ಸಾರಾಂಶ
ಉಡುಪಿಯ ಡಾ ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಯುವ ರೆಡ್ ಕ್ರಾಸ್ ಘಟಕ, ಐಕ್ಯೂಎಸಿ ಮತ್ತು ರೋಟರಿ ಉಡುಪಿ ಆಶ್ರಯದಲ್ಲಿ ‘ಮೈಂಡ್‌ಫುಲ್ ಮೊಬೈಲ್ ಯೂಸೇಜ್’ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಉಡುಪಿ
ನಗರದ ಡಾ ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಯುವ ರೆಡ್ ಕ್ರಾಸ್ ಘಟಕ, ಐಕ್ಯೂಎಸಿ ಮತ್ತು ರೋಟರಿ ಉಡುಪಿ ಆಶ್ರಯದಲ್ಲಿ ‘ಮೈಂಡ್‌ಫುಲ್ ಮೊಬೈಲ್ ಯೂಸೇಜ್’ ಕಾರ್ಯಾಗಾರ ಆಯೋಜಿಸಲಾಗಿತ್ತು.ರೋಟರಿ ಉಡುಪಿಯ ಅಧ್ಯಕ್ಷ ಗುರುರಾಜ್ ಭಟ್ ಅವರು ಕಾರ್ಯಾಗಾರ ಉದ್ಘಾಟಿಸಿ, ಮೊಬೈಲಿನ ಸದ್ಬಳಕೆ ಯಾವ ರೀತಿ ಇರಬೇಕೆಂಬುದನ್ನು ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಧರ ಪ್ರಸಾದ್ ಕೆ. ಇವರು ವಿದ್ಯಾರ್ಥಿನಿಯರಿಗೆ ಕಾರ್ಯಕ್ರಮ ಸದುಪಯೋಗಿಸಿಕೊಳ್ಳಲು ತಿಳಿಸಿ ಶುಭ ಹಾರೈಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಕೆಎಂಸಿಯ ವೈದ್ಯಕೀಯ ಸಹಪ್ರಾಧ್ಯಾಪಕ, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕಡಾ. ಅಶ್ವಿನಿ ಕುಮಾರ್ ಅವರು ವಿದ್ಯಾರ್ಥಿನಿಯರಿಗೆ ವಾಹನ ಚಲಾಯಿಸುವ ಸಮಯದಲ್ಲಿ ಮೊಬೈಲ್ ಬಳಕೆಯಿಂದಾಗುವ ಅವಘಡಗಳನ್ನು ತಪ್ಪಿಸಲು ಮೊಬೈಲ್ ಬಳಕೆಯ ಮಿತಿಯ ಬಗ್ಗೆ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸಿ ಸೈಬರ್ ಕ್ರೈಮ್ ಗಳ ಬಗ್ಗೆ ತಮ್ಮ ವೈಯಕ್ತಿಕ ಅನುಭವದೊಂದಿಗೆ ಮೊಬೈಲ್ ಬಳಕೆಯ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರೊ. ಶ್ರೀಮತಿ ಅಡಿಗ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ನಿಕೇತನ, ಯುವ ರೆಡ್ ಕ್ರಾಸ್ ಸಂಯೋಜಕ ಡಾ. ದಿವ್ಯಾ ಎಂ. ಎಸ್., ರೋಟರಿ ಕಾರ್ಯದರ್ಶಿ ಜಾಹ್ನವಿ ಆಚಾರ್ಯ ಉಪಸ್ಥಿತರಿದ್ದರು. ಅನನ್ಯ ನಿರೂಪಿಸಿ, ವಿನೋದ ಸ್ವಾಗತಿಸಿದರು. ಧನ್ಯಾ ವಂದಿಸಿದರು.