ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ: ಸಾಲ ಯೋಜನೆ ಅರ್ಜಿ ಆಹ್ವಾನ

| Published : Jan 18 2025, 12:49 AM IST

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ: ಸಾಲ ಯೋಜನೆ ಅರ್ಜಿ ಆಹ್ವಾನ
Share this Article
  • FB
  • TW
  • Linkdin
  • Email

ಸಾರಾಂಶ

Minority Development Corporation: Loan Scheme Application Invitation

ಯಾದಗಿರಿ:ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅರಿವು (ರಿನ್ಯೂವಲ್) ಸಾಲ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ, ಡಿ-ಸಿಇಟಿ, ಪಿಜಿ-ಸಿಇಟಿ, ನೀಟ್ ಮೂಲಕ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌, ವೈದ್ಯಕೀಯ (ಎಂ.ಬಿ.ಬಿ.ಎಸ್/ಡಿ.ಎಂ.ಎಸ್) ದಂತವೈದ್ಯಕೀಯ(ಬಿ.ಡಿ.ಎಸ್, ಎಂ.ಡಿ.ಎಸ್)ಆಯುಷ್ (ಬಿ.ಆಯುಶ್/ಎಂ.ಆಯುಶ್) ಇಂಜಿನಿಯರಿಂಗ್, ಟೆಕ್ನಾಲಜಿ (ಬಿ.ಇ/ಬಿ.ಟೆಕ್/ಎಂ.ಇ/ಎಂ.ಟೆಕ್) ಬ್ಯಾಚುಲರ್‌ ಆಫ್‌ ಆರ್ಕಿಟೆಕ್ಚರ್, ಬಿ.ಎಸ್. ಹಾರ್ಟಿಕಲ್ಚರ್ ಇಂಜಿನಿಯರಿಂಗ್, ಫಾರ್ಮಸಿ, ಕೃಷಿ ವಿಜ್ಞಾನ ಮತ್ತು ಫಾರ್ಮಾಸ್ಯುಟಿಕಲ್, ಮುಂತಾದ ಕೋರ್ಸ್‌ಗಳಲ್ಲಿ ಆಯ್ಕೆಯಾಗಿರುವಂತಹ ಮತೀಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ “ಅರಿವು (ರಿನ್ಯೂವಲ್)” ವಿದ್ಯಾಭ್ಯಾಸ ಸಾಲ ಯೋಜನೆಯಡಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಅರ್ಜಿಗಳನ್ನು ಸಲ್ಲಿಸುವಾಗ ನಿಗಮದಿಂದ ಈ ಹಿಂದಿನ ವರ್ಷದಲ್ಲಿ ಪಡೆದಿರುವ ಸಾಲದ ಮೊತ್ತದ ಶೇ.12 ರಷ್ಟನ್ನು ಪಾವತಿಸಬೇಕಾಗಿರುತ್ತದೆ. ಶೇ.12 ರಷ್ಟು ಮೊತ್ತವನ್ನು ಆನ್‌ಲೈನ್ ಮುಖಾಂತರ ಪಾವತಿಸಬಹುದು.

ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿದ್ದು, ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅರಿವು ವಿದ್ಯಾಭ್ಯಾಸ ಸಾಲ ಪಡೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು, ರಿನ್ಯೂವಲ್ ಮೊತ್ತವನ್ನು ಪಾವತಿಸುವುದು ಅಗತ್ಯವಿಲ್ಲ. ವೆಬ್‌ಸೈಟ್ kmdconline.karnataka.gov.inನಲ್ಲಿ “ಆನ್‌ಲೈನ್” ಮೂಲಕ 2025ರ ಜನವರಿ 31ರ ಒಳಗೆ ಅರ್ಜಿ ಸಲ್ಲಿಸಬೇಕು. ನಂತರ ಮೂಲ ದಾಖಲಾತಿಗಳನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಇಲಾಖಾ ಸಹಾಯವಾಣಿ ಸಂ.8277799990 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.