ಹಾಸ್ಟೆಲ್ ವಾರ್ಡನ್ ಮೇಲೆ ಸಚಿವ ಜಮೀರ್ ಫುಲ್‌ ಗರಂ

| Published : May 25 2024, 12:52 AM IST

ಹಾಸ್ಟೆಲ್ ವಾರ್ಡನ್ ಮೇಲೆ ಸಚಿವ ಜಮೀರ್ ಫುಲ್‌ ಗರಂ
Share this Article
  • FB
  • TW
  • Linkdin
  • Email

ಸಾರಾಂಶ

ಸಚಿವ ಜಮೀರ್ ಅಹಮದ್ ಖಾನ್ ಚಿತ್ರದುರ್ಗದ ಅಲ್ಪಸಂಖ್ಯಾತರ ಬಾಲಕಿಯರ ಹಾಸ್ಟೆಲ್ ಗೆ ಭೇಟಿ ನೀಡಿ ಅಹವಾಲು ಆಲಿಸಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಚಿತ್ರದುರ್ಗ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಗೆ ಗುರುವಾರ ರಾತ್ರಿ ಸಚಿವ ಜಮೀರ್ ಅಹಮದ್ ಖಾನ್ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿನ ಅವ್ಯವಸ್ಥೆ ಕಂಡು ವಾರ್ಡನ್ ನ ತೀವ್ರ ತರಾಟೆಗೆ ತೆಗೆದುಕೊಂಡರು.ಬೆಂಗಳೂರಿಗೆ ತೆರಳುವ ಮಾರ್ಗದ ಮಧ್ಯೆ ಸರ್ಕಾರಿ ಕಲಾ ಕಾಲೇಜು ಹಿಂಭಾಗದ ಹಾಸ್ಟೆಲ್ ಗೆ ಶಾಸಕ ವೀರೇಂದ್ರ ಪಪ್ಪಿ ಸಂಗಡ ಸಚಿವ ಜಮೀರ್ ಭೇಟಿ ನೀಡಿದಾಗ ತರಕಾರಿ ಇಲ್ಲದ ಊಟ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಅನ್ನದಲ್ಲಿ ಆಗಾಗ ಹುಳು ಕಾಣಿಸಿಕೊಳ್ಳುತ್ತಿವೆ, ರುಚಿಯಾದ ಆಹಾರ ನೀಡುವುದಿಲ್ಲವೆಂದು ವಿದ್ಯಾರ್ಥಿಗಳು ವಾರ್ಡನ್ ಶಿಲ್ಪ ಅವರ ಮೇಲೆ ಆರೋಪದ ಮಳೆಗರೆದರು. ದೂರವಾಣಿ ಮೂಲಕ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳ ಸಂಪರ್ಕಿಸಿದ ಸಚಿವ ಜಮೀರ್ ವಾರ್ಡನ್ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇನ್ನೊಮ್ಮೆ ಹಾಸ್ಟೆಲ್ ಗಳಲ್ಲಿ ಅವ್ಯವಸ್ಥೆ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.