ಸಾರಾಂಶ
ರಾಮನಗರ: ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ನೇಮಕ ಖಂಡಿಸಿ ತಾಲೂಕಿನ ಅಣ್ಣೆಹಳ್ಳಿ ಹಾಲು ಉತ್ಪಾದಕರು ನೂರಾರು ಲೀಟರ್ ಹಾಲು ರಸ್ತೆಗೆ ಚೆಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಡೇರಿ ಎದುರು ಸಂಘಕ್ಕೆ ಹಾಲು ಹಾಕಲು ಹಾಕದೇ ರಸ್ತೆಗೆ ಸುರಿದು ನೂನತ ಕಾರ್ಯದರ್ಶಿ ನಿತ್ಯಾನಂದ ಅವರ ನೇಮಕವನ್ನು ತೀವ್ರವಾಗಿ ಖಂಡಿಸಿದರು.ಅಧಿಕಾರಿಗಳು ಹಣದಾಸೆಗಾಗಿ ಈ ಹಿಂದೆ ಡೇರಿಯಲ್ಲಿ ಹಣ ದುರುಪಯೋಗ ಮಾಡಿಕೊಂಡ ವ್ಯಕ್ತಿ ಸಂಬಂಧಿಯನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಇದು ಹಿಂದಿನ ಅಕ್ರಮ ಮುಚ್ಚಿಹಾಕುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಅಧಿಕಾರಿಗಳು ಮೊದಲು ಹಾಲು ಉತ್ಪಾದಕರ ಸಂಘದ ಚುನಾವಣೆ ನಡೆಸಲಿ. ಆನಂತರ ಸಂಘಕ್ಕೆ ಚುನಾಯಿತರಾದ ಬಂದ ಅಡಳಿತ ಮಂಡಳಿ ಸೂಕ್ತ ಕಾರ್ಯದರ್ಶಿಯನ್ನು ನೇಮಕ ಮಾಡಿಕೊಳ್ಳುತ್ತದೆ. ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಬಂದು ಹೊಸ ಕಾರ್ಯದರ್ಶಿ ನಿತ್ಯಾನಂದ ನೇಮಕ ರದ್ದು ಮಾಡಬೇಕುಎಂದು ಆಗ್ರಹಿಸಿದರು.ನೂತನ ಕಾರ್ಯದರ್ಶಿ ನಿತ್ಯಾನಂದ ನಮಗೆ ಬೇಡ. ಪ್ರಭಾರ ಕಾರ್ಯದರ್ಶಿ ರಾಜ್‌ಕುಮಾರ್ ಅವರನ್ನೇ ಮುಂದುವರೆಸಬೇಕು. ಸಂಘ ಆಡಳಿತ ಮಂಡಳಿ ಇಲ್ಲದೆ ಕಳೆದ ಹಲವು ವರ್ಷಗಳಿಂದ ಆಡಳಿತಾಧಿಕಾರಿ ಮೇಲ್ವೀಚಾರಣೆಯಲ್ಲಿ ನಡೆಯುತ್ತಿದೆ. ಆದಷ್ಟು ಬೇಗ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.
ರೈತರ ಒಂದು ಗುಂಪು ನೂತನ ಕಾರ್ಯದರ್ಶಿ ನೇಮಕದ ಬಗ್ಗೆ ಅಪಸ್ವರ ಎತ್ತಿ ಈ ಹಿಂದೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ಕೂಡ ನಡೆಸಿದ್ದರು.ಗ್ರಾಮದಲ್ಲಿ ಬಿಗುವಿನ ವಾತವರಣ ಬೀಡುಬಿಟ್ಟ ಪೊಲೀಸರು:
ಗ್ರಾಮದಲ್ಲಿ ಕಾರ್ಯದರ್ಶಿ ಪರ ಹಾಗೂ ವಿರುದ್ಧ ಎರಡು ಗುಂಪುಗಳು ಗುದ್ದಾಟಕ್ಕೆ ಮುಂದಾದ ಹಿನ್ನಲೆಯಲ್ಲಿ ಗ್ರಾಮದಲ್ಲಿ ಪೋಲಿಸರು ಬೀಡುಬಿಟ್ಟಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಗ್ರಾಮಸ್ಥರ ಆರೋಪವನ್ನು ನಿರಾಕರಿಸಿದ ಹಾಲು ಉತ್ಪಾದಕರ ಇನ್ನೂಂದು ಗುಂಪು ಕಾರ್ಯದರ್ಶಿ ನಿತ್ಯಾನಂದ ನೇಮಕ ಕಾನೂನು ಬದ್ಧವಾಗಿದೆ. ಪ್ರಸ್ತುತ ಇರುವ ಕಾರ್ಯದರ್ಶಿ ಪ್ರಭಾರಿಯಾಗಿದ್ದು ಸೂಕ್ತ ತರಬೇತಿ ಹೊಂದಿಲ್ಲ ಹಾಗೂ ಅಷ್ಟೇನು ವಿದ್ಯಾವಂತನು ಅಲ್ಲ ಹಾಗಾಗಿ ಅಧಿಕಾರಿಗಳು ಸಂಘಕ್ಕೆ ಕಾರ್ಯದರ್ಶಿಯನ್ನು ನೇಮಕ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಮನಗರ ಗ್ರಾಮಾಂತರ ಸರ್ಕಲ್ ಇನ್ ಸ್ಪೆಕ್ಟರ್ ರಮೇಶ್ ಸ್ಥಳಕ್ಕೆ ಭೇಟಿ ನೀಡಿ ಎರಡೂ ಗುಂಪುಗಳ ನಡುವೆ ಮಾತುಕತೆ ನಡೆಸಿ ಗ್ರಾಮದಲ್ಲಿಉಂಟಾಗಿರುವಗೊಂದಲ ಸರಿಪಡಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ಎರಡು ಗುಂಪುಗಳ ಮಧ್ಯೆ ವಿವಾದದ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ನಿಬಂಧಕರು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಇತ್ಯರ್ಥ ಪಡಿಸಬೇಕಿದೆ.31ಕೆಆರ್ ಎಂಎನ್ 15 ಜೆಪಿಸಿ
ರಾಮನಗರ ತಾಲೂಕು ಅಣ್ಣೆಹಳ್ಳಿಯಲ್ಲಿ ಹಾಲು ಉತ್ಪಾದಕರು ನೂರಾರು ಲೀಟರ್ ಹಾಲು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದರು.