ಸಾರಾಂಶ
ಬೆಳಗಾವಿ ಜಿಲ್ಲೆ ಕುಡಚಿಯಲ್ಲಿರುವ ರತ್ನಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಸಚಿವ ಆರ್.ಬಿ.ತಿಮ್ಮಾಪೂರ ಪುತ್ರನ ಪಾತ್ರವಿಲ್ಲ ಎಂದು ರತ್ನಾ ಎಂಟರ್ ಪ್ರೈಸಸ್‌ನ ಸುಧಾಕರ ಸಾಲಿಯಾನ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬೆಳಗಾವಿ ಜಿಲ್ಲೆ ಕುಡಚಿಯಲ್ಲಿರುವ ರತ್ನಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಸಚಿವ ಆರ್.ಬಿ.ತಿಮ್ಮಾಪೂರ ಪುತ್ರನ ಪಾತ್ರವಿಲ್ಲ ಎಂದು ರತ್ನಾ ಎಂಟರ್ ಪ್ರೈಸಸ್‌ನ ಸುಧಾಕರ ಸಾಲಿಯಾನ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಬಿಜೆಪಿ ರಾಜ್ಯ ಕಾರ್ಯದರ್ಶಿ ಪಿ.ರಾಜೀವ ಸುಖಾಸುಮ್ಮನೆ ಸಚಿವರು ಹಾಗೂ ಅವರ ಪುತ್ರ ವಿನಯ ವಿರುದ್ಧ ಆರೋಪ ಮಾಡಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ದೂರಿದರು. ದಾಖಲೆ ಸಮೇತ ಸ್ಪಷ್ಟೀಕರಣ ನೀಡಿದ ರತ್ನಾ ಎಂಟರ್ ಪ್ರೈಸಸ್ ಸದಸ್ಯರು, ರತ್ನಾ ರೆಸ್ಟೋರೆಂಟ್ ಇದ್ದಾಗ ವಿನಯ ಪಾಲುದಾರರಾಗಿದ್ದರು. ಆದರೆ ನಾವು ಬಾರ್ ಮಾಡುವ ತೀರ್ಮಾನ ಮಾಡಿದಾಗ ಅವರು ಅದರಿಂದ ಹೊರಗೆ ಬಂದರು. ಹೀಗಾಗಿ ಅವರ ಪಾತ್ರ ಇಲ್ಲ ಎಂದರು.2024ರ ಆಗಸ್ಟ್‌ನಲ್ಲಿ ನಾವು ಬಾರ್ ಪರವಾನಗಿ ಪಡೆಯಲು ಅರ್ಜಿ ಹಾಕಿದ್ದೆ. ಇನ್ನೂ ನಮಗೆ ಪರವಾನಗಿ ದೊರೆಯದ ಕಾರಣ ನ್ಯಾಯಾಲಯದ ಮೊರೆ ಹೋಗಿದ್ದೆ. ತಪ್ಪಾಗಿ ಅರ್ಥೈಸಿಕೊಂಡು ರಾಜೀವ ಹೇಳಿಕೆ ನೀಡಿದ್ದಾರೆ ಎಂದು ದೂರಿದರು.
ಬೆಳಗಾವಿಯ ಕುಡಚಿಯಲ್ಲಿ ಮೊದಲು ರತ್ನಾ ಎಂಟರ್ ಪ್ರೈಸಸ್‌ನಿಂದ ಲಾಡ್ಜ್ ಮಾತ್ರ ಮಾಡಲಾಗಿತ್ತು. ಆಗ ಸಚಿವರ ಪುತ್ರ ನಮ್ಮೊಂದಿಗೆ ಶೇರುದಾರರಾಗಿದ್ರು. ಆದ್ರೆ ಯಾವಾಗ ನಾವು ಬಾರ್ ಮತ್ತು ರೆಸ್ಟೋರೆಂಟ್ ಮಾಡ್ತೀವಿ ಅಂದಾಗ ವಿನಯ ತಿಮ್ಮಾಪೂರ ಶೇರ್ ಹಿಂತೆಗೆದುಕೊಂಡ್ರು. ನಾವು ಬಾರ್ ಲೈಸನ್ಸ್ ಕೇಳುವಾಗ ವಿನಯ ತಿಮ್ಮಾಪೂರ ಫರ್ಮ್ ಸದಸ್ಯ ಆಗಿರಲಿಲ್ಲ. 20-8-2024ಕ್ಕೆ ವಿನಯ ತಿಮ್ಮಾಪೂರ ಫರ್ಮ್‌ನಿಂದ ಹೊರಗುಳಿದ್ರು. ಆಮೇಲೆ 23-8-24ಕ್ಕೆ ಬಾರ್ ಲೈಸೆನ್ಸ್ ಅಪ್ಲೈ ಮಾಡಿದ್ದೀವಿ. ಕಾರಣಾಂತರದಿಂದ ಅರ್ಜಿ ರಿಜೆಕ್ಟ್ ಆಯ್ತು. ನಂತರ 13-2-25ರಂದು ಮತ್ತೆ ಅಪ್ಲೈ ಮಾಡಿದ್ದೀವಿ. ಇದಾದ ನಂತರ ಬಾರ್ ಲೈಸೆನ್ಸ್‌ಗೆ ಸ್ಟೇ ಕೊಟ್ಟಿದ್ದಾರೆ. ಇನ್ನು ಅಧಿಕಾರಿಗಳು ಸಹ ಬಹಳ ತೊಂದರೆ ಕೊಟ್ರು. ಆಗ ರೋಷಿ ಹೋಗಿ ಸಚಿವ ತಿಮ್ಮಾಪೂರ ಬಳಿ ಸಮಸ್ಯೆ ಹೇಳಿಕೊಂಡಿದ್ದೇವೆ. ಆದ್ರೆ ಈಗಲೂ ಬೆಂಗಳೂರಲ್ಲಿ ನಮ್ಮ ಅರ್ಜಿಗೆ ಸ್ಟೇ ಹಾಕಿದ್ದಾರೆ. ಆದ್ರೆ ನಮ್ಮ ಬಾರ್ ಮತ್ತು ರೆಸ್ಟೋರೆಂಟ್ ಲೈಸೆನ್ಸ್‌ಗೂ ಸಚಿವ ತಿಮ್ಮಾಪೂರ ಪುತ್ರನಿಗೂ ಏನು ಸಂಬಂಧ ಇಲ್ಲ. ನಿನ್ನೆ ಮಾಜಿ ಶಾಸಕ ಪಿ.ರಾಜೀವ ಆರೋಪಕ್ಕೆ ಇಂದು ದಾಖಲೆ ಸಮೇತ ಸ್ಪಷ್ಟೀಕರಣ ನೀಡಲು ಬಂದಿದ್ದೇವೆ ಎಂದು ನಗರದಲ್ಲಿ ರತ್ನಾ ಎಂಟರ್ ಪ್ರೈಸಸ್ ಫರ್ಮ್ ಸದಸ್ಯ ರಂಜಿತಕುಮಾರ್ ಶೆಟ್ಟಿ ಹೇಳಿದರು.