ಸಾರಾಂಶ
ಕಳೆದ ಜು.29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಚಲುವರಾಯಸ್ವಾಮಿ ಅವರು ಕಾವೇರಿ ಮಾತೆಗೆ ಬಾಗಿನ ಸಲ್ಲಿಸಿದ್ದರು. ಮತ್ತೊಮ್ಮೆ ಸಚಿವರು ಶುಕ್ರವಾರ ಪತ್ನಿ ಧನಲಕ್ಷ್ಮೀ ಅವರೊಂದಿಗೆ ಜಲಾಶಯಕ್ಕೆ ಆಗಮಿಸಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಬಾಗಿನ ಸಲ್ಲಿಕೆ ಸಂಪ್ರದಾಯ ಆರಂಭವಾದ ನಂತರ ಎರಡೆರಡು ಬಾರಿ ಬಾಗಿನ ಸಲ್ಲಿಕೆಯಾಗುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕೃಷ್ಣರಾಜಸಾಗರ ಜಲಾಶಯ ಭರ್ತಿಯಾದಾಗ ಕಾವೇರಿ ಮಾತೆಗೆ ಮುಖ್ಯಮಂತ್ರಿ ಬಾಗಿನ ಸಮರ್ಪಿಸುವುದು ಸಂಪ್ರದಾಯ. ಮುಖ್ಯಮಂತ್ರಿ ಬಾಗಿನ ಸಲ್ಲಿಸಿದ ನಂತರ ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಪತ್ನಿ ಜೊತೆ ಮತ್ತೊಮ್ಮೆ ಬಾಗಿನ ಅರ್ಪಿಸುವುದರೊಂದಿಗೆ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.ಕಳೆದ ಜು.29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಚಲುವರಾಯಸ್ವಾಮಿ ಅವರು ಕಾವೇರಿ ಮಾತೆಗೆ ಬಾಗಿನ ಸಲ್ಲಿಸಿದ್ದರು. ಮತ್ತೊಮ್ಮೆ ಸಚಿವರು ಶುಕ್ರವಾರ ಪತ್ನಿ ಧನಲಕ್ಷ್ಮೀ ಅವರೊಂದಿಗೆ ಜಲಾಶಯಕ್ಕೆ ಆಗಮಿಸಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಬಾಗಿನ ಸಲ್ಲಿಕೆ ಸಂಪ್ರದಾಯ ಆರಂಭವಾದ ನಂತರ ಎರಡೆರಡು ಬಾರಿ ಬಾಗಿನ ಸಲ್ಲಿಕೆಯಾಗುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
ಶ್ರೀರಂಗಪಟ್ಟಣದ ಪುರೋಹಿತ ಭಾನು ಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಸಿಕೊಟ್ಟರು. ಸಚಿವ ಎನ್.ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮೀ, ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಪತ್ನಿ ಸುಮತಿ ಜೊತೆ ಬಾಗಿನ ಸಲ್ಲಿಸಿದರು.ಕಾಂಗ್ರೆಸ್ ಸರ್ಕಾರ ಬಂದಾಗ ಬರಗಾಲ ಅಂತ ಹೇಳಿದ್ದರು. ಕಳೆದ ಬಾರಿಯೂ ಲೇವಡಿ ಮಾಡಿದ್ದರು. ಅದಕ್ಕಾಗಿ ನನ್ನ ಶ್ರೀಮತಿ, ಶಾಸಕರ ಶ್ರೀಮತಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದರು. ಶ್ರೀ ಚಾಮುಂಡೇಶ್ವರಿ, ಕಾವೇರಿ ಮಾತೆಗೆ ಹರಕೆ ಹೊತ್ತಿದ್ದರು. ಸಿಎಂ ಬಾಗಿನ ಬಿಡುವಾಗ ಬಾಗಿನ ಬಿಡಲು ಆಗಲಿಲ್ಲ. ಹೀಗಾಗಿ ನಾವು ಇಂದು ಬಿಟ್ಟು ಹರಕೆ ತೀರಿಸಿದ್ದೇವೆ ಎಂದು ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದರು.