ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಪರ ಸಚಿವ ನಾಗೇಂದ್ರ ಭರ್ಜರಿ ಪ್ರಚಾರ

| Published : Apr 24 2024, 02:26 AM IST

ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಪರ ಸಚಿವ ನಾಗೇಂದ್ರ ಭರ್ಜರಿ ಪ್ರಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಚಾರದ ವೇಳೆ ಮಾತನಾಡಿದ ಸಚಿವ ನಾಗೇಂದ್ರ, ಕಾಂಗ್ರೆಸ್ ಸರ್ಕಾರ ದೀನ-ದಲಿತರ ಹಾಗೂ ಶೋಷಿತರು, ಬಡವರ ಪರವಾಗಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಹೇಳಿದಂತೆ ಭಾಗ್ಯಗಳನ್ನು ನಾಡಿನ‌ ಜನತೆಗೆ ನೀಡುವ ಮೂಲಕ ನುಡಿದಂತೆ ನಡೆದುಕೊಂಡಿದ್ದೇವೆ ಎಂದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರು ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ ಪರ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬೆಳಗಲ್ ತಾಂಡಾ, ಬೆಳಗಲ್ ಹರಗಿನಡೋಣಿ, ಜಾನೆಕುಂಟೆ ಗ್ರಾಮಗಳಲ್ಲಿ ಭರ್ಜರಿ ಮತ ಪ್ರಚಾರ ನಡೆಸಿದರು.

ಈ ಮಾತನಾಡಿದ ಸಚಿವ ನಾಗೇಂದ್ರ, ಕಾಂಗ್ರೆಸ್ ಸರ್ಕಾರ ದೀನ-ದಲಿತರ ಹಾಗೂ ಶೋಷಿತರು, ಬಡವರ ಪರವಾಗಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಹೇಳಿದಂತೆ ಭಾಗ್ಯಗಳನ್ನು ನಾಡಿನ‌ ಜನತೆಗೆ ನೀಡುವ ಮೂಲಕ ನುಡಿದಂತೆ ನಡೆದುಕೊಂಡಿದ್ದೇವೆ. ಇದೀಗ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿದ್ದು, ಪಕ್ಕದ ಸಂಡೂರು ಕ್ಷೇತ್ರದ ಶಾಸಕ ತುಕಾರಾಂ ಅವರು ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ತುಂಬಾ ಸೌಮ್ಯ ಸ್ವಭಾವ ಉತ್ತಮ ನಡವಳಿಕೆಯುಳ್ಳ ತುಕಾರಾಂ ಅವರಿಗೆ ಮತ ನೀಡುವ ಮೂಲಕ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬಳ್ಳಾರಿ ಜಿಲ್ಲೆಯ ಸಮಸ್ಯೆಗಳ ಕುರಿತು ಸಂಸತ್‌ನಲ್ಲಿ ಧ್ವನಿ ಎತ್ತಲು ಈ. ತುಕಾರಾಂ ಅವರು ಸಮರ್ಥ ವ್ಯಕ್ತಿಯಾಗಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಚುನಾಯಿಸುವುದು ಅಗತ್ಯವಿದೆ. ರಾಜ್ಯ ಸರ್ಕಾರದ‌ ಗ್ಯಾರೆಂಟಿ ಜೊತೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ವರ್ಷಕ್ಕೆ ಒಂದು ಕುಟುಂಬಕ್ಕೆ ಒಂದು ಲಕ್ಷ ಗ್ಯಾರೆಂಟಿ ಯೋಜನೆಯ ಹಣ ದೊರೆಯಲಿದೆ ಎಂದು ತಿಳಿಸಿದರು.

ಪ್ರಚಾರ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಮಹಿಳಾ‌ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ, ಪಕ್ಷದ ಮುಖಂಡರಾದ ಸಣ್ಣಬಸವರಾಜ್, ಮಹಾರುದ್ರಗೌಡ‌‌‌‌, ಎ.ಮಾನಯ್ಯ, ವೆಂಕಟೇಶ್ ಪ್ರಸಾದ್,

ವೆಂಕಟರಾವ್ ನಾನಿ, ಗೋವರ್ಧನರೆಡ್ಡಿ, ಹೊನ್ನಪ್ಪ, ಹೊನ್ನೂರಪ್ಪ, ಪಿ.ಜಗನ್ನಾಥ, ಎಲ್.ಮಾರೆಣ್ಣ, ಮುದಿ ಮಲ್ಲಯ್ಯ, ನಾಗಭೂಷಣಗೌಡ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಸರ್ಕಾರದ ಗ್ಯಾರಂಟಿ ಯೋಜನೆ ಸೇರಿದಂತೆ ಬಡವರ ಪರವಾದ ನಿಲುವುಗಳನ್ನು ಮೆಚ್ಚಿ ಸಚಿವ ಬಿ.ನಾಗೇಂದ್ರ ಅವರ ಸಮ್ಮುಖದಲ್ಲಿ ಬೆಳಗಲ್ ಗ್ರಾಮದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸೇರಿದರು.