ವಿಜಯಪುರ: ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕೆಎಚ್ಎಂ ಯುವ ಕಾಂಗ್ರೆಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಗಳನ್ನು ಪ್ರತಿಯೊಬ್ಬರು ಜೀವನದ ಒಂದು ಭಾಗವಾಗಿ ಅಳವಡಿಸಿಕೊಳ್ಳಬೇಕು. ಸೋಲು-ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುವ ಮನಸ್ಥಿತಿಯನ್ನು ಕ್ರೀಡಾಪಟುಗಳು ಬೆಳೆಸಿಕೊಳ್ಳಬೇಕು. ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಎಲ್ಲಾ ತಂಡಗಳಿಗೂ ಶುಭ ಕೋರಿದರು.

ಬಯಪ ಸದಸ್ಯ ರಾಮಚಂದ್ರಪ್ಪ, ಪುರಸಭೆ ಸದಸ್ಯ ಎಂ.ಸತೀಶ್ ಕುಮಾರ್, ವಿಜಯಪುರ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್, ವಿಜಯಪುರ ಟೌನ್ ಯುವ ಕಾಂಗ್ರೆಸ್ ಅಧ್ಯಕ್ಷ ಭಾನುಚಂದ್ರ, ಉಪಾಧ್ಯಕ್ಷ ಇಮ್ದಾದ್, ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್, ಮುಖಂಡರಾದ ಕೆ.ಎಂ.ಮಧು, ಸೈಫುಲ್ಲಾ, ನಂಜಣ್ಣ, ಮಂಜುನಾಥ್, ಶ್ರೀನಿವಾಸ್, ಮಹೇಶ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ನಾಗೇಶ್, ತಾಲೂಕು ಅಧ್ಯಕ್ಷ ಸಾಗರ್ ಇತರರಿದ್ದರು.

ಬಿಜ್ಜವರ ತಂಡಕ್ಕೆ ಪ್ರಥಮ:

ಪಂದ್ಯಾವಳಿಯಲ್ಲಿ ರಂಗನಾಥಪುರ, ಚಂದೇನಹಳ್ಳಿ, ಕೊಮ್ಮಸಂದ್ರ, ಬಿಜ್ಜವರ, ವೆಂಕಟಗಿರಿಕೋಟೆ, ದಂಡಿಗಾನಹಳ್ಳಿ, ಗೆಜ್ಜೆಕುಪ್ಪೆ, ಗೊಡ್ಲುಮುದ್ದೇನಹಳ್ಳಿ, ಮುದುಗುರ್ಕಿ ಗ್ರಾಮದ ತಂಡಗಳು ಭಾಗವಹಿಸಿದ್ದವು. ಬಿಜ್ಜವರ ತಂಡ ಗೆಲುವು ಸಾಧಿಸಿತು. ಪಂದ್ಯಾವಳಿಯಲ್ಲಿ ೨೦೦ಕ್ಕೂ ಹೆಚ್ಚು ತಂಡಗಳು ಭಾಗವಹಿಸಿತ್ತು.