ಸಾರಾಂಶ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ. ಇವುಗಳಿಂದ ರಾಜ್ಯದ ಅಭಿವೃದ್ದಿಯಲ್ಲಿ ಯಾವುದೇ ರೀತಿಯ ಕುಂಟಿತವಾಗಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ಸಿಂದಗಿ : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ. ಇವುಗಳಿಂದ ರಾಜ್ಯದ ಅಭಿವೃದ್ದಿಯಲ್ಲಿ ಯಾವುದೇ ರೀತಿಯ ಕುಂಟಿತವಾಗಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ಪಟ್ಟಣದ ಆಲಮೇಲ ರಸ್ತೆಯಲ್ಲಿ ನೂತನ ಗಾಂಧಿ ವೃತ್ತ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಸಿಎಂ ಸಿದ್ದರಾಮಯ್ಯನವರು ೧೬ ಬಾರಿ ಬಜೆಟ್ ಮಂಡಿಸಿದ್ದಾರೆ. ಅವರು ಹಣಕಾಸಿನ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದರು.
ಸಿಂದಗಿ ಪಟ್ಟಣದಲ್ಲಿ ಗಾಂಧಿ ವೃತ್ತ ಚಿಕ್ಕದಾಗಿತ್ತು. ಅದನ್ನು ಶಾಸಕ ಅಶೋಕ ಮನಗೂಳಿ ಅವರು ಮನಗಂಡು ವೈಯಕ್ತಿಕವಾಗಿ ಸುಂದರವಾದ ವೃತ್ತ ನಿರ್ಮಾಣ ಮಾಡುತ್ತಿದ್ದಾರೆ. ವಿಜಯಪುರ ನಗರದಲ್ಲಿ ದೊಡ್ಡದಾದ ಗಾಂಧಿ ವೃತ ನಿರ್ಮಾಣ ಮಾಡುವಲ್ಲಿ ಪಣ ತೊಟ್ಟಿದ್ದೇವು. ಆದರೆ, ಮೇಲ್ಸೇತುವೆ ವಿಚಾರ ಮಧ್ಯ ಬಂದಾಗ ವೃತ್ತದ ವಿಚಾರ ಕೈಬಿಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸಿ ವೃತ್ತ ನಿರ್ಮಿಸುವ ಕಾರ್ಯಕ್ಕೆ ಮುಂದಾಗುತ್ತೇವೆ ಎಂದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ರಾಜ್ಯ ಸರ್ಕಾರ ಎಲ್ಲ ಶಾಸಕರಿಗೂ ₹ ೧೦ ಕೋಟಿ ಅನುದಾನ ನೀಡಿದೆ. ಅನುದಾನ ನೀಡುವಲ್ಲಿ ಯಾರಿಗೂ ತಾರತಮ್ಯ ಮಾಡಲ್ಲ. ಜನತೆಯ ಬಹು ದಿನಗಳ ಬೇಡಿಕೆ ನೂತನ ವೃತ್ತ ನಿರ್ಮಾಣದ ಕನಸು ಇಂದು ನೆರವೇರಿದೆ ಎಂದರು.
ಈ ವೇಳೆ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಶಿವಾನಂದ ಶಿವಾಚಾರ್ಯರು, ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ, ಪುರಸಭೆಯ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ಅಶೋಕ ವಾರದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಪುರಸಭೆಯ ಮಾಜಿ ಅಧ್ಯಕ್ಷ ಹಣಮಂತ ಸುಣಗಾರ, ಸದಸ್ಯ ಬಸವರಾಜ ಯರನಾಳ, ಸಾಯಬಣ್ಣ ಪುರದಾಳ, ವೈ.ಸಿ.ಮಯೂರ, ಅಶೋಕ ಸುಲ್ಪಿ, ಉಮೇಶ ಜೋಗೂರ, ಚನ್ನು ವಾರದ, ನೂರಹ್ಮದ ಅತ್ತಾರ, ಶಿವು ಹತ್ತಿ, ಶರಣಪ್ಪ ಸುಲ್ಪಿ, ಪರುಶುರಾಮ ಕಾಂಬಳೆ, ಅಭಿಯಂತರ ರಾಕೇಶ ಬ್ಯಾಕೋಡ, ಸುನಂದಾ ಯಂಪೂರೆ, ಮಹಾನಂದ ಬಮ್ಮಣ್ಣಿ, ಪ್ರತಿಭಾ ಚಳ್ಳಗಿ ಸೇರಿದಂತೆ ಇತರರು ಇದ್ದರು.