ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ರಾಜ್ಯದಾದ್ಯಂತ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿವೆ. ಹಲವಡೆ ಕಟ್ಟಡ ಕಾಮಗಾರಿ ಸಂಪೂರ್ಣಗೊಂಡಿದ್ದು, ಇನ್ನು ಕೆಲವೆಡೆ ಪ್ರಗತಿಯಲ್ಲಿವೆ, ರಾಜ್ಯದ ಸಾರಿಗೆ ಇಲಾಖೆಯ ಪ್ರತಿ ಅಧೀನ ಕಚೇರಿಗೂ ಸ್ವಯಂ ಚಾಲನಾ ಪರೀಕ್ಷಾ ಪಥ ನಿರ್ಮಿಸುವ ಉದ್ದೇಶವಿದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.ಕೆಜಿಎಫ್‌ನಲ್ಲಿ ನೂತನ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷೆ ಪಥಗಳ ಕೇಂದ್ರವನ್ನು ಗುರುವಾರ ಸಚಿವರು ಉದ್ಘಾಟಿಸಿ ಮಾತನಾಡಿದರು,
ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿವಿದ್ಯುನ್ಮಾನ ವಾಹನ ಚಾಲನೆಗೂ ಚಾಲನಾ ಪರವಾನಗಿ ಪಡೆಯಲು ಇನ್ನು ಮುಂದೆ ಇಲ್ಲಿಗೆ ಬರಬೇಕು, ಜನರು ಇಲ್ಲಿಗೆ ಬರೋವುದರಿಂದ ಅರ್ಥಿಕ ಚಟುವಟಿಕೆ ಹೆಚ್ಚಾಗಿ ಹೊಸ ಉದ್ಯಮಗಳೂ ಹುಟ್ಟಿಕೊಳ್ಳುತ್ತವೆ, ಹೊಸ ಕೇಂದ್ರದಲ್ಲಿ ಉದ್ಯೋಗಾವಕಾಶ ಇದ್ದರೆ ಅಧಿಕಾರಿಗಳು ಮೊದಲಿಗೆ ಸ್ಥಳೀಯರನ್ನು ಪರಿಗಣಿಸಬೇಕೆಂದು ತಿಳಿಸಿದರು.ಬಂಗಾರಪೇಟೆ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಬೆಂಗಳೂರು ಕೆಎಸ್‌ಆರ್‌ಟಿಸಿ ವಿಭಾಗಕ್ಕೆ ನೂತನ ಬಸ್‌ಗಳನ್ನು ಕೊಳ್ಳಲು ಹಣಕಾಸು ನಿಗಮದಿಂದ ೫೦೦ ಕೋಟಿ ರೂಪಾಯಿಗಳ ಸಾಲವನ್ನು ಸಾರಿಗೆ ಇಲಾಖೆಗೆ ನೀಡಲು ಮುಂದೆ ಬಂದಿರುವುದಾಗಿ ತಿಳಿಸಿದರು.ಕೆಎಚ್ಚೆಂಗೆ ಜಿಲ್ಲಾ ಉಸ್ತುವಾರಿ ನೀಡಿಸತತ ೭ ಬಾರಿ ಸಂಸದರಾಗಿದ್ದ ಬಾಗೂ ಈಗ ರಾಜ್ಯದಲ್ಲಿ ಸಚಿವರಾಗಿರುವ ಕೆ.ಎಚ್.ಮುನಿಯಪ್ಪ ಅವರನ್ನು ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡುವಂತೆ ಎಸ್.ಎನ್.ನಾರಾಯಣಸ್ವಾಮಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು, ಜಿಲ್ಲೆಯ ನಾಡಿ ಮಿಡಿತ ಗೊತ್ತಿರುವ ಕೆ.ಎಚ್.ಮುನಿಯಪ್ಪನವರ ಅಪಾರ ಅನುಭವ, ಹಿರಿಯ ಮತ್ಸದಿ ಒಬ್ಬರು ನಮಗೆ ಬೇಕಿದ್ದು ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಪೂರಕವಾಗಿ ಅವರು ಕೆಲಸ ಮಾಡಲಿದ್ದಾರೆಂದು ಹೇಳಿದರು.
ಅಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಕೋಲಾರ ಜಿಲ್ಲೆಯ ಶ್ರೀನಿವಾಪುರದಲ್ಲಿ ರೈಲ್ವೆ ಕೋಚ್ ಕಾರ್ಖಾನೆಗೆ ತಾವು ರೈಲ್ವೆ ಸಚಿವನಾಗಿದ್ದ ಸಂದರ್ಭದಲ್ಲಿ ಅನುಮತಿ ನೀಡಿದ್ದು, ರೈಲ್ವೆ ಕೋಚ್ ಕಾರ್ಖಾನೆ ಪ್ರಾರಂಭಕ್ಕೆ ಸಂಬಂದಿಸಿದಂತೆ ಸಂಸದ ಮಲ್ಲೇಶ್ ಬಾಬು ಅವರು ಸಂಸತ್‌ನಲ್ಲಿ ಧ್ವನಿಯತಿ ಜಿಲ್ಲೆಯಲ್ಲಿ ರೈಲ್ವೆ ಕೋಚ್ ಕಾರ್ಖಾನೆ ಪ್ರಾರಂಭಿಸಲು ಒತ್ತಡ ಹೇರಬೇಕೆಂದು ತಿಳಿಸಿದರು.ಜಿಲ್ಲೆಗೆ ಎತ್ತಿನ ಹೊಳೆ ನೀರುಕೋಲಾರ ಜಿಲ್ಲೆಯ ಪ್ರತಿ ತಾಲೂಕಿಗೆ ಎತ್ತಿನ ಹೊಳೆಯ ಕುಡಿವ ನೀರನ್ನು ಅತಿ ಶೀಘ್ರದಲ್ಲೇ ತರುವುದಾಗಿ ಕೆ.ಎಚ್.ಮುನಿಯಪ್ಪ ತಿಳಿಸಿದರು, ಕುಡಿವ ನೀರಿಗೆ ಸಂಬಂಧಿಸದಂತೆ ಈಗಾಗಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದು, ಯೋಜನೆ ಅಗತ್ಯವಿರುವ ಹಣಕಾಸಿನ ನೆರವನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಸಕಿ ರೂಪಕಲಾಶಶಿಧರ್, ಕೆಜಿಎಫ್ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಗೆ ೫ ಎಕರೆ ಭೂಮಿಯನ್ನು ೧೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಚೇರಿಯ ಡಿಜಿಟಲ್ ಡ್ರೈವಿಂಗ್ ಟ್ರ್ಯಾಕ್ ಅನ್ನು ಸಾರ್ವಜನಿಕರಿಗೆ ಅರ್ಪೀಸಿದ್ದೇವೆ, ಕಳೆದ ೪೭ ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಚೇರಿ ನಡೆಯುತ್ತಿತ್ತು, ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿದೆ ಎಂದರು.
ಶಿಷ್ಟಚಾರ ಪಾಲಿಸದ ಅಧಿಕಾರಿಗಳುಸಾರಿಗೆ ಕಚೇರಿ ಉದ್ಘಾಟನೆ ಸಮಾರಂಭ ಸರ್ಕಾರಿ ಕಾರ್ಯಕ್ರಮದ ಬದಲು ಕಾಂಗ್ರೆಸ್ ಕಾರ್ಯಕ್ರಮವಾಗಿ ಬದಲಾಗಿತ್ತು. ಸಮಾರಂಭದಲ್ಲಿ ಬಹುತೇಕ ಅಧಿಕಾರಿಗಳಿಗೆ ಆಸನದ ವ್ಯವಸ್ಥೆ ಇಲ್ಲದೆ ನಿಂತುಕೊಂಡಿದ್ದರು. ಸ್ವಾಗತ ಬಾಷಣವಂತೂ ಗೊಂದಲವಾಗಿತ್ತು, ಯಾರು ಯಾರಿಗೆ ಸ್ವಾಗತ ಮಾಡುತ್ತಿದ್ದಾರೆಂದು ತಿಳಿಯದಂತಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಪಂ ಸಿಇಒ ಪ್ರವೀಣ್ ವಿ ಬಾಗೇವಾಡಿ, ಎಸ್ಪಿ ಶಿವಾಂಸು ರಜಪೂತ್, ಸಾರಿಗೆ ಇಲಾಖೆಯ ಆಯುಕ್ತರಾದ ಎ.ಎಂ.ಯೋಗೇಶ್, ಅಪರ ಸಾರಿಗೆ ಆಯುಕ್ತ ಉಮಾಶಂಕರ್, ಎಂ.ಪಿ. ಓಂಕಾರೇಶ್ವರಿ, ಎನ್.ಜಿ.ಗಾಯತ್ರಿದೇವಿ, ಅಪರ ಸಾರಿಗೆ ಆಯುಕ್ತ ಮಲ್ಲಿಕಾರ್ಜುನ ಸಹಾಯಕ ಪ್ರಾದೇಶಿಕ ಸಾರಿಗೆ ಆಯುಕ್ತ ಗಜೇಂದ್ರಬಾಬು ಮತ್ತಿತರರು ಉಪಸ್ಥಿತರಿದ್ದರು.