ಸಾರಾಂಶ
ಧಾರವಾಡ: ಬರುವ ಸೆ. 6 ರಂದು ಖುದ್ದಾಗಿ ತಾವೇ ಹುಬ್ಬಳ್ಳಿಯಿಂದ ಧಾರವಾಡದ ವರೆಗಿನ ಬಿಆರ್‌ಟಿಎಸ್ ಮಾರ್ಗದಲ್ಲಿ ಸಂಚರಿಸಿ ಸಮಸ್ಯೆಗಳ ವಾಸ್ತವತೆಯನ್ನು ಪರಿಶೀಲಿಸುವುದಾಗಿ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಬಿಆರ್‌ಟಿಎಸ್ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸೋಮವಾರ ಧಾರವಾಡ ಧ್ವನಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ನಡೆದ ಚರ್ಚೆಯಲ್ಲಿ ಅವರು ಮಾತನಾಡಿದರು.ಪ್ರಮುಖವಾಗಿ ಆಯ್ದ ಕೆಲವು ಕಡೆ ಮಿಶ್ರವಾಹನ ಸಂಚಾರಕ್ಕೆ ಅನುಕೂಲ, ಪಾದಚಾರಿಗಳು ಮತ್ತು ಲಘು ವಾಹನಗಳು ದಾಟಲು ಮಾರ್ಗ ನಿರ್ಮಾಣ, ಬಿಆರ್‌ಟಿಎಸ್ ಜಂಕ್ಷನ್‌ಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯ, ರಸ್ತೆಯಲ್ಲಿ ನೀರು ನಿಲುಗಡೆಯಿಂದ ಆಗುವ ಅಡಚಣೆ, ನವಲೂರ ಮತ್ತು ಉಣಕಲ್ಲ ಬಳಿಯ ಸೇತುವೆಗಳ ದುರಸ್ತಿ, ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ ಬಸ್ ಸೌಲಭ್ಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಚಿವರು ಪ್ರಸ್ತಾಪಿಸಿದರು.
ಈಗಿರುವ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಅನೂಕೂಲ ಒದಗಿಸಲು ಬೇಕಾಗಿರುವ ಮಾರ್ಗೋಪಾಯಗಳು, ಅವಶ್ಯವಿರುವ ಸೌಲಭ್ಯ, ಆರ್ಥಿಕ ನೆರವು ಮತ್ತು ಸರ್ಕಾರದ ಹಂತದಲ್ಲಿ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸುವ ನಿಟ್ಟಿನಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಸಚಿವರು ಬಿಆರ್‌ಟಿಎಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ, ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ್ ಎಂ, ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕಿ ಸಾವಿತ್ರಿ ಕಡಿ, ಮುಖಂಡರಾದ ದೀಪಕ ಚಿಂಚೋರೆ, ಗುರುರಾಜ ಹುಣಶಿಮರದ, ಪಾಲಿಕೆ ಸದಸ್ಯ ಡಾ. ಮಯೂರ ಮೋರೆ, ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ ಇದ್ದರು.
)
;Resize=(128,128))
;Resize=(128,128))