ಕನ್ನಡಪ್ರಭ ವಾರ್ತೆ ಬೆಳಗಾವಿ ಡಾ.ಪ್ರಭಾಕರ ಕೋರೆ ಅವರಿಗೆ ಭಾರತ ಸರಕಾರ ಪ್ರತಿಷ್ಠಿತ ನಾಗರಿಕ ಸನ್ಮಾನವಾದ ಪದ್ಮಶ್ರೀ ಪ್ರಶಸ್ತಿ ಬಂದ ಹಿನ್ನಲೆಯಲ್ಲಿ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಸ್ವಗೃಹಕ್ಕೆ ಆಗಮಿಸಿ ಅಭಿನಂದಿಸಿದರು. ಈ ವೇಳೆ ಕುಶಲೋಪಹರಿ ವಿಚಾರಿಸಿದ ವಿ.ಸೋಮಣ್ಣ ಅವರು ಶಿಕ್ಷಣ, ಕೃಷಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಡಾ.ಪ್ರಭಾಕರ ಕೋರೆಯವರ ಕೊಡುಗೆ ಅಪಾರವಾದುದು. ಅವರ ಸಮಾಜಮುಖಿ ಸೇವೆ, ಧಾರ್ಮಿಕ ಮನಸ್ಸು ಅವರನ್ನು ಎತ್ತರಕ್ಕೆ ಬೆಳೆಸಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಡಾ.ಪ್ರಭಾಕರ ಕೋರೆ ಅವರಿಗೆ ಭಾರತ ಸರಕಾರ ಪ್ರತಿಷ್ಠಿತ ನಾಗರಿಕ ಸನ್ಮಾನವಾದ ಪದ್ಮಶ್ರೀ ಪ್ರಶಸ್ತಿ ಬಂದ ಹಿನ್ನಲೆಯಲ್ಲಿ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಸ್ವಗೃಹಕ್ಕೆ ಆಗಮಿಸಿ ಅಭಿನಂದಿಸಿದರು. ಈ ವೇಳೆ ಕುಶಲೋಪಹರಿ ವಿಚಾರಿಸಿದ ವಿ.ಸೋಮಣ್ಣ ಅವರು ಶಿಕ್ಷಣ, ಕೃಷಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಡಾ.ಪ್ರಭಾಕರ ಕೋರೆಯವರ ಕೊಡುಗೆ ಅಪಾರವಾದುದು. ಅವರ ಸಮಾಜಮುಖಿ ಸೇವೆ, ಧಾರ್ಮಿಕ ಮನಸ್ಸು ಅವರನ್ನು ಎತ್ತರಕ್ಕೆ ಬೆಳೆಸಿದೆ. ಕೆಎಲ್‌ಇ ಸಂಸ್ಥೆಯನ್ನು ಜಾಗತಿಕವಾಗಿ ವಿಸ್ತರಿಸಿದ ಅವರು ಸಮಾಜ ಸೇವೆಯನ್ನು ಒಂದು ವೃತವನ್ನಾಗಿ ಸ್ವೀಕರಿಸಿ ಶ್ರಮಿಸಿದ್ದಾರೆ. ಇಂದಿನ ಯುವಶಕ್ತಿಗೆ ಒಂದು ರೋಲ್ ಮಾಡೆಲ್ ಆಗಿರುವ ಡಾ.ಕೋರೆಯವರು ಈ ಶತಮಾನ ಕಂಡ ಅಭೂತರ್ಪೂವ ವ್ಯಕ್ತಿ ಎಂದು ಬಣ್ಣಿಸಿದರು.ಈ ಸಂದರ್ಭದಲ್ಲಿ ಮಾಜಿ ಸಂಸದ ರಮೇಶ ಕತ್ತಿ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಇತರರು ಇದ್ದರು.