ಸಾರಾಂಶ
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಶ್ರೀಮಹಾಲಕ್ಷ್ಮೀ ದೇವಸ್ಥಾನಕ್ಕೆ ಕೇಂದ್ರೀಯ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕುಟುಂಬ ಸಮೇತರಾಗಿ ಭೇಟಿ ನೀಡಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಶ್ರೀಮಹಾಲಕ್ಷ್ಮೀ ದೇವಸ್ಥಾನಕ್ಕೆ ಕೇಂದ್ರದ ಸಂಸದೀಯ ವ್ಯವಹಾರಗಳ ಹಾಗೂ ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ ಜೋಶಿಯವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಅರ್ಚಕರಾದ ಗುರುರಾಜಾಚಾರ್ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಸನ್ಮಾನಿಸಿದರು. ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್ ಗಂಗಾಧರ ನಾಯಕ, ಮುಖಂಡರಾದ ತ್ರಿವಿಕ್ರಮ ಜೋಶಿ, ರಾಮರಾವ್ ಕುಲಕರ್ಣಿ ಗಣೇಕಲ್, ಗಿರೀಶ ಕನಕವೀಡು, ಶರಣಪ್ಪಗೌಡ ಲಕ್ಕುಂದಿ, ಶಿವಪಗೌಡ ಕಲ್ಲೂರು ಹಾಗೂ ಅನೇಕ ಬಿಜೆಪಿ ಮುಖಂಡರು ಇದ್ದರು.ರಸ್ತೆ ಬದಿಯ ಕಬ್ಬಿನ ಯಂತ್ರದಲ್ಲಿ ಕಬ್ಬಿನ ಹಾಲು ತೆಗೆದು ಕುಡಿದ ಕೇಂದ್ರ ಸಚಿವ
ಸಚಿವ ಪ್ರಹ್ಲಾದ್ ಜೋಶಿ ಅವರು ರಸ್ತೆ ಬದಿಯ ಕಬ್ಬಿನ ಗೂಡಂಗಡಿಯಲ್ಲಿ ಕಬ್ಬಿನ ಯಂತ್ರದಲ್ಲಿ ಕಬ್ಬನ್ನು ಹಾಕಿ ತಾವೇ ಹಾಲುನ್ನು ತೆಗೆದು ಕುಡಿದ ಪ್ರಸಂಗ ನಡೆದಿದೆ. ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ತೆರಳಿದ್ದ ಸಚಿವರು ಮರಳಿ ರಾಯಚೂರಿಗೆ ಬರುತ್ತಿದ್ದ ಸಮಯದಲ್ಲಿ ರಸ್ತೆ ಪಕ್ಕದಲ್ಲಿ ಕಬ್ಬಿನ ರಸದ ಅಂಗಡಿಯನ್ನು ನೋಡಿ ಕಾರಿನಿಂದ ಇಳಿದು ತಾವೇ ಕಬ್ಬನ್ನು ಯಂತ್ರದಲ್ಲಿರಿಸಿ ಹಾಲನ್ನು ತೆಗೆದು ಕುಟುಂಬ ಸದಸ್ಯರೊಂದಿಗೆ ಕುಡಿದಿದ್ದಾರೆ. ವಿದೇಶಿ ಪಾನೀಯಗಳ ಬದಲು ನಮ್ಮ ದೇಶದ ಸ್ವಾದ ಕಬ್ಬಿನ ಹಾಲು ಬಲು ಚೆಂದ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡು ವಿಡಿಯೋವನ್ನು ಹಂಚಿಕೊಂಡಿದ್ದಾರೆ.