ಸಾರಾಂಶ
ತರೀಕೆರೆ : ತುಂಗಭದ್ರಾ ನದಿಗಳ ಸಂಗಮವನ್ನು ಪುಣ್ಯ ಕ್ಷೇತ್ರವೆಂದು ಕರೆಯುತ್ತಾರೆ. ಇಲ್ಲಿ ಸ್ನಾನ ಮಾಡಿದರೆ ಕೋಟಿ ಪುಣ್ಯ ಲಭಿಸುತ್ತದೆ ಎಂದು ಹಿರಿಯರು ಹೇಳುತ್ತಾರೆಂದು ಶ್ರೀ ಸಪ್ತಗಿರಿ ಶ್ರೀಶೇಷಗಿರಿ ಭಜನಾ ಮಂಡಳಿ ಅಧ್ಯಕ್ಷೆ ಲೀಲಾ ಸೋಮಶೇಖರಯ್ಯ ಹೇಳಿದರು.
ಪಟ್ಟಣದ ಶ್ರೀಸಪ್ತಗಿರಿ ಶ್ರೀಶೇಷಗಿರಿ ಭಜನಾ ಮಂಡಳಿಯ ಸದಸ್ಯರು ಮಹಾ ಶಿವರಾತ್ರಿಯ ಪ್ರಯುಕ್ತ ಲೀಲಾ ಸೋಮಶೇಖರಯ್ಯ ನೇತೃತ್ವದಲ್ಲಿ ಕೂಡಲಿಗೆ ಅಗಮಿಸಿ ಪೂಜಾ ಕೖಂಕರ್ಯಗಳೊಂದಿಗೆ ಸ್ನಾನ, ಸಾಮೂಹಿಕ ಭಜನೆ ಮಾಡಿದ ನಂತರ ಈ ಸ್ಥಳದ ಮಹಿಮೆ ಬಗ್ಗೆ ಮಾತನಾಡಿದರು.
ತುಂಗ,ಭದ್ರಾ, ನೇತ್ರಾವತಿ ತ್ರಿವಳಿಗಳು ಆಚ್ಚರಿಯೆಂದರೆ ಮೂರು ನದಿಗಳು ಒಂದು ಸ್ಥಳದಲ್ಲಿ ಹುಟ್ಟಿ ಬೇರೆ ಬೇರೆಯಾಗಿ ಹರಿದು ಸುಮಾರು ದೂರ ಕ್ರಮಿಸಿ ನಂತರ ಮತ್ತೆ ತುಂಗಾ, ಭದ್ರಾ ಒಂದಾಗಿ ಕೂಡಲಿ ಎಂಬ ಸ್ಥಳದಲ್ಲಿ ಸಂಗಮ ಗೊಂಡು ಮುಂದೆ ತುಂಗಭದ್ರಾ ನದಿಯಾಗಿ ಸಮುದ್ರ ಸೇರುತ್ತದೆ, ತುಂಗಾ ಮತ್ತು ಭದ್ರಾ ನದಿಗಳೆರಡು ಸಂಗಮವಾಗುವ ಸ್ಥಳವನ್ನು ಪುಣ್ಯ ಕ್ಷೇತ್ರ ಎಂದು ಭಾವಿಸಿ ಎಲ್ಲಾ ಕಡೆಯಿಂದ ನೂರಾರು ಭಕ್ತರು ಅಗಮಿಸಿ ಸ್ನಾನ ಮಾಡಿ ದೇವರಲ್ಲಿ ಭಕ್ತಿಯಿಂದ ನಮಸ್ಕರಿಸುತ್ತಾರೆ, ಹಬ್ಬ, ಹುಣ್ಣಿಮೆ, ಕಾರ್ತಿಕ ಮಾಸದಲ್ಲಿ ಸ್ಥಾನ ಮಾಡಿದರೆ ಕೋಟಿ ಪುಣ್ಯ ಲಭಿಸುತ್ತೇದೆ ಹಾಗೂ ಪಾಪಗಳೆಲ್ಲಾ ಕಳೆದ ಪುಣ್ಯ ಪ್ರಾಪ್ತವಾಗುತ್ತದೆ. ಶರೀರಕ ರೋಗಗಳ ವಾಸಿಯಾಗುತ್ತದೆ ಎಂದು ಅವರು ಹೇಳಿದರು.
ಎರಡು ನದಿಗಳ ಸಂಗಮವಾದ ಸ್ಥಳದಲ್ಲಿ ಸಂಗಮೇಶ್ವರ ದೇವಾಲಯ ಇದೆ, ಪಂಚಲಿಂಗಳನ್ನು ನೋಡಬಹುದು, ಕೂಡಲಿಯನ್ನು ಕರ್ನಾಟಕದ ಕಾಶಿಯೆಂದು ಕರೆಯುತ್ತಾರೆ ಏಕೆಂದರೆ ಹೆಜ್ಜೆ ಇಟ್ಟ ಕಡೆಯಲ್ಲಾ ಲಿಂಗಗಳನ್ನು ಕಾಣಬಹುದು, ವಿಶೇಷವಾಗಿ ಸಂಗಮದಲ್ಲಿ ಪಿತೃ ಕಾರ್ಯ ಗಳನ್ನು ಮಾಡಿ ಪಿಂಡಗಳನ್ನು ಹಾಕಿದರೆ ಅತ್ಮಗಳಿಗೆ ಮೋಕ್ಷ ಪ್ರಾಪ್ತಿಯಾಗುತ್ತೆಂದು ನಂಬಿಕೆ. ಈ ಸ್ಥಳದಲ್ಲಿ ಋಷಿ ಮುನಿಗಳು ಬಂದು ತಪಸ್ಸು ಮಾಡಿದ ಸ್ಥಳ, ಅದಿ ಶಂಕರಾಚಾರ್ಯರು ಬಂದು ವಿಶ್ರಾಂತಿ ಪಡೆದ ಪಾವನ ಕ್ಷೇತ್ರ, ಎಲ್ಲಾ ಕಡೆ ಶಾರದಾಂಬೆ ಕುಳಿತ್ತಿರುವ ದೇವಸ್ಥಾನಗಳನ್ನು ನೋಡಬಹುದು ಅಂದರೆ ಸಂಗಮದಲ್ಲಿ ನಿಂತಿರುವ ಶಾರದಾಂಬೆ ದೇವಸ್ಥಾನ ಕಾಣಬಹುದು ಎಂದು ತಿಳಿಸಿದರು.