ಮಿನಿ ಸಿಲಿಂಡರ್ ಸ್ಫೋಟ 6 ಮಂದಿಗೆ ಗಾಯ

| Published : May 18 2024, 12:34 AM IST

ಸಾರಾಂಶ

ಗೃಹ ಬಳಕೆಯ ಮಿನಿ ಸಿಲಿಂಡರ್ ಸಿಡಿದ ಪರಿಣಾಮ ಆರು ಮಂದಿಗೆ ಗಾಯವಾದ ಘಟನೆ ಪಟ್ಟಣದ ಕೋಟೆ ಪ್ರದೇಶದಲ್ಲಿ ನಡೆದಿದೆ

ಕುಣಿಗಲ್: ಗೃಹ ಬಳಕೆಯ ಮಿನಿ ಸಿಲಿಂಡರ್ ಸಿಡಿದ ಪರಿಣಾಮ ಆರು ಮಂದಿಗೆ ಗಾಯವಾದ ಘಟನೆ ಪಟ್ಟಣದ ಕೋಟೆ ಪ್ರದೇಶದಲ್ಲಿ ನಡೆದಿದೆ. ಶೃತಿ (37) ಎಂಬುವರನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವು (52), ಹೇಮಲತಾ (17), ಕುಶಾಲ್ (13), ಸಮೀನಾ (35), ಮಂಜುಳಾರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಲಿಂಡರ್ ಸ್ಪೋಟಕ್ಕೆ ಮನೆಯಲ್ಲಿದ್ದವರಿಗೆ ಗಾಯಗಳಾಗಿದ್ದು, ಮನೆಯ ಬಾಗಿಲುಗಳು ಸಿಡಿದಿವೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದರು.