ಸಾರಾಂಶ
ಚಿಂಚೋಳಿ: ತಾಲೂಕಿನ ಗಡಿಪ್ರದೇಶ ಕುಂಚಾವರಂ ಗ್ರಾಮದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ಶಿಕ್ಷಣ ಮತ್ತು ಕೌಶಾಲ್ಯಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಅನಿರೀಕ್ಷಿತವಾಗಿ ಭೇಟಿ ನೀಡಿ ಸರಕಾರಿ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆ ಮತ್ತು ವೈದ್ಯರ ನಿರ್ಲಕ್ಷತನ, ತೆಲಂಗಾಣದ ರಾಜ್ಯದಲ್ಲಿ ಸ್ಕ್ಯಾನಿಂಗ್ ಮಾಡಿಕೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರು ಆಲಿಸಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡು ಕರ್ತವ್ಯವನ್ನು ಸರಿಯಾಗಿ ಮಾಡಲು ಎಚ್ಚರಿಕೆ ನೀಡಿದರು.
ತಾಲೂಕಿನ ಕುಂಚಾವರಂ ಗ್ರಾಮದಲ್ಲಿ ೧೯೬೬ರಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯಕೇಂದ್ರ ನಿರ್ಮಿಸಲಾಗಿದೆ ನಂತರ ಅದನ್ನು ಸಮುದಾಯ ಆರೋಗ್ಯ ಕೇಂದ್ರ ಎಂದು ಮೇಲ್ದರ್ಜೆಗೇರಿಸಲಾಗಿದೆ.ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಆರೋಗ್ಯ ಸೇವೆಗಳು ಮತ್ತು ಚಿಕಿತ್ಸೆ ವ್ಯವಸ್ಥೆ ಸರಿಯಾಗಿ ನೀಡುತ್ತಿಲ್ಲವೆಂದು ಕಾಂಗ್ರೆಸ ಮುಖಂಡ ನರಸಿಂಹಲೂ ಕುಂಬಾರ ಸಚಿವರ ಗಮನಕ್ಕೆ ತಂದರು.ಕುಂಚಾವರಂ ಸರಕಾರಿಸಮುದಾಯ ಆರೋಗ್ಯ ಕೇಂದ್ರ ಸ್ತ್ರೀರೋಗ ತಜ್ಞೆ ವೈದ್ಯರು ಗರ್ಭಿಣಿ ಮಹಿಳೆಯರಿಗೆ ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ ಮಾಡಿಕೊಂಡವರಿಗೆ ಮಾತ್ರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ ಮುಖಂಡ ಸೀನು ಹೇಳಿದಾಗ ಸಚಿವರು ಸ್ತ್ರೀರೋಗ ತಜ್ಞ ವೈದ್ಯರಿಗೆ ಸೂಚಿಸಿ ಗಡಿಪ್ರದೇಶದಲ್ಲಿ ಅನೇಕ ಬಡ ಹೆಣ್ಣುಮಕ್ಕಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿರಿ ಇನ್ನು ಮುಂದೆ ಆಗದಂತೆ ನೋಡಿಕೊಳ್ಳಿರಿ ಎಂದಾಗ ಸರ್ ನಾನು ಯಾವುದೇ ಖಾಸಗಿ ಆರೋಗ್ಯ ತಪಾಸಣೆ ನಡೆಸುವುದಿಲ್ಲ ಇದರ ಬಗ್ಗೆ ಪರಿಶೀಲಿಸಬಹುದು ಎಂದು ಸಚಿವರಿಗೆ ತಿಳಿಸಿದರು.
ಚಿಂಚೋಳಿಸಿಪಿಐ ಎಲ್.ಎಚ್. ಗೌಂಡಿ, ಜಿಪಂ ಮಾಜಿ ಅಧ್ಯಕ್ಷ ಭೀಮರಾವ ಟಿಟಿ ಬಸಯ್ಯ ಗುತ್ತೆದಾರ, ಗ್ರಾಪಂ ಅಧ್ಯಕ್ಷ ರಮೇಶ ಮಸಾನಿ, ನರಸಿಂಹಲು ಕುಂಬಾರ, ಸೀನೂ, ಲಕ್ಷ್ಮಣ ಆವಂಟಿ, ಸಂತೋಷ ಗುತ್ತೆದಾರ, ಶಬ್ಬೀರ ಅಹೆಮದ, ಬಿಚ್ಚಪ್ಪ, ವೆಂಕಟೇಶ, ರಘುವೀರ ಮಗದಂಪೂರ, ವೆಂಕಟರೆಡ್ಡಿ ಕಸ್ತೂರಿ ಸುರೇಶ ಬಂಟಾ ಇನ್ನಿತರಿದ್ದರು.