ಕನಿಷ್ಠ ಸೌಕರ್ಯ, ಉತ್ತಮ ಪುಸ್ತಕವಿದ್ದರೆ ಸಾಧನೆ ಸುಲಭ

| Published : Sep 04 2025, 01:01 AM IST

ಸಾರಾಂಶ

ಕನಿಷ್ಠ ಸೌಕರ್ಯ, ಉತ್ತಮ ಪುಸ್ತಕ, ಗುಣಮಟ್ಟದ ಬೋಧನೆ ಹಾಗೂ ಪರಿಶ್ರಮ ಇದ್ದರೆ ನೀಟ್, ಸಿಇಟಿ ಮತ್ತು ಜೆಇಇ ಪರೀಕ್ಷೆಗಳಲ್ಲಿ ಸುಲಭವಾಗಿ ಉತ್ತಮ ದರ್ಜೆ ಪಡೆಯಬಹುದು.

ಕುಷ್ಟಗಿ:

ಗ್ರಾಮೀಣ ಪ್ರದೇಶದ ಹಾಗೂ ಕಾರ್ಮಿಕರ ಮಕ್ಕಳು ಸಹ ನೀಟ್ ಪರೀಕ್ಷೆಯಲ್ಲಿ ಹೆಚ್ಚಿನ ಶ್ರೇಯಾಂಕ ಪಡೆಯುತ್ತಿರುವುದು ಗಮನಾರ್ಹ ಸಂಗತಿ ಎಂದು ಎಸ್‌ವಿಸಿ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸಿ.ವಿ. ಚಂದ್ರಶೇಖರ ಹೇಳಿದರು.

ಪಟ್ಟಣದ ಎಸ್‌ವಿಸಿ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಾಯಚೂರು ಜಿಲ್ಲೆಯ ಮಸ್ಕಿಯ ಪೌರಕಾರ್ಮಿಕರ ಮಗ ನೀಟ್ ಪರೀಕ್ಷೆಯಲ್ಲಿ ಹೆಚ್ಚಿನ ಶ್ರೇಯಾಂಕ ತೆಗೆದುಕೊಂಡಿದ್ದಾನೆ. ಬಿಹಾರದ ಕಾರ್ಮಿಕರ ಮಗ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ್ದಾನೆ. ಇವರೆಲ್ಲ ಗ್ರಾಮೀಣ ಪ್ರತಿಭೆಗಳು. ಕನಿಷ್ಠ ಸೌಕರ್ಯ, ಉತ್ತಮ ಪುಸ್ತಕ, ಗುಣಮಟ್ಟದ ಬೋಧನೆ ಹಾಗೂ ಪರಿಶ್ರಮ ಇದ್ದರೆ ನೀಟ್, ಸಿಇಟಿ ಮತ್ತು ಜೆಇಇ ಪರೀಕ್ಷೆಗಳಲ್ಲಿ ಸುಲಭವಾಗಿ ಉತ್ತಮ ದರ್ಜೆ ಪಡೆಯಬಹುದು ಎಂದು ತಿಳಿಸಿದರು.

ಪ್ರಾಂಶುಪಾಲ ಭೀಮಸೇನ್ ಆಚಾರ್‌ ಮಾತನಾಡಿ, ಎಸ್‌ವಿಸಿ ಕಾಲೇಜು ದೇಶದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ವಿತರಣೆಗೆ ಕೈಜೋಡಿಸಿದೆ. ಈ ಪುಸ್ತಕಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಧರ್ಮ ಗ್ರಂಥಗಳಿದ್ದಂತೆ. ನಮ್ಮ ಭಾಗದ ಮಕ್ಕಳು ಇಂತಹ ಪರೀಕ್ಷೆಗಳಲ್ಲಿ ಹೆಚ್ಚಿನ ಶ್ರೇಯಾಂಕ ಪಡೆಯಬೇಕು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಸಂಸ್ಥೆಯ ಸಿಇಒ ಡಾ. ಜಗದೀಶ್ ಅಂಗಡಿ ಮಾತನಾಡಿ, ಪಿಯು ನಂತರದ ಸ್ಪರ್ಧಾತ್ಮಕ ಪರೀಕ್ಷೆಗಳಾಚೆ ವಿಜ್ಞಾನ ವಿಷಯವನ್ನು ಜನಪ್ರಿಯಗೊಳಿಸಲು ಅನೇಕ ಯೋಜನೆಗಳನ್ನು ಕಾಲೇಜು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ದಿನಪತ್ರಿಕೆ ವಿತರಿಸಲಾಗುತ್ತಿದೆ. ಅವರಲ್ಲಿ ಓದಿನ ಕುರಿತು ಜಾಗೃತಗೊಳಿಸುವ ಕೆಲಸ ನಡೆದಿದೆ ಎಂದರು.

ಪ್ರತಿ ವಿದ್ಯಾರ್ಥಿಗೆ 4 ಪುಸ್ತಕ ವಿತರಿಸಲಾಯಿತು. ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಅರುಣ್ ಕರ್ಮಾರ್ಕರ್ ಹಾಗೂ ಎಸ್‌ವಿಸಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯಶಿಕ್ಷಕ ಭೀಮರಾವ್ ಕುಲಕರ್ಣಿ ಇದ್ದರು.