ಆಟೋ ಓಡಿಸಿದ ಅಪ್ರಾಪ್ತ: ಮಾಲೀಕನಿಗೆ ₹26 ಸಾವಿರ ದಂಡ

| Published : Jul 30 2024, 12:38 AM IST

ಸಾರಾಂಶ

ದಾವಣಗೆರೆಯಲ್ಲಿ ಅಪ್ರಾಪ್ತ ಬಾಲಕ ಆಟೋ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ವಾಹನ ಮಾಲೀಕನಿಗೆ ನ್ಯಾಯಾಲಯವು ₹26 ಸಾವಿರ ದಂಡ ವಿಧಿಸಿದೆ. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಹೀಮ್ ಎಂಬಾತ ವಿಮೆ ಚಾಲ್ತಿ ಇಲ್ಲದ ತನ್ನ ಆಟೋ ರಿಕ್ಷಾವನ್ನು 17 ವರ್ಷದ ಬಾಲಕನಿಗೆ ಚಲಾಯಿಸಲು ನೀಡಿದ್ದನು.

ದಾವಣಗೆರೆ: ಅಪ್ರಾಪ್ತ ಬಾಲಕ ಆಟೋ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ವಾಹನ ಮಾಲೀಕನಿಗೆ ನ್ಯಾಯಾಲಯವು ₹26 ಸಾವಿರ ದಂಡ ವಿಧಿಸಿದೆ.

ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಹೀಮ್ ಎಂಬಾತ ವಿಮೆ ಚಾಲ್ತಿ ಇಲ್ಲದ ತನ್ನ ಆಟೋ ರಿಕ್ಷಾವನ್ನು 17 ವರ್ಷದ ಬಾಲಕನಿಗೆ ಚಲಾಯಿಸಲು ನೀಡಿದ್ದ. ಈ ಹಿನ್ನೆಲೆ ದಾವಣಗೆರೆ ಉತ್ತರ ಸಂಚಾರ ಠಾಣೆ ಪೊಲೀಸರು, ಸದರಿ ಆಟೋ ರಿಕ್ಷಾವನ್ನು ಜಪ್ತಿ ಮಾಡಿ, ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯವು ಆಟೋರೀಕ್ಷಾ ಮಾಲೀಕನಿಗೆ ₹26,000 ದಂಡ ವಿಧಿಸಿದೆ.

ಎಸ್‌ಪಿ ಸೂಚನೆ:

ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಜರುಗಿಸಲಾಗುವುದು. ಅಲ್ಲದೆ, 18 ವರ್ಷ ತುಂಬದ ಮಕ್ಕಳ ಕೈಗೆ ವಾಹನಗಳ ಚಾಲನೆ ಮಾಡಲು ಕೊಡುವ ಪಾಲಕರಿಗೆ, ವಾಹನ ಮಾಲೀಕರಿಗೆ ದಾವಣಗೆರೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಲಿದ್ದಾರೆ. ಆದ್ದರಿಂದ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮನವಿ ಮಾಡಿದ್ದಾರೆ.

- - - (ಫೋಟೋ: ಆಟೋ)