ತುರಗನೂರು ಡೇರಿ ಅಧ್ಯಕ್ಷರಾಗಿ ಟಿ.ಎಸ್‌. ರವಿ ಆಯ್ಕೆ

| Published : Feb 17 2024, 01:16 AM IST

ಸಾರಾಂಶ

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿದ್ದರಾಜು 7 ಮತ ಪಡೆದರೆ, ಮಹೇಶ 6 ಪರಾಭವಗೊಂಡರು. ಸಹಕಾರ ಸಂಘದ ಚುನಾವಣಾಧಿಕಾರಿ ರಾಜಣ್ಣ ಫಲಿತಾಂಶ ಪ್ರಕಟಿಸಿದರು.

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ತುರುಗನೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ.ಎಸ್‌. ರವಿ, ಉಪಾಧ್ಯಕ್ಷರಾಗಿ ಸಿದ್ದರಾಜು ಅವಿರೋಧವಾಗಿ ಆಯ್ಕೆಯಾದರು.

ತುರುಗನೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾ ಭವನದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂಬಂಧ ಕರೆಯಲಾಗಿದ್ದ ಚುನಾವಣಾ ವಿಶೇಷ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಟಿ.ಎಸ್‌. ರವಿ ಮತ್ತು ಗುರುಲಿಂಗೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಮಹೇಶ ಮತ್ತು ಸಿದ್ದರಾಜು ನಾಮಪತ್ರ ಸಲ್ಲಿಸಿದ್ದರಿಂದ ಟಿ.ಎಸ್‌. ರವಿ ಅವರು ಏಳು ಮತ ಪಡೆದರೆ, ಗುರುಲಿಂಗೇಗೌಡ ಆರು ಮತ ಪಡೆದು ಪರಾಭವಗೊಂಡರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿದ್ದರಾಜು 7 ಮತ ಪಡೆದರೆ, ಮಹೇಶ 6 ಪರಾಭವಗೊಂಡರು. ಸಹಕಾರ ಸಂಘದ ಚುನಾವಣಾಧಿಕಾರಿ ರಾಜಣ್ಣ ಫಲಿತಾಂಶ ಪ್ರಕಟಿಸಿದರು.

ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾದ ನರೇಂದ್ರ, ಕೃಷ್ಣಯ್ಯ, ಜಯರಾಮು. ಮಹಾಲಿಂಗು. ಸಿದ್ದೇಗೌಡರು. ಸಾವಿತ್ರಮ್ಮ. ಬಸಣ್ಣಮ್ಮ, ನಾಗರಾಜು, ಮೋಳೆಗೌಡ ಅವರು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಅನುಮೋದನೆ ನೀಡಿದರು.

ಕಾರ್ಯದರ್ಶಿ ನಾಗೇಂದ್ರ. ಮುಖಂಡರಾದ ಟಿ.ಎಸ್. ಮಹಾಲಿಂಗೇಗೌಡ. ಯುವ ಘಟಕದ ಅಧ್ಯಕ್ಷ ಟಿ.ಎಸ್. ಲೋಕೇಶ್, ಸಿದ್ದರಾಜು, ರಾಜಣ್ಣ, ಸಿದ್ದಪ್ಪ, ಸಂದೀಪ್, ರಮೇಶ, ಟಿ.ಎಸ್. ರಾಜು, ನಾಗರಾಜು, ಗಿರೀಶ್ ಇದ್ದರು.