ಸಚಿವರಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ: ಕಿರಣಸಿಂಗ್‌

| Published : Mar 19 2024, 12:52 AM IST

ಸಾರಾಂಶ

ಯಮಕನಮರಡಿ: ಸತೀಶ ಜಾರಕಿಹೊಳಿ ಅವರು ಯಮಕನಮರಡಿ ಶಾಸಕರಾದ ನಂತರ ಹಲವಾರು ಜನಪರ ಯೋಜನೆಗಳು ಮಂಜೂರು ಮಾಡಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ ಎಂದು ಯುವ ಧುರೀಣ ಕಿರಣಸಿಂಗ ರಜಪೂತ ಹೇಳಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಸತೀಶ ಜಾರಕಿಹೊಳಲಿ ಅವರು ಯಮಕನಮರಡಿ ಶಾಸಕರಾದ ನಂತರ ಹಲವಾರು ಜನಪರ ಯೋಜನೆಗಳು ಮಂಜೂರು ಮಾಡಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ ಎಂದು ಯುವ ಧುರೀಣ ಕಿರಣಸಿಂಗ ರಜಪೂತ ಹೇಳಿದರು.

ಯಮಕನಮರಡಿಯಲ್ಲಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಡೆದ ವಿವೇಕ ಯೋಜನೆ ಅಡಿಯಲ್ಲಿ ಮಂಜೂರಾದ ₹45 ಲಕ್ಷಗಳ ವೆಚ್ಚದಲ್ಲಿ 3 ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ ಮತ್ತು ವಿವೇಕ ಯೋಜನೆ ಅಡಿಯಲ್ಲಿ ₹60 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾದ 4 ಶಾಲಾ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಚಿವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಲೋಕೋಪಯೋಗಿ ಇಲಾಖೆ ಯೋಜನೆ ಅಡಿಯಲ್ಲಿ 48 ಶಾಲಾ ಕೊಠಡಿಗಳು ಮಂಜೂರು ಮಾಡಿಸಿದ್ದು, ಕೆಲಸ ಪ್ರಗತಿಯಲ್ಲಿ ಸಾಗಿದೆ ಎಂದರು.

ಯಮಕನಮರಡಿ ಗ್ರಾಪಂ ಅಧ್ಯಕ್ಷೆ ಆಸ್ಮಾ ಫನಿಬಂದ ತಮ್ಮ ಸ್ವಂತ ಖರ್ಚಿನಿಂದ ವಿದ್ಯಾರ್ಥಿಗಳಿಗೆ 100 ತಾಟುಗಳು 100 ಗ್ಲಾಸಗಳು ವಿತರಿಸಿದರು. ಈ ವೇಳೆಯಲ್ಲಿ ವೀರಣ್ಣ ಬಿಸಿರೊಟ್ಟಿ, ಗಿರೀಶ ಮಿಶ್ರಿಕೋಟಿ, ಶರೀಫ್‌ ಬೇಪಾರಿ, ಶೌಕತ ಖಾಜಿ. ಅಸಲಾಮ ಫಕಾಲಿ ಎಸ್‌ಡಿಎಂಸಿ ಅಧ್ಯಕ್ಷ ಮಾಣಿಕಸಾಬ್ ಬೇಪಾರಿ ನಿವೃತ್ತ ಮುಖ್ಯ ಶಿಕ್ಷಕ ಐ.ಆರ್.ನಾಲಬಂದ, ರಹೀಮ್‌ ಪಟೇಲ, ಎಸ್‌ಡಿಎಂಸಿ ಸದಸ್ಯರು ಮುಖ್ಯ ಶಿಕ್ಷಕ ಪುರಕನ ಘೋರಿ ಸ್ವಾಗತಿಸಿ, ನಿರೂಪಿಸಿದರು.