ಸಾರಾಂಶ
ಈಶ್ವರ್ ಖಂಡ್ರೆ ಪುತ್ರ, ಸಂಸದ ಸಾಗರ್ ಖಂಡ್ರೆ ಅವರು ಬೆಲ್ಲ, ಬೇಳೆ, ತೆಂಗಿನಕಾಯಿಯಲ್ಲಿ ತುಲಾಭಾರ ಸೇವೆ ನೆರವೇರಿಸಿದರು.
ಕನ್ನಡಪ್ರ ವಾರ್ತೆ ಸುಬ್ರಹ್ಮಣ್ಯ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಅವರು ಕುಟುಂಬ ಸಮೇತರಾಗಿ ಸೋಮವಾರ ರಾತ್ರಿ ಭೇಟಿ ನೀಡಿದರು.ಸುಬ್ರಹ್ಮಣ್ಯಕ್ಕೆ ಆಗಮಿಸಿದ ಸಚಿವರನ್ನು ದೇವಳದ ವತಿಯಿಂದ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಸ್ವಾಗತಿಸಿದರು. ರಾತ್ರಿ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಮಾಡಿದ ಸಚಿವರು, ಮಂಗಳವಾರ ಬೆಳಗ್ಗೆ ದೇವರ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹೊಸಳಿಗಮ್ಮನ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಕ್ಷೇತ್ರದಲ್ಲಿ ಆಶ್ಲೇಷ ಪೂಜೆ ನೆರವೇರಿಸಿದರು. ಈಶ್ವರ್ ಖಂಡ್ರೆ ಪುತ್ರ, ಸಂಸದ ಸಾಗರ್ ಖಂಡ್ರೆ ಅವರು ಬೆಲ್ಲ, ಬೇಳೆ, ತೆಂಗಿನಕಾಯಿಯಲ್ಲಿ ತುಲಾಭಾರ ಸೇವೆ ನೆರವೇರಿಸಿದರು. ಪತ್ನಿ, ಮಗಳು, ಕುಟುಂಬಸ್ಥರು, ಆಪ್ತ ಲಕ್ಷ್ಮೀನಾರಾಯಣ ಈ ಸಂದರ್ಭದಲ್ಲಿ ಜತೆಗಿದ್ದರು. ಕ್ಷೇತ್ರಕ್ಕೆ ಭೇಟಿ ನೀಡಿದ ಸಚಿವರನ್ನು ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಭೇಟಿ ಮಾಡಿ ಸ್ವಾಗತಿಸಿದರು. ಕಾರ್ಯಕರ್ತರು ವಿವಿಧ ಬೇಡಿಕೆಗಳ ಬಗ್ಗೆ ಮನವಿಯನ್ನು ಸಚಿವರಿಗೆ ಸಲ್ಲಿಸಿದರು.