ಹಾಲುಮತ ಧರ್ಮ ಪರಿಸರ ಜಾಗೃತಿ

| Published : Aug 17 2025, 01:34 AM IST

ಸಾರಾಂಶ

ಹಾಲುಮತಸ್ಥರು ಧ್ಯಾನ, ಸತ್ಸಂಪ್ರದಾಯ, ಸಂಸ್ಕಾರಗಳನ್ನು ರೂಢಿಸಿಕೊಳ್ಳುವುದರ ಮುಖಾಂತರ ಸಂಸ್ಕೃತಿಯ ಕುಟುಂಬವಾಗಬೇಕು. ಇದರಿಂದ ಸಮುದಾಯಕ್ಕೆ ಉತ್ತಮ ಹೆಸರು ತರಲು ಸಾಧ್ಯವಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ವಿಭಾಗದ ಕನಕಗುರು ಪೀಠದ ಪೀಠಾಧಿಕಾರಿ ಶ್ರೀ ಸಿದ್ಧರಾಮಾನಂದ ಪುರಿ ಮಹಾಸ್ವಾಮಿಗಳು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮುದಗಲ್

ಪಟ್ಟಣದ ಮೇಗಳಪೇಟೆಯ ಹಾಲುಮತ ಸಮಾಜದ ಆರಾಧ್ಯ ದೈವವಾದ ಜ್ಞಾನಪ್ಪಯ್ಯ ದೇವಸ್ಥಾನದಲ್ಲಿ ಹಮ್ಮಿಕೊಂಡ ಹಾಲುಮತ ಸಮಾಜ ಧರ್ಮ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಹಾಲುಮತ ಧರ್ಮ ಸರ್ವ ಧರ್ಮದವರೊಂದಿಗೆ ಬೆರೆತು ಉತ್ತಮ ಸಮುದಾಯ ವಾಗಿದೆ. ಆದರೆ ನಾವು ಕೆಟ್ಟ ಚಟಗಳಿಗೆ ಬಲಿಯಾಗಿ ಕುಟುಂಬದ ಸಮೇತ ಸಮುದಾಯಕ್ಕೆ ಕೆಟ್ಟ ಹೆಸರನ್ನು ತರುತ್ತಿದ್ದೇವೆ. ಅದಾಗದಂತೆ ನಡೆದು ಸತ್ಸಂಪ್ರದಾಯ ಗಳನ್ನು ಪಾಲಿಸಬೇಕು ಎಂದರು.

ಈ ವೇಳೆ ಸಣ್ಣ ಸಿದ್ದಯ್ಯಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಜ್ಞಾನಪ್ಪಯ್ಯನವರ ವಂಶಜರಾದ ಶ್ರೀ ಸಿದ್ದಯ್ಯಸ್ವಾಮಿ, ಗುರು ಬೀರಲಿಂಗ ದೇವರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಪರಮಾನಂದ ಹೊಳ್ಯಾಚಿ, ಶಿವನಾಗಪ್ಪ ಬಡಕುರ, ಗ್ಯಾನಪ್ಪ ಹೊಳ್ಯಾಚಿ, ಗ್ಯಾನಯ್ಯ ಭಾವಿಕಟ್ಟಿ ಸೇರಿಂತೆ ಸಮಾಜದ ಹಿರಿಯರು, ಯುವಕರು, ಮಹಿಳೆಯರು ಭಾಗವಹಿಸಿದ್ದರು.