ಲಕ್ಕವ್ವದೇವಿ ದರ್ಶನ ಪಡೆದ ಸಚಿವ ಸತೀಶ

| Published : May 18 2024, 12:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಯಮಕನಮರಡಿಹುಕ್ಕೇರಿ ತಾಲೂಕಿನ ಶಿಂಧಿಹಟ್ಟಿ ಗ್ರಾಮದ ಲಕ್ಕವ್ವದೇವಿ (ಲಕ್ಷ್ಮೀದೇವಿ) ದೇವಸ್ಥಾನಕ್ಕೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ದರ್ಶನ ಪಡೆದರು. ನಂತರ ಗ್ರಾಮಕ್ಕೆ ಆಗಮಿಸಿದಾಗ ವಿವಿಧ ವಾದ್ಯಮೇಳದೊಂದಿಗೆ ಸಚಿವರನ್ನು ಬರಮಾಡಿಕೊಳ್ಳಲಾಯಿತು.

ಲಕ್ಕವ್ವದೇವಿ ಮತ್ತು ದ್ಯಾಮವ್ವಾದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ ಜೋಡು ಕುದುರೆ ಗಾಡಿ ಶರ್ಯತ್ತು ಮತ್ತು ಜೋಡು ಎತ್ತುಗಳ ಗಾಡಿ ಶರ್ಯತ್ತುಗಳಲ್ಲಿ ವಿಜೇತರಾದವರಿಗೆ ಸಚಿವರು ಪಾರಿತೋಷಕಗಳನ್ನು ವಿತರಿಸಿದರು.

ಜೋಡು ಎತ್ತುಗಳ ಸ್ಪರ್ಧೆಗಳಲ್ಲಿ ವಿಜೇತರಾದ ಯಲ್ಲಪ್ಪ ರಾಯಪ್ಪ ವಡ್ಡಗೋಳ, ದತ್ತು ಪಾಟೀಲ, ಲಕ್ಷ್ಮಣ ಬಸವರಾಜ ಬಿಲಕಾರ ಹಾಗೂ ಜೋಡು ಕುದರೆಗಳ ಗಾಡಿ ಷರತ್ತುಗಳಲ್ಲಿ ವಿಜೇತರಾದ ಲಕ್ಕಪ್ಪ ಮಗದುಮ್ಮ, ಸಿದ್ದಪ್ಪ ಬೋರಪ್ಪ ರಾಮಗೋನಟ್ಟಿ, ಬಾಳೇಶ ಮೇಲನ್ಮಟ್ಟಿ, ಇವರುಗಳಿಗೆ ಸಚಿವ ಸತೀಶ ಜಾರಕಿಹೊಳಿಯವರು ಪಾರಿತೋಷಕಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಬಸವರಾಜ ಮಟಗಾರ, ನ್ಯಾಯವಾದಿ ಗಂಗಾಧರ ಗವತಿ, ಬಸವರಾಜ ಪಾಟೀಲ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಮಂಜುನಾಥ ಪಾಟೀಲ, ಮಹಾಂತೇಶ ಮಗದುಮ್ಮ, ನಳಿನಾ ದಾಮೋದರನ, ಜಾತ್ರಾ ಕಮಿಟಿಯವರಾದ ತಾಲೂಕು ಪಂಚಾಯತಿ ಮಾಜಿ ಸದಸ್ಯ ಸುರೇಂದ್ರ ಶೇರವಿ, ಕೆಂಪಣ್ಣ ಜಾಂಬೋಟಿ, ಚಂದ್ರಪ್ಪ ಮಗದುಮ್ಮ, ಕೆಂಪಣ್ಣ ಖೋತ, ಯಲ್ಲಪ್ಪ ರಾಮಗೋನಟ್ಟಿ, ಬಸವರಾಜ ಜಿಂಡ್ರಾಳಿ, ಬಸವರಾಜ ಯಕ್ಕುಂಡಿ, ಸಿದ್ದಪ್ಪ ಹೊಸಮನಿ, ಲಗಮಣ್ಣ ಮಗದುಮ್ಮ, ಜಕ್ಕರಾಯಿ ಪೂಜೇರಿ ಮತ್ತು ಹೊಸಪೇಟ ಗ್ರಾಮ ಪಂಚಾಯತಿ ಸದಸ್ಯ ಸದಾನಂದ ಮಾಳ್ಯಾಗೋಳ, ರಮೇಶ ಹುರಳಿ ಮತ್ತು ಮಹಾದೇವ ಶಹಸೀಲ್ದಾರ್‌, ಸಿದ್ದಪ್ಪ ರಾಮಗೊನಟ್ಟಿ, ಚಂದ್ರಶೇಖರ ಹುಡೇದ, ಶಾಮಲಾ ಮಾರುತಿ ಹೊಸಮನಿ ಮತ್ತು ವಿವಿಧ ಗ್ರಾಮಗಳ ರಾಜಕೀಯ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.