ಹಿಂದೂ ಏರಿಯಾಗೆ ಈದ್ ಮೆರವಣಿಗೆ ತರದಂತೆ ಸಚಿವರು ತಿಳಿಸಲಿ: ಯಶವಂತ ರಾವ್‌

| Published : Sep 03 2025, 01:00 AM IST

ಹಿಂದೂ ಏರಿಯಾಗೆ ಈದ್ ಮೆರವಣಿಗೆ ತರದಂತೆ ಸಚಿವರು ತಿಳಿಸಲಿ: ಯಶವಂತ ರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಉಸ್ತುವಾರಿ ಮಂತ್ರಿ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಹಿಂದೂಗಳು ಆಜಾದ್ ನಗರಕ್ಕೆ ಹೋಗಬಾರದೆಂದರೆ ಮುಸ್ಲಿಮರು ಸಹ ಈದ್ ಮಿಲಾದ್ ಮೆರವಣಿಗೆ ಹಿಂದೂಗಳ ಏರಿಯಾದಲ್ಲಿ ತರಬಾರದು. ದಮ್ಮಿದ್ದರೆ ಈ ಮಾತನ್ನು ಮಲ್ಲಿಕಾರ್ಜುನ ಹೇಳಲಿ ನೋಡೋಣ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್‌ ಜಾ‍ಧವ್ ಸವಾಲು ಹಾಕಿದ್ದಾರೆ.

ದಾವಣಗೆರೆ: ಜಿಲ್ಲಾ ಉಸ್ತುವಾರಿ ಮಂತ್ರಿ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಹಿಂದೂಗಳು ಆಜಾದ್ ನಗರಕ್ಕೆ ಹೋಗಬಾರದೆಂದರೆ ಮುಸ್ಲಿಮರು ಸಹ ಈದ್ ಮಿಲಾದ್ ಮೆರವಣಿಗೆ ಹಿಂದೂಗಳ ಏರಿಯಾದಲ್ಲಿ ತರಬಾರದು. ದಮ್ಮಿದ್ದರೆ ಈ ಮಾತನ್ನು ಮಲ್ಲಿಕಾರ್ಜುನ ಹೇಳಲಿ ನೋಡೋಣ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್‌ ಜಾ‍ಧವ್ ಸವಾಲು ಹಾಕಿದರು.

ನಗರದಲ್ಲಿ ಮಂಗಳ‍ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಮರು ಇರುವ ಕಡೆ ಹಿಂದೂಗಳು ಫ್ಲೆಕ್ಸ್ ಹಾಕುವುದು ಬೇಡ ಎಂದಿದ್ದಾರೆ. ಹಾಗಾದರೆ, ಈದ್ ಮಿಲಾದ್ ಮೆರವಣಿಗೆ ಆಜಾದ್ ನಗರ, ಭಾಷಾ ನಗರ ಭಾಗಕ್ಕೆ ಸೀಮಿತಗೊಳಿಸಿ, ಕ್ರಮ ಕೈಗೊಳ್ಳಲಿ ಎಂದರು.

ಹಿಂದೂ ಸಂಘಟನೆಯ ಸತೀಶ ಪೂಜಾರಿ ಅವರಿಗೆ ಕೆಲಸ ಇಲ್ಲವಾ ಅಂತಾ ಸಚಿವರು ಪ್ರಶ್ನಿಸಿದ್ದಾರೆ. ನಿಮ್ಮ ಮನೆ, ನಿಮ್ಮನೆ ಮುಂದಿನ ಪಾರ್ಕ್‌ನಲ್ಲಿ ಅಲ್ಲ, ನಿಮ್ಮದೇ ಮಿಲ್‌ ಮುಂಭಾಗ ಮಟ್ಟಿಕಲ್ಲುನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಫ್ಲೆಕ್ಸ್ ಹಾಕಿದ್ದು. ಸಚಿವರು ಮತ ಬ್ಯಾಂಕ್ ರಾಜಕಾರಣ, ನಾಟಕ ಬಿಡಲಿ ಎಂದರು.

ರೈಲುಗಳಿಗೆ ಬೆಂಕಿಹಚ್ಚಿ, ಹಿಂದೂಗಳ ಚಂಡು ಕತ್ತರಿಸಿ ಅಂತಾ ಕಾಂಗ್ರೆಸ್ಸಿನ ಪಾಲಿಕೆ ಮಾಜಿ ಸದಸ್ಯ ಕಬೀರ್ ಖಾನ್‌ ಪ್ರಚೋದನಾಕಾರಿ ಹೇಳಿಕೆ ನೀಡಿದರು. ಆಗ ಪಾಪ ಸಚಿವ ಎಸ್.ಎಸ್.ಮಲ್ಲಿಕಾರ್ಜುನಗೆ ಆಕ್ರೋಶ ಬರಲಿಲ್ಲ. ಅವನೇನೋ ಆವೇಶದಲ್ಲಿ ಹೇಳಿದ್ದಾನೆ, ಮಾಧ್ಯಮದವರು ನೀವು ಅದನ್ನೇ ಹೇಳುತ್ತೀರೆಂದಿದ್ದರು. ಕ್ಷಮೆ ಕೇಳಿದ್ದನ್ನು ತೋರಿಸಲ್ಲವೆಂದಿದ್ದರು ಎಂದು ಹೇಳಿದರು.

ಗಾಂಜಿ ವೀರಪ್ಪ ಸಮಾಧಿ ಬಿಡಿಸಿಕೊಡಿ:

ಶಾಸಕ ಹರೀಶ್‌ ತಂದೆಯ ಸಮಾಧಿ ಹುಡುಕಿಕೊಟ್ಟಿದ್ದೇನೆಂದು ರಾಜರೋಷ‍ವಾಗಿ ಹೇಳಿಕೆ ನೀಡಿರುವ ಸಚಿವ ಎಸ್‌ಎಸ್‌ಎಂ, ದಮ್ಮಿದ್ದರೆ ಮಾಜಿ ಶಾಸಕ ಗಾಂಜಿ ವೀರಪ್ಪನವರ ಸಮಾಧಿಯನ್ನೂ ಬಿಡಿಸಿಕೊಡಲಿ. ರಸ್ತೆ, ಪಾರ್ಕ್‌, ಸಮಾಧಿ ಕಬಳಿಸಿದ್ದನ್ನು ಬಿಡಿಸಿಕೊಡಲಿ. ಗಾಂಜಿ ವಂಶಸ್ಥರೂ ಇದ್ದಾರೆ. ಗಾಂಜಿ ವೀರಪ್ಪ ಸಮಾಧಿಗೆ ಆ ಕುಟುಂಬವೂ ಪೂಜೆ ಮಾಡುತ್ತದೆ ಎಂದು ಸಲಹೆ ನೀಡಿದರು.

ಹರೀಶ್‌ ಬಳಿ ಎಲ್ಲ ದಾಖಲೆಗಳಿವೆ:

ರೈತರ ಜಮೀನಿನ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆ ಹರೀಶ್‌ ಅವರ ಬಳಿ ಇವೆ. ಮೊನ್ನೆ ಕೆಐಎಡಿಬಿ ವತಿಯಿಂದ 1.5 ಎಕರೆ ಮಂಜೂರು ಮಾಡಿಸಿದ್ದು, ಎಲ್ಲ ದಾಖಲೆ ಸಹ ಇವೆ. ಎಲ್ಲವನ್ನೂ ಬಟಾಬಯಲು ಮಾಡುತ್ತೇವೆ. ಪಾಲಿಕೆಗೆ ಸೇರಿದ 1.5 ಎಕರೆ ಸೇರಿದಂತೆ ಶೀಘ್ರವೇ ಎಲ್ಲವನ್ನೂ ಮಾಧ್ಯಮದವರ ಜೊತೆ ಹೋಗಿ, ಎಲ್ಲೆಲ್ಲಿ, ಏನೇನು ಅಕ್ರಮ ಮಾಡಿದ್ದಾರೆ ಎಂಬ ಬಗ್ಗೆ ಸ್ಥಳ ಪರಿಶೀಲಿಸುತ್ತೇವೆ. ನಮ್ಮ ಹೋರಾಟ ನಿರಂತರ ಇಲ್ಲ ಯಶವಂತ ರಾವ್ ಗುಟುರು ಹಾಕಿದರು.

- - -

(ಕೋಟ್‌) ನಾವು ಎಂದಿಗೂ ಜಾತಿ, ಧರ್ಮದ ಆಧಾರದಲ್ಲಿ ರಾಜಕಾರಣ ಮಾಡಿಲ್ಲ. ಮೂವತ್ತು ವರ್ಷ ನಿಮ್ಮ ತಂದೆ, ನಿಮ್ಮನ್ನು ಶಾಸಕರು, ಸಚಿವ, ಸಂಸದರಾಗಿ ಮಾಡಿದ ಅದೇ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರಿಗೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಟ್ಟು, ಋಣ ತೀರಿಸುವ ಕೆಲಸ ಮಾಡಿ. ಸಚಿವರು ಇನ್ನಾದರೂ ಯಾವುದೇ ಹೇಳಿಕೆಗಳ ನೀಡುವ ಮುನ್ನ ಎಚ್ಚರವಹಿಸಲಿ.

- ಯಶವಂತ ರಾವ್ ಜಾಧವ್, ಬಿಜೆಪಿ ಹಿರಿಯ ಮುಖಂಡ.