ಮುಳುಬಾಗಿಲು ಮಳಿಗೆಗೆ ಭೇಟಿ ನೀಡಿ ದೋಸೆ ಹಾಕಿದ ಸಚಿವರು..!

| Published : Oct 04 2024, 01:02 AM IST

ಮುಳುಬಾಗಿಲು ಮಳಿಗೆಗೆ ಭೇಟಿ ನೀಡಿ ದೋಸೆ ಹಾಕಿದ ಸಚಿವರು..!
Share this Article
  • FB
  • TW
  • Linkdin
  • Email

ಸಾರಾಂಶ

ದೋಸೆಯನ್ನು ಹಾಕಿ ಎಲ್ಲರಿಗೂ ಶುಭ ಕೋರಿದರು

ಕನ್ನಡಪ್ರಭ ವಾರ್ತೆ ಮೈಸೂರು

ಆಹಾರ ಮೇಳದಲ್ಲಿ ಮುಳುಬಾಗಿಲು ಮಳಿಗೆಗೆ ಸಚಿವ ಕೆ.ಎಚ್. ಮುನಿಯಪ್ಪ ಭೇಟಿ ನೀಡಿ ದೋಸೆ ಹಾಕಿ ಎಲ್ಲರ ಗಮನ ಸೆಳೆದರು.

ಆಹಾರ ಮೇಳ ಉದ್ಘಾಟಿಸಿ ಕಾರಿನಲ್ಲಿ ತೆರಳುತ್ತಿದ್ದ ಸಚಿವರನ್ನು ಮಳಿಗೆಯ ಮಾಲೀಕರು ತಡೆದು ತಮ್ಮ ಅಂಗಡಿಗೆ ಭೇಟಿ ನೀಡುವಂತೆ ಮನವಿ ಮಾಡಿದರು.

ಕಾರಿನಿಂದ ಇಳಿದು ಮುಳುಬಾಗಿಲು ಮಳಿಗೆಗೆ ತೆರಳಿ ಅಂಗಡಿ ಮಾಲೀಕರಿಂದ ಪುಷ್ಪಗುಚ್ಛ ಸ್ವೀಕರಿಸಿ ದೋಸೆಯನ್ನು ಹಾಕಿ ಎಲ್ಲರಿಗೂ ಶುಭ ಕೋರಿದರು. ನಂತರ ಪಕ್ಕದಲ್ಲೇ ಇದ್ದ ಬಂಗಾರಪೇಟೆ ಚಾಟ್ಸ್ ಮಳಿಗೆಗೆ ಭೇಟಿ ನೀಡಿ ಎಲ್ಲರಿಗೂ ಪಾನಿಪುರಿಗಳನ್ನು ವಿತರಿಸಿ, ಶುಭ ಕೋರಿ ಅಲ್ಲಿಂದ ತೆರಳಿದರು.

ಇದೇ ವೇಳೆ ಅಧಿಕಾರಿ ಕುಮುದಾ ಇದ್ದರು.