ಸಚಿವ, ಸಂಸದರ ಗೈರು- ಅಧಿಕಾರಿಗಳಿಂದ ತಂಬಾಕು ಹರಾಜು ಪ್ರಕ್ರಿಯೆ ಆರಂಭ

| Published : Oct 08 2024, 01:06 AM IST

ಸಚಿವ, ಸಂಸದರ ಗೈರು- ಅಧಿಕಾರಿಗಳಿಂದ ತಂಬಾಕು ಹರಾಜು ಪ್ರಕ್ರಿಯೆ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಭೂಮಿಗೆ ಬಿತ್ತಿದ ತಂಬಾಕು ಬೆಳೆ ನಿರೀಕ್ಷಿತ ಮಟ್ಟದಲ್ಲಿ ಬಾರದೆ ತಂಬಾಕು ಬೆಳೆ ಕುಂಠಿತವಾಗಿ ರೈತರು ಕಂಗಾಲಾ

ಕನ್ನಡಪ್ರಭ ವಾರ್ತೆ ಬೆಟ್ಟದಪುರಪಿರಿಯಾಪಟ್ಟಣ ತಾಲೂಕಿನ ಕಕ್ಕುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಇಂದು ಹಾರಾಜು ಪ್ರಕ್ರಿಯೆ ಆರಂಭಗೊಂಡಿದ್ದು, ಪಶುಪಾಲನಾ ಮತ್ತು ರೇಷ್ಮೆ ಖಾತೆ ಸಚಿವ ಕೆ .ವೆಂಕಟೇಶ್ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೈರು ಹಾಜರಿಯಲ್ಲಿ ತಂಬಾಕು ಮಂಡಳಿ ಅಧಿಕಾರಿ, ಮಾಜಿ ಶಾಸಕರು ಪಿರಿಯಾಪಟ್ಟಣದ ಕಗ್ಗುಂಡಿ ತಂಬಾಕು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.ನಾಡ ಹಬ್ಬ ದಸರಾ ಕಾರ್ಯಕ್ರಮದಲ್ಲಿ ಸಚಿವ ಕೆ. ವೆಂಕಟೇಶ್ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಖಾಸಗಿ ದಸರಾ ದರ್ಬಾರ್ ನಲ್ಲಿ ಪಾಲ್ಗೊಂಡಿರುವುದರಿಂದ ತಂಬಾಕು ಹರಾಜು ಪ್ರಕ್ರಿಯೆಗೆ ಬಾರದೆ ದೂರ ಉಳಿದ ಹಿನ್ನೆಲೆ ತಂಬಾಕು ಮಂಡಳಿ ಉಪಾಧ್ಯಕ್ಷ ಎಚ್.ಸಿ. ಬಸವರಾಜು, ನಿರ್ದೇಶಕರು ಹಾಗೂ ಮಾಜಿ ಶಾಸಕ ಕೆ. ಮಹದೇವ್ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದರು.ಕೆ. ಮಹದೇವ್ ಮಾತನಾಡಿ, ತಾಲೂಕಿನಾದ್ಯಂತ ಅತಿವೃಷ್ಟಿ ಸಂಭವಿಸಿದ ರೈತರು ತತ್ತರಿಸಿ ಹೋಗಿದ್ದು, ಭೂಮಿಗೆ ಬಿತ್ತಿದ ತಂಬಾಕು ಬೆಳೆ ನಿರೀಕ್ಷಿತ ಮಟ್ಟದಲ್ಲಿ ಬಾರದೆ ತಂಬಾಕು ಬೆಳೆ ಕುಂಠಿತವಾಗಿ ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ತಂಬಾಕು ಮಂಡಳಿ ರೈತರ ನೆರವಿಗೆ ಧಾವಿಸಿ ಸೂಕ್ತ ಬೆಂಬಲ ಬೆಲೆ ನೀಡಬೇಕು ಇಂದು ಹರಾಜು ಪ್ರಕ್ರಿಯೆ ಆರಂಭವಾಗಿ ಆರಂಭಿಕವಾಗಿ ಪ್ರತಿ ಕೆಜಿಗೆ ರೂ. 291 ನೀಡಲಾಗಿದೆ ಆದರೆ ಇದು ರೈತನ ಪರಿಶ್ರಮಕ್ಕೆ ತಕ್ಕ ಬೆಲೆ ಅಲ್ಲ, ಹಾಗಾಗಿ ಪ್ರತಿ ಕೆಜಿಗೆ ಕನಿಷ್ಠ ರು. 400 ಸರಾಸರಿ ಬೆಲೆ ನೀಡಿದರೆ ಮಾತ್ರ ರೈತನಿಗೆ ನೆಮ್ಮದಿ ಸಿಗುತ್ತದೆ ಎಂದರು. ತಂಬಾಕು ಮಂಡಳಿ ಅಧೀಕ್ಷಕ ಪ್ರಭಾಕರನ್ ಮಾತನಾಡಿ ಇಂದು ಪ್ರಾರಂಭದ ದಿನ ಐದು ಕಂಪನಿಗಳು ಖರೀದಿಯಲ್ಲಿ ಭಾಗವಹಿಸಿದ್ದು, 9 ಬ್ಯಾಂಕ್ ಗಳು ಗ್ಯಾರೆಂಟಿಯ ಬಗ್ಗೆ ಬೆಂಬಲ ಸೂಚಿಸಿವೆ. ಇನ್ನು ಕೆಲವು ದಿನಗಳಲ್ಲಿ ಆಂಧ್ರಪ್ರದೇಶ ಹರಾಜು ಮಾರುಕಟ್ಟೆ ಮುಗಿಯಲಿದ್ದು, ನಂತರ 21 ಕಂಪನಿಗಳು ತಂಬಾಕು ಖರೀದಿಯಲ್ಲಿ ಭಾಗವಹಿಸಲಿವೆ. ಆದ್ದರಿಂದ ತಂಬಾಕು ಖರೀದಿಗಾರರು ತಂಬಾಕು ಬೆಲೆಯಲ್ಲಿ ಯಾವುದೇ ತಾರತಮ್ಯ ಮಾಡಬಾರದು ಎಂದರು. ಉತ್ತಮ ಮಾರುಕಟ್ಟೆ ನಿರೀಕ್ಷೆ:ಕಳೆದ ಬಾರಿ 200 ರೂ.ಗಳಿಗೆ ಆರಂಭವಾಗಿ 206 ರೂ.ಗಳ ವರೆಗೆ ಮಾರಾಟವಾಗಿದ್ದು, ಈ ಬಾರಿ ತಂಬಾಕು 200 ರೂ.ಗಳಿಗೆ ಆರಂಭ ಕಂಡಿರುವುದು ರೈತರಿತೆ ತುಸು ಸಮಾಧಾನ ತಂದಿದೆ. ಬ್ರೆಜಿಲ್ ಮತ್ತು ಜಿಂಬಾಬ್ವೆ ದೇಶಗಳಲ್ಲಿ 50 ಮಿಲಿಯನ್ ತಂಬಾಕು ಅಧಿಕವಾಗಿರುವುದರಿಂದ ಗುಣಮಟ್ಟದ ತಂಬಾಕು ಮಾರಾಟಕ್ಕೆ ಅವಕಾಶವಿದೆ. ಅಲ್ಲದೆ ಈ ಬಾರಿ ಪೈಸೆ ಏರಿಕೆಯನ್ನು ತಡೆದು 1 ರು. ಗಳ ಪೂರ್ಣ ಪ್ರಮಾಣದ ಏರಿಕೆಗೆ ಮಾತ್ರ ಅವಕಾಶ ಕಲ್ಪಿಸಿದ್ದು ಇದು ರೈತರಿಗೆ ಲಾಭ ತರಲಿದೆ.ನಿರ್ದೇಶಕ ವಿಕ್ರಂ ರಾಜ್, ಹರಾಜು ಅಧೀಕ್ಷಕರಾದ ಐಸಕ್ ವರ್ಣಿತ್, ರಾಮ್ ಮೋಹನ್ ಚೂರಿ, ರೈತರು ಇದ್ದರು.