ಸಾರಾಂಶ
ಕಾಂಗ್ರೆಸ್ಸಿನವರು ತಾವೇ ಅಧಿಕಾರದಲ್ಲಿ ಇರುತ್ತೇವೆಂಬ ಭ್ರಮೆಯಲ್ಲಿದ್ದಾರೆಂದು ಅಲ್ಪಸಂಖ್ಯಾತ ಗೂಂಡಾಗಳು ಮೆರೆಯುತ್ತಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಅನ್ನೋರನ್ನು, ಕಲ್ಲು ತೂರಾಟ ಮಾಡುವವರನ್ನು ಗುಂಡಿಕ್ಕಿ ಹೊಡೆಯಬೇಕು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹರಿಹಾಯ್ದರು.
ದಾವಣಗೆರೆ: ಕಾಂಗ್ರೆಸ್ಸಿನವರು ತಾವೇ ಅಧಿಕಾರದಲ್ಲಿ ಇರುತ್ತೇವೆಂಬ ಭ್ರಮೆಯಲ್ಲಿದ್ದಾರೆಂದು ಅಲ್ಪಸಂಖ್ಯಾತ ಗೂಂಡಾಗಳು ಮೆರೆಯುತ್ತಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಅನ್ನೋರನ್ನು, ಕಲ್ಲು ತೂರಾಟ ಮಾಡುವವರನ್ನು ಗುಂಡಿಕ್ಕಿ ಹೊಡೆಯಬೇಕು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹರಿಹಾಯ್ದರು.
ನಗರದ ಗಡಿಯಾರ ಕಂಬ ಸಮೀಪದ ಜಿಲ್ಲಾ ಉಪ ಬಂಧೀಖಾನೆಗೆ ಸೋಮವಾರ ಸಂಜೆ ಭೇಟಿ ನೀಡಿ, ಬಂಧಿತ ಹಿಂದು ಯುವಕರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸೂರ್ಯ ಹುಟ್ಟಿ ಹೇಗೆ, ಮುಳುಗುತ್ತಾನೋ, ಅಧಿಕಾರವೂ ಹಾಗೆ ಎಂಬುದನ್ನೇ ಆಡಳಿತ ಪಕ್ಷದವರು ಮರೆತಿದ್ದಾರೆ ಎಂದರು.ದಾವಣಗೆರೆಯಲ್ಲಿ ಹಿಂದುಗಳ ಮನೆಗಳಿಗೆ ಹೋಗಿ, ಬಂಧಿಸುವಂತಹ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ನಾನು ಎಚ್ಚರಿಕೆ ಕೊಡುತ್ತಿದ್ದೇನೆ. ಮತ್ತೆ ಇಂತಹ ಘಟನೆಗಳು ನಡೆಯಬಾರದು. ಪಕ್ಷಾತೀತವಾಗಿ ಎಲ್ಲ ಹಿಂದುಗಳು ಒಟ್ಟಾಗಬೇಕು. ನಾನು ಹಿಂದುಗಳ ಪರ. ಅದಕ್ಕಾಗಿಯೇ ಹಿಂದುಗಳ ಮನೆಗೆ ಭೇಟಿ ಕೊಟ್ಟಿದ್ದೇನೆ. ಬೇಕಿದ್ದರೆ ದಾವಣಗೆರೆ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಯಾರ ಪರವಾಗಿದ್ದಾರೋ ಅಂತಹವರ ಮನೆಗಳಿಗೆ ಭೇಟಿ ನೀಡಲಿ ಎಂದು ಕಾಂಗ್ರೆಸ್ಸಿನ ಹಿರಿಯ ಶಾಸಕರ ಟೀಕೆಗೆ ತಿರುಗೇಟು ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಯುವ ಮುಖಂಡ ಮಾಡಾಳ ಮಲ್ಲಿಕಾರ್ಜುನ ಇತರರು ಇದ್ದರು.- - - (-ಫೋಟೋ: ರೇಣುಕಾಚಾರ್ಯ)