ಗುಳೇದಗುಡ್ಡ: ನಂದಿನಿ ಹಾಲಿನ ದರವನ್ನು ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ದರ ಆಕರಿಸುತ್ತಿರುವುದಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ:

ನಂದಿನಿ ಹಾಲಿನ ದರವನ್ನು ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ದರ ಆಕರಿಸುತ್ತಿರುವುದಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಇಲ್ಲಿನ ನಾಗರಿಕ ಹಿತ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಹೆಗಡಿ ಪ್ರಕಟಣೆ ನೀಡಿ, ಅ.29ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನ.1ರಿಂದ ಹಾಲಿನ ದರವನ್ನು ಪ್ರತಿ ಲೀಟರ್ ಗೆ ₹ 8 ಹೆಚ್ಚಳ ಮಾಡಲು ನಿರ್ಣಯಿಸಲಾಗಿದೆ. ಅದರಲ್ಲಿ ₹7 ರೈತರಿಗೆ ಹಾಗೂ ₹1 ಹಾಲು ಒಕ್ಕೂಟಗಳಿಗೆ ಸಿಗಲಿದೆ ಎಂದು ಸಚಿವರು ಘೋಷಿಸಿದ್ದರು. ದರ ಹೆಚ್ಚಳಕ್ಕೂ ಮೊದಲು ಲೀಟರ್ ಹಾಲಿಗೆ ₹58, ಅರ್ಧ ಲೀಟರ್ ಗೆ ₹28 ಇತ್ತು. ದರ ಹೆಚ್ಚಳ ಬಳಿಕ ಗ್ರಾಹಕರಿಂದ ಪಟ್ಟಣದಲ್ಲಿ ನಂದಿನಿ ಹಾಲಿನ ದರ ಲೀಟರ್ ₹70 ಹಾಗೂ ಅರ್ಧ ಲೀಟರ್ ಗೆ ₹35 ವಸೂಲಿ ಮಾಡಲಾಗುತ್ತಿದೆ. ಸರ್ಕಾರ ಲೀಟರ್‌ ಹಾಲಿಗೆ ₹8 ಹೆಚ್ಚಳ ಮಾಡುವುದಅಗಿ ಹೇಳಿ ₹12 ಹೆಚ್ಚಳ ಮಾಡಿದ್ದು ಏಕೆ ? ಜನತೆ ಹೋರಾಟ ಕೇಳುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಹಾಲಿನ ದರ ಸರಿಪಡಿಸಬೇಕೆಂದು ಗ್ರಾಹಕರು ಮತ್ತು ತಾಲೂಕು ಹೋರಾಟ ಸಮಿತಿ ಆಗ್ರಹಪಡಿಸಿದೆ.