿಜವಾಥ ಅರ್ಥ ಬರುತ್ತದೆ ಎಂದರು.

ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಿರ್ದೇಶಕ, ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಡಿ. ಬಳಿಗಾರ ಅಧ್ಯಕ್ಷತೆ ವಹಿಸಿದ್ದರು. ಅಸಂಘಟಿತ ವಲಯದ ಕಾರ್ಮಿಕರಿಗೆ ನಾಲ್ವಾ ಕಾನೂನು ಸೇವೆಗಳ ಯೋಜನೆ 2015 ಅನುಷ್ಠಾನದ ಕುರಿತು ವಕೀಲ ಕುಮಾರ ಮಡಿವಾಳರ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾನೂನು ಕುರಿತು ಜಿಲ್ಲಾ ಐಇಸಿ ಸಂಯೋಜಕ ಚನ್ನವೀರ ಸ್ವಾಮಿ ಹಿರೇಮಠ ಹಾಗೂ ಕಾರ್ಮಿಕರಿಗೆ ವಿವಿಧ ಯೋಜನೆಗಳ ಕುರಿತು ತಾಲೂಕು ಐಇಸಿ ಸಂಯೋಜಕ ಡಿ.ವಿ. ಅಂಗೂರ ಉಪನ್ಯಾಸ ನೀಡಿದರು.