ರಾಷ್ಟ್ರಮಟ್ಟದ ಸಹಕಾರ ಇಲಾಖೆಯನ್ನು ಪ್ರತ್ಯೇಕಗೊಳಿಸಿ ಸಹಕಾರಿ ರಂಗಕ್ಕೆ ಹೆಚ್ಚಿನ ಶಕ್ತಿಯನ್ನು ತುಂಬಿಕೊಟ್ಟಿರುವ ಕೇಂದ್ರ ಸಹಕಾರ ಸಚಿವರಾದ ಅಮಿತ್ ಶಾ ಜೀ ಅವರಿಗೆ ಎಲ್ಲಾ ಶಿಗ್ಗಾಂವಿ ತಾಲೂಕಿನ ಸಹಕಾರಿಗಳ ಪರವಾಗಿ ಅಭಿನಂದಿಸುತ್ತೇನೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ್ವರ ಕಂಬಾಳಿಮಠ ಹೇಳಿದರು.

ಶಿಗ್ಗಾಂವಿ: ರಾಷ್ಟ್ರಮಟ್ಟದ ಸಹಕಾರ ಇಲಾಖೆಯನ್ನು ಪ್ರತ್ಯೇಕಗೊಳಿಸಿ ಸಹಕಾರಿ ರಂಗಕ್ಕೆ ಹೆಚ್ಚಿನ ಶಕ್ತಿಯನ್ನು ತುಂಬಿಕೊಟ್ಟಿರುವ ಕೇಂದ್ರ ಸಹಕಾರ ಸಚಿವರಾದ ಅಮಿತ್ ಶಾ ಜೀ ಅವರಿಗೆ ಎಲ್ಲಾ ಶಿಗ್ಗಾಂವಿ ತಾಲೂಕಿನ ಸಹಕಾರಿಗಳ ಪರವಾಗಿ ಅಭಿನಂದಿಸುತ್ತೇನೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ್ವರ ಕಂಬಾಳಿಮಠ ಹೇಳಿದರು.

ತಾಲೂಕಿನ ಹುಲಗೂರ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರಿ ಪತ್ತಿನ ಸಂಘದ ಆವರಣದಲ್ಲಿ ಕೇಂದ್ರ ಸರಕಾರದ ಸಹಕಾರಿ ಸಚಿವಾಲಯ ಪ್ರಾರಂಭವಾಗಿ ಐದು ವರ್ಷ ಹಾಗೂ ಸಹಕಾರಿ ಸಪ್ತಾಹ ದಿನಾಚರಣೆಯ ೪ ದಿನದ ಕಾರ್ಯಕ್ರಮದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಸಹಕಾರದೊಂದಿಗೆ ಸಮೃದ್ಧಿ ಎಂಬ ಧ್ಯೇಯದೊಂದಿಗೆ ಕೃಷಿ ಸಾಲ, ಸ್ವ ಸಹಾಯ ಸಂಘಗಳಿಗೆ, ಯಂತ್ರೋಪಕರಣಗಳಿಗೆ ಸಾಕಷ್ಟು ಸಾಲವನ್ನು ವಿತರಿಸುವುದರ ಜೊತೆಗೆ ಸಾಲ ವಸೂಲಾತಿಯನ್ನು ಮಾಡುತ್ತಿದ್ದು ಇದರಿಂದ ಕೆಸಿಸಿ ಬ್ಯಾಂಕ್ ಸಾಕಷ್ಟು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರು.

ಕಾರ್ಯಕ್ರಮವನ್ನು ಸಹಕಾರಿ ಯೂನಿಯನ್ ಅಧ್ಯಕ್ಷ ಧರೆಪ್ಪಗೌಡ ಪಾಟೀಲ ಉದ್ಘಾಟಿಸಿ ಮಾತನಾಡಿ, ಇಂದು ಸಹಕಾರಿ ಸಂಘಗಳಲ್ಲಿ ಕಂಪ್ಯೂಟರೀಕರಣ, ಫ್ಯಾಕ್ಸ್‌ ವ್ಯವಸ್ಥೆಯಿಂದ ಸಾಕಷ್ಟು ಅನುಕೂಲವಾಗಿದ್ದು, ಇದರಿಂದ ರೈತರು ಹಾಗೂ ಗ್ರಾಹಕರು ಇದರ ಸದುಪಯೋಗವನ್ನು ತೆಗೆದುಕೊಳ್ಳಬೇಕು ಎಂದರು.

ಹಾವೇರಿ ಕೆಎಂಎಫ್‌ ನಿರ್ದೇಶಕ ತಿಪ್ಪಣ್ಣಾ ಸಾತಣ್ಣವರ ಮಾತನಾಡಿ, ಎಲ್ಲ ವಿಧದ ಸಹಕಾರಿ ಸಂಘಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಕೇಂದ್ರ ಸರಕಾರ ಸಚಿವಾಲಯವನ್ನು ಪ್ರಾರಂಭಿಸಿ ಅನೇಕ ಕ್ರಮಗಳನ್ನು ಕೈಗೊಂಡಿದ್ದು ಕಂಪ್ಯೂಟರೀಕರಣಗೊಳಿಸಿದ್ದು ಸಹಕಾರಿಯಾಗಿದೆ ಎಂದರು.

ಹುಲಗೂರ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ನಾಗನಗೌಡ ಪಾಟೀಲ,

ಕೆಎಂಎಫ್ ನಿರ್ದೇಶಕ ಶಂಕರಗೌಡ ಪಾಟೀಲ, ಸಹಕಾರಿ ಯೂನಿಯನ್ ನಿರ್ದೇಶಕ ಶಿವಾನಂದ ರಾಮಗೇರಿ, ಸಹಕಾರಿ ಪುರಸ್ಕೃತ ರವಿಂದ್ರ ಕುಡವಕ್ಕಲಿಗಾರ, ಡಾ. ಕಾನಡಗಿ ಸೇರಿದಂತೆ ಹಲವಾರು ಮುಖಂಡರುಗಳು ಮಾತನಾಡಿದರು.

ಈ ಸಂದರ್ಭದಲ್ಲಿ ಸಹಾಯಕ ನಿಬಂಧಕ ಎಸ್.ಜಿ.ಸುಣಗಾರ ಸಹಕಾರಿ ಅಭಿವೃದ್ದಿ ಅಧಿಕಾರಿ ರಾಯಣ್ಣವರ, ಎನ್.ಎಸ್.ಪೂಜಾರ, ಯಶಸ್ವಿನಿ ಸಂಯೋಜಕ ಶರಣಬಸಪ್ಪ, ಡಾ, ಮುದ್ರಿ, ಡಾ, ಹಿರೇಮಠ, ಜಿಲ್ಲಾ ಇಪ್ಕೋದ ನಾಗರಾಜ, ಕಿಪ್ಕೋ ವಿರೇಶ, ಉಮೇಶ ಅಂಗಡಿ, ಸೇರಿದಂತೆ ಹಲವಾರು ಸಹಕಾರಿಗಳು ಇದ್ದರು.

ಸಹಕಾರಿ ಯುನಿಯನ್ ಕಾರ್ಯದರ್ಶಿ ಸವಿತಾ ಹಿರೇಮಠ ಕಾರ್ಯಕ್ರಮ ನಿರುಪಿಸಿದರೆ ಒಂದನಾರ್ಪಣೆಯನ್ನು ಸಂಘದ ಸಿಇಓ ವೀರಣ್ಣಾ ಸುಬ್ರಗಟ್ಟಿ ಒಂದಿಸಿದರು. ಪೊಟೋ ಪೈಲ್ ನೇಮ್ ೧೬ಎಸ್‌ಜಿವಿ೨ ತಾಲೂಕಿನ ಹುಲಗೂರ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರಿ ಪತ್ತಿನ ಸಂಘದ ಆವರಣದಲ್ಲಿ ಕೇಂದ್ರ ಸರಕಾರದ ಸಹಕಾರಿ ಸಚಿವಾಲಯ ಪ್ರಾರಂಭವಾಗಿ ಐದು ವರ್ಷ ಹಾಗೂ ಸಹಕಾರಿ ಸಪ್ತಾಹ ದಿನಾಚರಣೆಯ ೪ ದಿನದ ಕಾರ್ಯಕ್ರಮದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಕಾರ್ಯಾಗಾರ ಕಾರ್ಯಕ್ರಮವನ್ನು ಕಾರ್ಯಕ್ರಮವನ್ನು ಸಹಕಾರಿ ಯುನಿಯನ್ ಅಧ್ಯಕ್ಷ ಧರೆಪ್ಪಗೌಡ ಪಾಟೀಲ ಉದ್ಘಾಟಿಸಿದರು.