ಸೌಲಭ್ಯಕ್ಕಾಗಿ ಗಾಣಿಗ ಜನಾಂಗ ಸಂಘಟಿವಾಗಬೇಕು

| Published : Jul 21 2024, 01:24 AM IST

ಸಾರಾಂಶ

ತಾಲೂಕಿನಲ್ಲಿ ಗಾಣಿಗ ಸಮುದಾಯ ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಆದರೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಜನಾಂಗ ಸಾಮಾಜಿಕವಾಗಿ, ಮುಂದೆ ಬರಬೇಕು. ದೇವರಾಜ್ ಅರಸು ನಿಗಮ ಮಂಡಳಿ ನೀಡುವ ಆರ್ಥಿಕ ಸವಲತ್ತುಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು

ಕನ್ನಡಪ್ರಭ ವಾರ್ತೆ ಮಾಲೂರು

ಸಮಾಜದಲ್ಲಿ ಶೈಕ್ಷಣಿಕ ಆರ್ಥಿಕ ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಗಾಣಿಗ ಸಮುದಾಯದವರು ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಹೊಂದಲು ತಾಲೂಕಿನಲ್ಲಿರುವ ಗಾಣಿಗ ಸಮುದಾಯ ಒಗ್ಗಟ್ಟಾಗಬೇಕು ಎಂದು ತಾಲೂಕು ಗಾಣಿಗರ ಸಂಘದ ಪೋಷಕ ಟಿ.ಎಂ.ಅಶೋಕ್ ಕುಮಾರ್ ಹೇಳಿದರು.

ಅವರು ಪಟ್ಟಣದ ಮಾರುತಿ ಬಡಾವಣೆಯ ಕೃಷಿಕ ಸಮಾಜ ಸಭಾಂಗಣದಲ್ಲಿ ತಾಲೂಕು ಗಾಣಿಗರ ಸಂಘ ತಾಲೂಕು ಯುವಕ ಗಾಣಿಗರ ಸಂಘದ ವತಿಯಿಂದ ಆಗಸ್ಟ್‌ನಲ್ಲಿ ಹಮ್ಮಿಕೊಳ್ಳಲಾಗುವ ತಾಲೂಕು ಮಟ್ಟದ ಗಾಣಿಗರ ಸಮಾವೇಶ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಚುನಾಯಿತ ಪ್ರತಿಧಿಗಳಿಗೆ ಅಧಿಕಾರಿಗಳಿಗೆ ಹಮ್ಮಿಕೊಂಡಿರುವ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸೌಲಭ್ಯ ಬಳಸಿಕೊಳ್ಳಿ:

ತಾಲೂಕಿನಲ್ಲಿ ಗಾಣಿಗ ಸಮುದಾಯ ೧೦,೦೦೦ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಆದರೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಮುಂದೆ ಬರಬೇಕು ಸರಕಾರ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸು ಅವರ ನಿಗಮ ಮಂಡಳಿ ನೀಡುವ ಆರ್ಥಿಕ ಸವಲತ್ತುಗಳನ್ನು ಬಳಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು. ಗಾಣಿಗ ಸಮುದಾಯದಲ್ಲಿ ಬೆರಳಣಿಕೆಯಷ್ಟೇ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿದ್ದು, ಅಂತಹ ಮಕ್ಕಳ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ಪ್ರತಿಭಾ ಪುರಸ್ಕಾರ ಸಹ ಏರ್ಪಡಿಸಲಾಗಿದೆ ಎಂದರು. ಆಗಸ್ಟ್‌ನಲ್ಲಿ ಸಮಾವೇಶ

ಸಂಘದ ಗೌರವಾಧ್ಯಕ್ಷ ಎಂ.ಜಿ.ಮಧುಸೂದನ್ ಮಾತನಾಡಿ, ಸಮುದಾಯವನ್ನು ಒಂದೆಡೆಗೆ ಸೇರಿಸಿ ಒಗ್ಗಟ್ಟನ್ನು ಪ್ರದರ್ಶಿಸುವ ಸಲುವಾಗಿ ಆಗಸ್ಟ್‌ನಲ್ಲಿ ಸಮುದಾಯದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಸಂಘದ ಅಧ್ಯಕ್ಷ ಎಸ್.ಎಂ.ರಮೇಶ್, ಯುವಕ ಸಂಘದ ಅಧ್ಯಕ್ಷ ಕಡತೂರು ನಾರಾಯಣಸ್ವಾಮಿ, ತಾಲೂಕು ಸಂಘದ ಕಾರ್ಯದರ್ಶಿ ಎಸ್.ನಾರಾಯಣಸ್ವಾಮಿ, ಸಂಚಾಲಕರಾದ ವಿ.ಮಂಜುನಾಥ್, ಮುನಿಕೃಷ್ಣಪ್ಪ, ಲಕ್ಕೂರು ಜಿ.ಶ್ರೀನಿವಾಸ್, ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಉಪಾಧ್ಯಕ್ಷರಾದ ಸುನಿಲ್, ಇನ್ನಿತರಿದ್ದರು.