ಸಾರಾಂಶ
-ಹಾಲಿನ ಕ್ಯಾನು ವಿತರಣೆ -ಕೊಳತೂರು ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ಸಭೆಕನ್ನಡಪ್ರಭ ವಾರ್ತೆ ಹೊಸಕೋಟೆ
ಸಹಕಾರ ಸಂಘಗಳಿಗೆ ಹಾಲು ಉತ್ಪಾದಕರೆ ಜೀವಾಳ. ಡೇರಿಗಳು ಅಭಿವೃದ್ಧಿಯತ್ತ ಸಾಗಲು ಹಾಲು ಉತ್ಪಾದಕರದ್ದು ಸಿಂಹಪಾಲು ಎಂದು ಬಮುಲ್ ಹೊಸಕೋಟೆ ಶಿಬಿರದ ಉಪವ್ಯವಸ್ಥಾಪಕ ಶಿವಾಜಿ ನಾಯಕ್ ತಿಳಿಸಿದರು.ತಾಲೂಕಿನ ಕೊಳತೂರು ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಗಳು ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿ ದೃಷ್ಟಿಯಿಂದ ಅಗತ್ಯ ನೆರವು ಒದಗಿಸುತ್ತಿದೆ. ಈಗಾಗಲೆ ಪ್ರತಿ ಲೀಟರ್ ಹಾಲಿಗೆ ಸರ್ಕಾರದಿಂದ ೫ ರು. ಪ್ರೋತ್ಸಾಹ ಧನ ದೊರೆಯುತ್ತಿದೆ. ಈಗ ಸರ್ಕಾರ ಪ್ರತಿ ಲೀಗೆ ೫ ರು. ಬೆಲೆ ಏರಿಕೆ ಮಾಡುವ ಹಾಗೂ ಆ ೫ ರು.ಗಳನ್ನು ಹಾಲು ಉತ್ಪಾದಕರಿಗೆ ನೀಡುವ ಚಿಂತನೆಯಲ್ಲಿದ್ದು ತ್ವರಿತವಾಗಿ ಅದು ಕಾರ್ಯಗತವಾಗಲಿದೆ. ಇದರಿಂದ ಹಾಲು ಉತ್ಪಾದಕರಿಗೆ ಮತ್ತಷ್ಟು ವರದಾನವಾಗಲಿದೆ. ಆದ್ದರಿಂದ ಗುಣಮಟ್ಟದ ಹಾಲು ಪೂರೈಸಬೇಕು ಎಂದರು.ರಾಜ್ಯದಲ್ಲಿ ನಂದಿನಿ ಉತ್ಪನ್ನಗಳಿಗೆ ಬಾರಿ ಬೇಡಿಕೆ ಇದೆ. ಹಾಲು ಉತ್ಪಾದಕರು ಗುಣಮಟ್ಟದ ಹಾಲು ಸರಬರಾಜು ಮಾಡುವುದೇ ಇದಕ್ಕೆ ಕಾರಣ. ಪ್ರಮುಖವಾಗಿ ರಾಸುಗಳಿಗೆ ವ್ಶೆಜ್ಞಾನಿಕವಾಗಿ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥ ನೀಡುವ ಮೂಲಕ ರಾಸುಗಳ ಆರೋಗ್ಯ ಕಾಪಾಡಿದರೆ ಉತ್ತಮ ಇಳುವರಿ ನಿರೀಕ್ಷೆ ಮಾಡಲು ಸಾಧ್ಯ ಎಂದು ಹೇಳಿದರು.
ಡೇರಿ ಅಧ್ಯಕ್ಷ ಸುರೇಶ್ ಮಾತನಾಡಿ, ಡೇರಿಯಲ್ಲಿ 90ಕ್ಕೂ ಹೆಚ್ಚು ಸದಸ್ಯರು ಸಕ್ರಿಯವಾಗಿ ಹೈನೋದ್ಯಮದಲ್ಲಿ ತೊಡಗಿಸಿಕೊಂಡಿದ್ದು ತಾಲೂಕಿನಲ್ಲಿ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಪ್ರಸಕ್ತ ಸಾಲಿನಲ್ಲಿ 7.5 ಲಕ್ಷ ಲಾಭಾಂಶದಲ್ಲಿದೆ. ಇದಕ್ಕೆ ಹಾಲು ಉತ್ಪಾದಕರ ಶ್ರಮಕ್ಕೆ ಧಕ್ಕಿದ ಪ್ರತಿಫಲವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಗೆ ರಾಸಗುಳಿಗೆ ನಂದಿನಿ ಫೀಡ್ ಬಳಕೆ ಮಾಡುವಂತಾಗಬೇಕು. ಇದರಿಂದ ರಾಸುಗಳ ಆರೋಗ್ಯ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ ಎಂದರು.ಗ್ರಾಪಂ ಅಧ್ಯಕ್ಷ ವೆಂಕಟಾಚಲಯ್ಯ, ಕೊಳತೂರು ಡೇರಿ ಉಪಾಧ್ಯಕ್ಷ ವೆಂಕಟರಾಜು, ಬಮುಲ್ ಹೊಸಕೋಟೆ ಶಿಬಿರದ ಸಹಾಯಕ ವ್ಯವಸ್ಥಾಪಕ ಶ್ರೀರಾಮ್, ಸಂತೋಷ್, ನಿರ್ದೇಶಕ ಸೊಮಶೇಖರ್, ಅಶೋಕ್, ರಾಮಾಂಜಿನಿ, ಆಂಜಿನಪ್ಪ, ಪದ್ಮ, ಅನಿತಾ, ಸುಬ್ರಮಣಿ, ಆನಂದ್, ಭೈರೆಗೌಡ, ಲಕ್ಷ್ಮಣಮೂರ್ತಿ, ಡೇರಿ ಕಾರ್ಯದರ್ಶಿ ಮುನಿರಾಜು, ಮಾಜಿ ಅಧ್ಯಕ್ಷ ರಮೇಶ್, ಹಾಜರಿದ್ದರು.
ನಗರೇನಹಳ್ಳಿ ಫೀಡ್ ಉತ್ಪಾದನಾ ಘಟಕ
ಹೊಸಕೋಟೆ ತಾಲೂಕಿನ ನಗರೇನಹಳ್ಳಿ ಬಳಿ ಫೀಡ್ ಉತ್ಪಾದನಾ ಘಟಕವನ್ನು ತೆರೆಯಲು ಶಾಸಕ ಶರತ್ ಬಚ್ಚೇಗೌಡರ ನೇತೃತ್ವದಲ್ಲಿ ಸರ್ವೆ ನಂಬರ್ 6ರಲ್ಲಿ ಸ್ಥಳ ಗುರುತಿಸಲಾಗಿದೆ. ಕೆಎಂಎಫ್‌ನಿಂದ ಅನುಮತಿ ಬೇಕಾಗಿದೆ. ಅನುಮತಿ ಸಿಕ್ಕ ಕೂಡಲೇ ತಾಲೂಕಿನಲ್ಲೆ ಫೀಡ್ ಉತ್ಪಾದನಾ ಘಟಕ ಸ್ಥಾಪನೆಯಾಗಲಿದೆ ಎಂದು ಬಮೂಲ್ ಹೊಸಕೋಟೆ ಶಿಬಿರದ ಉಪವ್ಯವ ಸ್ಥಾಪಕ ಶಿವಾಜಿನಾಯಕ್ ತಿಳಿಸಿದರು.