ಮಿಲಾಗ್ರಿಸ್ ಕಾಲೇಜು: ಕೃತಕ ಬುದ್ಧಿಮತ್ತೆ ಬಳಕೆ ಕಾರ್ಯಾಗಾರ ಸಂಪನ್ನ

| Published : Oct 06 2024, 01:16 AM IST

ಮಿಲಾಗ್ರಿಸ್ ಕಾಲೇಜು: ಕೃತಕ ಬುದ್ಧಿಮತ್ತೆ ಬಳಕೆ ಕಾರ್ಯಾಗಾರ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಮತ್ತು ಮಂಗಳೂರಿನ ಸೈಂಟ್ ಅಲೋಶಿಯಸ್ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ‘ಶಿಕ್ಷಣ ಮತ್ತು ಅಧ್ಯಯನದ ನಾವೀನ್ಯತೆಗಾಗಿ ಎಐ (ಕೃತಕ ಬುದ್ಧಿಮತ್ತೆ) ಸಾಧನಗಳ ವಿನಿಯೋಗ’ ಎಂಬ ವಿಷಯದ ಕುರಿತಾದ ಶಿಕ್ಷಕರ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಕಲ್ಯಾಣಪುರ

ಇಲ್ಲಿನ ಮಿಲಾಗ್ರಿಸ್ ಕಾಲೇಜು ಮತ್ತು ಮಂಗಳೂರಿನ ಸೈಂಟ್ ಅಲೋಶಿಯಸ್ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ‘ಶಿಕ್ಷಣ ಮತ್ತು ಅಧ್ಯಯನದ ನಾವೀನ್ಯತೆಗಾಗಿ ಎಐ (ಕೃತಕ ಬುದ್ಧಿಮತ್ತೆ) ಸಾಧನಗಳ ವಿನಿಯೋಗ’ ಎಂಬ ವಿಷಯದ ಕುರಿತಾದ ಶಿಕ್ಷಕರ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸೈಂಟ್ ಅಲೋಶಿಯಸ್ ವಿವಿಯ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ರೆಜಿ ಪಿ. ಜಾನ್, ಎಐ ಉಪಕರಣಗಳ ತಂತ್ರಜ್ಞಾನವನ್ನು ಹೇಗೆ ಉಪಯೋಗಿಸಬಹುದು ಮತ್ತು ಪಾಠದ ಪರಿಣಾಮಕಾರಿತ್ವವನ್ನು ಹೆಚ್ಚಿಸಬಹುದು ಎಂಬುದರ ಕುರಿತು ಮಾತನಾಡಿದರು ಮತ್ತು ಎಐ ವಲಯದಲ್ಲಿ ಅಗತ್ಯ ತಂತ್ರಜ್ಞಾನದ ವಿಸ್ತೃತ ವಿವರಣೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ವಿನ್ಸೆಂಟ್ ಆಳ್ವ, ಈ ರೀತಿಯ ಶಿಕ್ಷಕರ ಅಭಿವೃಧ್ಧಿ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಸರ್ವೋತ್ತಮ ಶಿಕ್ಷಣವನ್ನು ಒದಗಿಸಲು ಮುಖ್ಯವಾದ ಸಾಧನಗಳಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಿಲಾಗ್ರಿಸ್ ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಶೈಲೆಟ್ ಮಥಾಯಸ್ ಸ್ವಾಗತಿಸಿ, ಶಿಕ್ಷಣದಲ್ಲಿ ಗುಣಮಟ್ಟವನ್ನು ಸುಧಾರಿಸಲು ಎಐ ಸಾಧನಗಳ ಮಹತ್ವದ ಬಗ್ಗೆ ವಿವರಿಸಿದರು. ಬಿಸಿಎ ವಿಭಾಗದ ಉಪನ್ಯಾಸಕಿ ರೇಶ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಈ ಕಾರ್ಯಾಗಾರವು ಎಐ ತಂತ್ರಜ್ಞಾನವನ್ನು ಶಿಕ್ಷಕರಿಗೆ ಸಮರ್ಥವಾಗಿ ಬಳಸಲು ಸಹಾಯ ಮಾಡಿತು. ಅಲ್ಲದೇ ಎಐ ಉಪಕರಣಗಳನ್ನು ಪಾಠಗಳ ಪ್ರಸ್ತುತಪಡಿಸುವಿಕೆ, ಪರೀಕ್ಷಾ ನಿರ್ವಹಣೆ ಮತ್ತು ವಿದ್ಯಾರ್ಥಿಗಳ ಸಮಗ್ರ ಮಾರ್ಗದರ್ಶನದಲ್ಲಿ ಹೇಗೆ ಸಮರ್ಪಕವಾಗಿ ಬಳಸಬಹುದು ಎಂಬುದು ಇವೆಲ್ಲವೂ ಪ್ರತ್ಯಕ್ಷವಾಗಿ ವಿವರಿಸಲಾಯಿತು.