ಸಾರಾಂಶ
ಸಚಿವರು ಹೊಸ ಮೀನು ಮಾರುಕಟ್ಟೆ ಸೆ.1ರಿಂದ ಆರಂಭಗೊಂಡ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದರು.
ಭಟ್ಕಳ: ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರು ಶುಕ್ರವಾರ ಬೆಳಿ ಪಟ್ಟಣದ ಸಂತೆ ಮಾರುಕಟ್ಟೆ ಸನಿಹದ ಮೀನು ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಸಚಿವರು ಹೊಸ ಮೀನು ಮಾರುಕಟ್ಟೆ ಸೆ.1ರಿಂದ ಆರಂಭಗೊಂಡ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದರು. ಹೊಸ ಮೀನು ಮಾರುಕಟ್ಟೆ ಕಟ್ಟಡವನ್ನು ಸಂಪೂರ್ಣ ವೀಕ್ಷಿಸಿದ ನಂತರ ಮಾತನಾಡಿದ ಅವರು. ಈ ಹಿಂದೆ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಕರಾವಳಿ ಪ್ರಾಧಿಕಾರದಿಂದ ಸುಸಜ್ಜಿತ ಮೀನು ಮಾರುಕಟ್ಟೆ ಮಂಜೂರಿಸಲಾಗಿತ್ತು. ಆದರೆ ಇದರ ಉದ್ಘಾಟನೆಯನ್ನು ಬೇರೆಯವರು ಮಾಡಿದ್ದರು. ಅಲ್ಲಿಂದ ಇಲ್ಲಿಯ ವರೆಗೂ ಇದು ಆರಂಭ ಆಗಿರಲಿಲ್ಲ. ಮೀನು ಮಾರುಕಟ್ಟೆ ಕಟ್ಟಡ ಸುಸಜ್ಜಿತವಾಗಿದ್ದು, ಮೀನು ಮಾರಾಟಕ್ಕೆ ಅನುಕೂಲವಾಗಿದೆ. ಮೀನು ಮಾರುಕಟ್ಟೆಗೆ ಸಂಬಂಧಿಸಿದಂತೆ ಇರುವ ಗೊಂದಲವನ್ನು ನಿವಾರಿಸಬೇಕಿದೆ ಎಂದರು.ಇದೇ ಸಂದರ್ಭದಲ್ಲಿ ಸಂತೆ ಮಾರುಕಟ್ಟೆ ಕಟ್ಟಡವನ್ನೂ ಗಮನಿಸಿದ ಅವರು ಈ ಕಟ್ಟಡವನ್ನೂ ಸದ್ಭಳಕೆಗೆ ಮಾಡಿಕೊಳ್ಳಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮೀನು ಮಾರಾಟಗಾರರು ಹೊಸ ಮೀನು ಮಾರುಕಟ್ಟೆ ಹಿಂಬದಿಗೆ ಇಂಟರಲಾಕ್ ಅಳವಡಿಸಿಕೊಡುವಂತೆ ಬೇಡಿಕೆ ಇಟ್ಟರು.
ಮೀನುಗಾರಿಕಾ ಸಚಿವ ಮಂಕಾಳ ಎಸ್ ವೈದ್ಯ ಅವರು ಭಟ್ಕಳ ಪಟ್ಟಣದ ಸಂತೆ ಮಾರುಕಟ್ಟೆಯ ಮೀನು ಹೊಸ ಮೀನು ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.