ಗಣಿ ಅಧಿಕಾರಿ ಪ್ರತಿಮಾ ಹತ್ಯೆ: ತೀರ್ಥಹಳ್ಳಿಯಲ್ಲಿ ಅಂತ್ಯಸಂಸ್ಕಾರ

| Published : Nov 07 2023, 01:30 AM IST

ಗಣಿ ಅಧಿಕಾರಿ ಪ್ರತಿಮಾ ಹತ್ಯೆ: ತೀರ್ಥಹಳ್ಳಿಯಲ್ಲಿ ಅಂತ್ಯಸಂಸ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ತುಡುಕಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ

ತೀರ್ಥಹಳ್ಳಿ: ಗಣಿ ಅಧಿಕಾರಿ ಪ್ರತಿಮಾ ಬೆಂಗಳೂರಿನಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದು, ಸೋಮವಾರ ತೀರ್ಥಹಳ್ಳಿಯಲ್ಲಿ ಶವದ ಅಂತ್ಯ ಸಂಸ್ಕಾರ ನಡೆದಿದೆ.

ಪಟ್ಟಣದ ಸಮೀಪದ ತುಡುಕಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನಡೆಸಿ ನಂತರ ಕುರುವಳ್ಳಿಯ ಹಿಂದೂ ರುದ್ರ ಭೂಮಿಯಲ್ಲಿ ಪ್ರತಿಮಾ ಅವರ ಪುತ್ರ ಪಾರ್ಥನಿಂದ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಿಸಲಾಯಿತು. ಪ್ರತಿಮಾ ಅಂತ್ಯಸಂಸ್ಕಾರದಲ್ಲಿ ಬಂಧು-ಬಳಗದವರು, ಗ್ರಾಮಸ್ಥರು ಸೇರಿದಂತೆ ನೂರಾರು ಜನರು ಭಾಗಿಯಾಗಿದ್ದರು.

ಸೂಕ್ತ ಭದ್ರತೆ ನೀಡಿ:

ಈ ವೇಳೆ ಕುಟುಂಬಸ್ಥರು ಮಾತನಾಡಿ, ಪ್ರತಿಮಾ ಸಾವಿಗೆ ಕಾರಣರಾವರಿಗೆ ಸೂಕ್ತ ಶಿಕ್ಷೆ ನೀಡಬೇಕು. ದಕ್ಷ ಅಧಿಕಾರಿ ಹಾಗೂ ಪ್ರತಿಭಾವಂತ ಹೆಣ್ಣುಮಗುವನ್ನು ಕಳೆದುಕೊಂಡಿದ್ದೇವೆ. ಸರ್ಕಾರ ಮಹಿಳಾ ಅಧಿಕಾರಿಗಳಿಗೆ ಸೂಕ್ತ ಭದ್ರತೆ ನೀಡಬೇಕು. ಇಂತಹ ದಕ್ಷ ಅಧಿಕಾರಿಗಳನ್ನು ನಾವು ಕಳೆದುಕೊಂಡ ಬಡವರಾಗಿದ್ದೇವೆ. ಎಲ್ಲರಿಗೂ ಪ್ರತಿಮಾ ಮಾದರಿ ಆಗಿದ್ದರು ಎಂದು ತಿಳಿಸಿದರು.

- - -

(-ಫೋಟೋ: ಪ್ರತಿಮಾ)