ಚಾಮುಂಡೇಶ್ವರಿ ಉಪ ಚುನಾವಣೆ ಪ್ರಚಾರಕ್ಕೆ ಬರುವಂತೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಬರುವಂತೆ ಮನವಿ ಮಾಡಿಕೊಂಡೆವು. ಅಂದು ಮಹಾರಾಜರು ಬರದೇ ಹೋಗಿದ್ದರೆ ಸಿದ್ದರಾಮಯ್ಯ ಗೆಲ್ಲಲು ಆಗುತ್ತಿರಲಿಲ್ಲ. ಸಿಎಂ ಕೂಡ ಆಗುತ್ತಿರಲಿಲ್ಲ. ಶ್ರೀಕಂಠದತ್ತರ ಬಗ್ಗೆಯೂ ಸಿದ್ದರಾಮಯ್ಯ ಒಳ್ಳೆಯ ಮಾತುಗಳನ್ನು ಆಡಲಿಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ಅನುಭವ ಇಲ್ಲದವರಿಗೆ ಜವಾಬ್ದಾರಿ ನೀಡಿದರೆ ಏನಾಗುತ್ತದೆ ಎಂಬುದಕ್ಕೆ ರಾಜವಂಶಸ್ಥರ ಕುರಿತು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮಾತನಾಡಿರುವುದೇ ಸಾಕ್ಷಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್. ವಿಶ್ವನಾಥ್ ಟೀಕಿಸಿದರು.ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮೈಸೂರು ರಾಜಮನೆತನದ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ. ಅವರಿಗೆ ಅನುಭವವಿಲ್ಲ. ಸಿದ್ದರಾಮಯ್ಯ ಮತ್ತು ಅವರ ಮಗ ಮೈಸೂರಿನ ಇತಿಹಾಸ ಗೊತ್ತಿಲ್ಲದವರಂತೆ ಮಾತನಾಡುತ್ತಿದ್ದಾರೆ. ಜಿಲ್ಲಾ ಮಂತ್ರಿಗಳು ಇನ್ನಾದರೂ ಮೈಸೂರಿನ ಇತಿಹಾಸ ಓದಬೇಕು. ಮೈಸೂರು ರಾಜಮನೆತನದ ಹಿನ್ನೆಲೆ ತಿಳಿದುಕೊಳ್ಳಬೇಕು ಎಂದರು.
ಚಾಮುಂಡೇಶ್ವರಿ ಉಪ ಚುನಾವಣೆ ಪ್ರಚಾರಕ್ಕೆ ಬರುವಂತೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಬರುವಂತೆ ಮನವಿ ಮಾಡಿಕೊಂಡೆವು. ಅಂದು ಮಹಾರಾಜರು ಬರದೇ ಹೋಗಿದ್ದರೆ ಸಿದ್ದರಾಮಯ್ಯ ಗೆಲ್ಲಲು ಆಗುತ್ತಿರಲಿಲ್ಲ. ಸಿಎಂ ಕೂಡ ಆಗುತ್ತಿರಲಿಲ್ಲ. ಶ್ರೀಕಂಠದತ್ತರ ಬಗ್ಗೆಯೂ ಸಿದ್ದರಾಮಯ್ಯ ಒಳ್ಳೆಯ ಮಾತುಗಳನ್ನು ಆಡಲಿಲ್ಲ ಎಂದು ಅವರು ಟೀಕಿಸಿದರು.ಯತೀಂದ್ರ ಜಂಭದ ಕೋಳಿಯ ರೀತಿ ಮಾತನಾಡುವುದು ಶೋಭೆಯಲ್ಲ. ಈ ವಿಚಾರದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಸರಿಯಾಗಿ ಮಾತನಾಡಿದ್ದಾರೆ. ಈ ಬೆಳವಣಿಗೆಯಿಂದ ರಾಜಮನೆತನಕ್ಕೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ ಎಂದರು.
2 ಪದವೀಧರ, 2 ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ಚುನಾವಣೆಯಲ್ಲಿ ಎನ್.ಡಿಎ ಮೈತ್ರಿಕೂಟ ಜಯಭೇರಿ ಬಾರಿಸಿದೆ. ಈ ಚುನಾವಣೆಯಲ್ಲಿ ಪದವೀಧರರು, ಶಿಕ್ಷಕರು ಮಾತ್ರ ಮತ ಚಲಾಯಿಸಿದ್ದಾರೆ. ಆದರೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ವಿಜಯೇಂದ್ರ, ಅಶೋಕ್, ಕುಮಾರಸ್ವಾಮಿ 2028ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ ಅಂತ ಕೂಗಾಡ್ತಿದ್ದಾರೆ. ಆದರೆ ಪ್ರಧಾನಿ ಪ್ರತಿನಿಧಿಸುತ್ತಿರುವ ವಾರಣಾಸಿ ಕ್ಷೇತ್ರದಲ್ಲಿ ಬಿಜೆಪಿ ಸೋತಿದೆ. ಅಲ್ಲಿ ಸಮಾಜವಾದಿ ಪಕ್ಷ ಗೆದ್ದಿದೆ ಎಂದು ಟೀಕಿಸಿದರು.ಬಾಂಬೆ ಡೇಸ್ ಪುಸ್ತಕ ಸಿದ್ಧ- ಆದರೆ ಬಿಡುಗಡೆ ಮಾಡಲ್ಲ:
ಬಾಂಬೆ ಡೇಸ್ ಪುಸ್ತಕ ರಿಲೀಸ್ ಆದರೆ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತೆ. ಬಾಂಬೆ ಡೇಸ್ ಪುಸ್ತಕವನ್ನು ನಾನು ಬಿಡುಗಡೆ ಮಾಡುವುದಿಲ್ಲ. ಪುಸ್ತಕವನ್ನು ನಾನು ಸಂಪೂರ್ಣವಾಗಿ ಬರೆದಿದ್ದೇನೆ. ಆದರೆ ಪ್ರಕಟ ಮಾಡದಿರಲು ನಿರ್ಧರಿಸಿದ್ದೇನೆ. ಪುಸ್ತಕ ಬಿಡುಗಡೆ ಮಾಡಿದರೆ ರಾಜಕಾರಣದ ಬಗ್ಗೆ, ರಾಜಕಾರಣಿಗಳ ಬಗ್ಗೆ ಜನರು ಮತ್ತಷ್ಟು ಅಸಹ್ಯ ಪಡುತ್ತಾರೆ ಎಂದು ಅವರು ಹೇಳಿದರು.ಈ ಕಾರಣದಿಂದ ಬಾಂಬೆ ಡೇಸ್ ಪುಸ್ತಕ ಬಿಡುಗಡೆ ಮಾಡುವುದಿಲ್ಲ. ಈಗಾಗಲೇ ಜನರು ರಾಜಕೀಯದ ಬಗ್ಗೆ ಬಹಳ ಅಸಹ್ಯ ಪಟ್ಟುಕೊಂಡಿದ್ದಾರೆ. ಇನ್ನಷ್ಟು ಅಸಹ್ಯ ಮಾಡಿಸುವುದಕ್ಕೆ ನನಗೆ ಇಷ್ಟವಿಲ್ಲ ಎಂದರು.