ಸಚಿವ ಖಂಡ್ರೆ ಜನ್ಮದಿನ: ಸಿದ್ಧಗಂಗಾ ಮಠದಲ್ಲಿ ವಿಶೇಷ ಪೂಜೆ

| Published : Jan 16 2024, 01:46 AM IST

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ 61ನೇ ಜನ್ಮ ದಿನದ ನಿಮಿತ್ತ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಲಿಂ.ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಭಾಲ್ಕಿ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ 61ನೇ ಜನ್ಮ ದಿನದ ನಿಮಿತ್ತ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಲಿಂ.ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಚಿವ ಈಶ್ವರ ಖಂಡ್ರೆ ಅವರ ಅವಿರತ ಶ್ರಮ, ಪ್ರಾಮಾಣಿಕ ಪ್ರಯತ್ನದಿಂದ ಭಾಲ್ಕಿ ತಾಲೂಕು ಮತ್ತು ಬೀದರ್‌ ಜಿಲ್ಲೆ ತುಂಬಾ ಪ್ರಗತಿ ಸಾಧಿಸಿವೆ. ಅವರಿಂದ ರಾಜ್ಯಕ್ಕೆ ಇನ್ನೂ ಹೆಚ್ಚಿನ ಸೇವೆ ಸಿಗುವಂತಾಗುವ ನಿಟ್ಟಿನಲ್ಲಿ ಭಗವಂತ ಸಚಿವ ಖಂಡ್ರೆ ಅವರಿಗೆ ಆಯುಷ್ಯ, ಆರೋಗ್ಯ, ಭಾಗ್ಯ ನೀಡಿ ಕಾಪಾಡಲಿ ಎಂದು ವಿಶೇಷ ಪೂಜೆ ನಡೆಸಿ ದೇವರಲ್ಲಿ ಪ್ರಾರ್ಥಿಸಿ ಕೊಂಡಿದ್ದೇವೆ ಎಂದು ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಪಾಟೀಲ್‌ ತೇಗಂಪೂರ ತಿಳಿಸಿದರು.

ಇದೇ ಸಂದರ್ಭದಲ್ಲಿ ಸಿದ್ದಗಂಗಾ ಮಠದ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಅವರು ಈಶ್ವರ ಖಂಡ್ರೆ ಅವರಿಗೆ ಜನ್ಮದಿನದ ಶುಭ ಕೋರಿ ಅವರ ಸಾಮಾಜಿಕ, ಶೈಕ್ಷಣಿಕ ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಮುಂದುವರಿಸಿ ನೂರು ಕಾಲ ಬಾಳಲಿ ಎಂದು ಆಶೀರ್ವದಿಸಿದರು.

ಹಲಬರ್ಗಾ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ರಜನಿಕಾ ಚನ್ನಬಸಪ್ಪ ಪಾಟೀಲ್‌, ಸದಸ್ಯರಾದ ದತ್ತಾತ್ರಿ ಪಾಟೀಲ್‌, ಎನ್‌ಎಸ್‌ಯುಐ ಜಿಲ್ಲಾ ಉಪಾಧ್ಯಕ್ಷ ಇಮ್ರಾನ್ ಖಾನ್‌, ಪ್ರಮುಖರಾದ ಪಿಂಟು ಠಾಕೂರ್‌, ಘಾಳೆಪ್ಪ ನಾಗೂರೆ ಹಾಗೂ ಮಾರುತಿ ಸೂರ್ಯವಂಶಿ ಇದ್ದರು.