ಸಾರಾಂಶ
ಭಾವೈಕ್ಯತೆ ಮತ್ತು ಸಾಮರಸ್ಯದ ಸಂದೇಶ ಸಾರುವ ರಂಜಾನ್ ಪವಿತ್ರ ತಿಂಗಳ ಅಂಗವಾಗಿ, ಭಾಷಾ ನಗರದಲ್ಲಿನ ಮುಸ್ಲಿಂ ಸಮಾಜದ ಮುಖಂಡರಾದ ಜನಾಬ್ ಸೈಯದ್ ಸೈಪುಲ್ಲಾ ಸಾಬ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ಗಣಿ ಮತ್ತು ಭೂ ವಿಜ್ಞಾನ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಭಾವೈಕ್ಯತೆ ಮತ್ತು ಸಾಮರಸ್ಯದ ಸಂದೇಶ ಸಾರುವ ರಂಜಾನ್ ಪವಿತ್ರ ತಿಂಗಳ ಅಂಗವಾಗಿ, ಭಾಷಾ ನಗರದಲ್ಲಿನ ಮುಸ್ಲಿಂ ಸಮಾಜದ ಮುಖಂಡರಾದ ಜನಾಬ್ ಸೈಯದ್ ಸೈಪುಲ್ಲಾ ಸಾಬ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ಗಣಿ ಮತ್ತು ಭೂ ವಿಜ್ಞಾನ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭಾಗವಹಿಸಿದ್ದರು.ಸಮಸ್ತ ಮುಸ್ಲಿಂ ಸಮಾಜ ಬಾಂಧವರಿಗೆ ರಂಜಾನ್ ಉಪವಾಸ ಹಾಗೂ ಹಬ್ಬದ ಮಹತ್ವ ತಿಳಿಸುವುದರೊಂದಿಗೆ ಹಬ್ಬದ ಶುಭಾಶಯಗಳನ್ನು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಜನಾಬ್ ಸೈಯದ್ ಸೈಫುಲ್ಲಾ ಸಾಬ್, ಮಾಜಿ ಮೇಯರ್ ಚಮನ್ ಸಾಬ್, ಪಾಲಿಕೆ ಮಾಜಿ ಸದಸ್ಯರಾದ ರಹೀಮ್ ಸಾಬ್, ಗಡಿ ಗುಡಾಳ್ ಮಂಜುನಾಥ್ ಹಾಗೂ ಸೈಯದ್ ಖಾಲಿದ್ ಅಹ್ಮದ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಯುವ ಅಧ್ಯಕ್ಷರು ಹಾಗೂ ಕಾರ್ಯಕರ್ತರು, ಮುಸ್ಲಿಂ ಸಮಾಜದ ಮುಖಂಡರು, ಹಲವರು ಇದ್ದರು.- - - -28ಕೆಡಿವಿಜಿ44:
ದಾವಣಗೆರೆಯ ಸೈಯದ್ ಸೈಫುಲ್ಲಾ ನಿವಾಸದಲ್ಲಿ ನಡೆದ ಇಫ್ತಿಯಾರ್ ಕೂಟದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭಾಗವಹಿಸಿ ಶುಭಾಷಯ ಕೋರಿದರು.