ಸಾರಾಂಶ
ಧಾರವಾಡ ಲೋಕಸಭಾ ಅಭ್ಯರ್ಥಿ ವಿನೋದ ಅಸೂಟಿ ಪರ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸೋಮವಾರ ಸಂಜೆ ಶಿಗ್ಗಾವಿ ಪಟ್ಟಣದಲ್ಲಿ ಬೃಹತ್ ರೋಡ್ ಶೋ ಮೂಲಕ ಕೇಂದ್ರ ಸರಕಾರದ ವಿರುದ್ಧ ಖಾಲಿ ಚೊಂಬು ಪ್ರದರ್ಶಿಸಿದರು.
ಶಿಗ್ಗಾವಿ: ಧಾರವಾಡ ಲೋಕಸಭಾ ಅಭ್ಯರ್ಥಿ ವಿನೋದ ಅಸೂಟಿ ಪರ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸೋಮವಾರ ಸಂಜೆ ಶಿಗ್ಗಾವಿ ಪಟ್ಟಣದಲ್ಲಿ ಬೃಹತ್ ರೋಡ್ ಶೋ ಮೂಲಕ ಕೇಂದ್ರ ಸರಕಾರದ ವಿರುದ್ಧ ಖಾಲಿ ಚೊಂಬು ಪ್ರದರ್ಶಿಸಿದರು.
ವೀರರಾಣಿ ಕಿತ್ತೂರು ಚನ್ನಮ್ಮಾಜಿ ಪುತ್ಥಳಿಗೆ ಮಾರ್ಲಾಣೆಗೈದ ನಂತರ ಆರಂಭವಾದ ರೋಡ್ ಶೋ ಮೆರವಣಿಗೆ, ಪಟ್ಟಣದ ವಿವಿಧ ಗಲ್ಲಿಗಳಲ್ಲಿ ಹಾಯ್ದು ಚನ್ನಮ್ಮಾಜಿ ವೃತ್ತಕ್ಕೆ ಬಂದು ಸಮಾಪ್ತಿಗೊಂಡಿತು. ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡು ಜೈಕಾರ ಮೊಳಗಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಕೇಂದ್ರ ಸರಕಾರ ರಾಜ್ಯದಿಂದ ತೆರಿಗೆ ಹಣ ಪಡೆದುಕೊಂಡು ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟಿದೆ. ಆಮೂಲಕ ಕನ್ನಡಿಗರಿ ಅನ್ಯಾಯ ಮಾಡಿದೆ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾದರೂ ಪರಿಹಾರಕ್ಕೆ ಹಣ ಕೊಡದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ನ್ಯಾಯಾಲಯದ ಮೆಟ್ಟಲೇರಿ ಪರಿಹಾರ ಪಡೆದುಕೊಳ್ಳಬೇಕಾಯಿತು ಎಂದರು.
ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಮತಕ್ಕಾಗಿ ಹಿಂದುಳಿದವರನ್ನು ಬಳಸಿಕೊಳ್ಳುವ ಬಿಜೆಪಿಗೆ ಪಾಠ ಕಲಿಸುವ ಸಮಯ ಬಂದಿದೆ. ಬಡವರ ಬದುಕು ಹಸನಗೊಳಿಸುವ ಐದು ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ ಕಾರ ಅನುಷ್ಠಾನಕ್ಕೆ ತಂದಿದೆ. ಇದನ್ನು ಬಿಜೆಪಿ ಸಹಿಸಿಕೊಳ್ಳುತ್ತಿಲ್ಲ ಎಂದರು.ಕಾಂಗ್ರೆಸ್ ಮುಖಂಡರಾದ ಟಿ. ಈಶ್ವರ್, ಮೊಹಮದ್ ನಲಪಾಡ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮುಖಂಡರಾದ ಯಾಸೀರಖಾನ್ ಪಠಾಣ, ಸ್ವಾತಿ ಮಳಗಿ, ಬಿ.ಸಿ. ಪಾಟೀಲ, ಎಂ.ಜೆ. ಮುಲ್ಲಾ ಸೇರಿದಂತೆ ಸ್ಥಳೀಯ ಕಾರ್ಯಕರ್ತ, ಮುಖಂಡರು ಉಪಸ್ಥಿತರಿದ್ದರು.