ರಂಜಾನ್‌ ಭಾವೈಕ್ಯತೆ ಸಾರಿದ ಲಕ್ಕೂರು ಮುಸ್ಲಿಮರು

| Published : Apr 01 2025, 12:45 AM IST

ಸಾರಾಂಶ

ಉಪವಾಸಿಗನಿಗೆ ದೇವನ ಉಡುಗೊರೆ ನೀಡಿ, ಬಡವರ ಹಸಿವು ಮತ್ತು ದಣಿವನ್ನು, ಉಳ್ಳವನ್ನು ಅನುಸರಿಬೇಕೆನ್ನುವ ಸಂದೇಶ ಸಾರುವುದೇ ರಂಜಾನ್ ಆಚರಣೆ ಎಂದು ಜಾಮೀಯಾ ಮಸೀದಿ ಅಧ್ಯಕ್ಷ ಹಾಗೂ ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯ ಲಕ್ಕೂರು ಖಲೀಂ ಉಲ್ಲಾ ಹೇಳಿದರು.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಉಪವಾಸಿಗನಿಗೆ ದೇವನ ಉಡುಗೊರೆ ನೀಡಿ, ಬಡವರ ಹಸಿವು ಮತ್ತು ದಣಿವನ್ನು, ಉಳ್ಳವನ್ನು ಅನುಸರಿಬೇಕೆನ್ನುವ ಸಂದೇಶ ಸಾರುವುದೇ ರಂಜಾನ್ ಆಚರಣೆ ಎಂದು ಜಾಮೀಯಾ ಮಸೀದಿ ಅಧ್ಯಕ್ಷ ಹಾಗೂ ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯ ಲಕ್ಕೂರು ಖಲೀಂ ಉಲ್ಲಾ ಹೇಳಿದರು.

ಸೋಂಪುರ ಹೋಬಳಿಯ ಲಕ್ಕೂರಿನ ಈದ್ಗಾ ಮೈದಾನದಲ್ಲಿ ರಂಜಾನ್ ಆಚರಣೆ ಅಂಗವಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಡಿನೆಲ್ಲೆಡೆ ಇಂದು ಶ್ರದ್ಧಾಭಕ್ತಿಯ ಉಪವಾಸದ ಮುಕ್ತಾಯದ ದಿನದ ಪ್ರತೀಕವಾದ ರಂಜಾನ್ ಆಚರಿಸಲಾಗುತ್ತಿದೆ. ಗ್ರಾಮದ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಭಾವೈಕ್ಯತೆ ಸಾರಿದ್ದೇವೆ. ಸಾಮೂಹಿಕ ಗೀತೆ ಹಾಡಿ, ಪರಸ್ಪರ ಶುಭಾಶಯ ಕೋರಿದ್ದೇವೆ. ಮಹಮ್ಮದ್ ಪೈಗಂಬರ್ ಸ್ಮರಣೆ, ರಂಜಾನ್ ಉಪವಾಸ ಅಂತ್ಯ ಅತೀ ವಿಶೇಷವಾದುದು ಎಂದರು.

ಜಾಮಿಯಾ ಮಸೀದಿಯ ಮೌಲ್ವಿ ಧರ್ಮಗುರು ಸಲೀಂ ಹಕರತ್ ಮಾತನಾಡಿ, ರಂಜಾನ್ ಶುಭಾಶಯ ಸಂದೇಶ ನೀಡಿ, ಈ ರಂಜಾನ್ ಹಬ್ಬ ಹಸಿವು-ದಾಹ ಅನುಭವಿಸುವುದರಲ್ಲಿ ಅಂತರಾಳ ಸಂದೇಶವಿದೆ ಎಂದರು.

ಈ ಸಂದರ್ಭದಲ್ಲಿ ಜೈಹಿಂದ್ ಸೈಯಿದ್, ಜಾಮೀಯ ಮಸೀದಿ ಉಪಾಧ್ಯಕ್ಷ ಸೈಯದ್ ಸುಭಾನ್ ಸಾಬ್, ಅಶ್ವಕ್ ಅಹಮದ್, ಗ್ರಾಪಂ ಸದಸ್ಯರಾದ ಸೈಯದ್ ಮುಜಿಬ್ ಉಲ್ಲಾ, ಅಲ್ಲಾಭಾಕ್ಷ, ಸೈಯದ್ ಮಫ್ತಿಯಾರ್, ಜುನೈದ್ ಅಹಮದ್, ಜಮೀಲ್ ಅಹಮದ್, ಮನ್ಸೂರ್ ಅಹಮದ್, ಇಸ್ಮಾಯಿಲ್ ಷರೀಫ್, ಬಾಬು ಸಾಹೇಬ್ ಇತರರಿದ್ದರು.