ಮಾನವ ಬಂಧುತ್ವ ವೇದಿಕೆ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಹಯೋಗದಲ್ಲಿ ಸಮಾಜದಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆ ಬೆಳೆಸುವ ಮೂಲಕ ಮೌಢ್ಯಮುಕ್ತ ವಾತಾವರಣ ನಿರ್ಮಿಸುವ ಸದುದ್ದೇಶದಿಂದ ಬೆಂಗಳೂರು ವಿಭಾಗ ಮಟ್ಟದ ಪವಾಡ ಬಯಲು ತರಬೇತಿ ಶಿಬಿರಗಳನ್ನು ಹರಿಹರ, ತಾವರಕೆರೆ, ಘಟಪ್ರಭಾ ಮತ್ತು ಮೈಸೂರಿನಲ್ಲಿ ಹಮ್ಮಿಕೊಂಡಿರುವುದಾಗಿ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ.ರಾಮಚಂದ್ರಪ್ಪ ತಿಳಿಸಿದ್ದಾರೆ.

- ಹರಿಹರ ಸೇರಿ ವಿವಿಧೆಡೆ ಮಾನವ ಬಂಧುತ್ವ ವೇದಿಕೆ ಆಯೋಜನೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾನವ ಬಂಧುತ್ವ ವೇದಿಕೆ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಹಯೋಗದಲ್ಲಿ ಸಮಾಜದಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆ ಬೆಳೆಸುವ ಮೂಲಕ ಮೌಢ್ಯಮುಕ್ತ ವಾತಾವರಣ ನಿರ್ಮಿಸುವ ಸದುದ್ದೇಶದಿಂದ ಬೆಂಗಳೂರು ವಿಭಾಗ ಮಟ್ಟದ ಪವಾಡ ಬಯಲು ತರಬೇತಿ ಶಿಬಿರಗಳನ್ನು ಹರಿಹರ, ತಾವರಕೆರೆ, ಘಟಪ್ರಭಾ ಮತ್ತು ಮೈಸೂರಿನಲ್ಲಿ ಹಮ್ಮಿಕೊಂಡಿರುವುದಾಗಿ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ.ರಾಮಚಂದ್ರಪ್ಪ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯ ಹರಿಹರ ನಗರದ ಹೊರವಲಯದ ಮೈತ್ರಿವನದಲ್ಲಿ ಅ.3 ಮತ್ತು 4ರಂದು, ಬೆಳಗಾವಿ ಜಿಲ್ಲೆ ಘಟಪ್ರಭಾದಲ್ಲಿ ಅ.10 ಮತ್ತು 11ರಂದು, ಕುಷ್ಟಗಿ ಸಮೀಪದ ತಾವರಗೆರೆಯಲ್ಲಿ ಅ.17 ಮತ್ತು 18ರಂದು ಹಾಗೂ ಮೈಸೂರಿನಲ್ಲಿ 23 ಮತ್ತು 24ರಂದು ಡಾ.ಹುಲಿಕಲ್ ನಟರಾಜ್ ಎರಡು ದಿನದ ತರಬೇತಿ ನೀಡುವರು ಎಂದರು.

ಪ್ರಸ್ತುತ ದಿನ ಆಧುನಿಕ ಯುಗದಲ್ಲೂ ವಿಜ್ಞಾನದ ವಿಷಯದೊಂದಿಗೆ ಮೌಢ್ಯಗಳ ತುಂಬುವ ವಿಚಾರಕ್ಕೆ ಮುಖಾಮುಖಿಯಾಗಿ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಗಳ ಜಾಗೃತಿ ಮೂಡಿಸುವ ಶಿಬಿರಗಳಲ್ಲಿ 100-120 ಜನರು ಭಾಗವಹಿಸುವರು. ಶಿಬಿರಾರ್ಥಿಗಳಿಗೆ ಪ್ರಯಾಣದ ಭತ್ಯೆ, ಉಚಿತ ವಸತಿ, ಊಟೋಪಚಾರ ಹಾಗೂ ಪವಾಡ ಬಯಲು ಕಿಟ್ ನೀಡಲಾಗುವುದು ಎಂದು ಅವರು ಹೇಳಿದರು.

ಪ್ರತಿ ಜಿಲ್ಲೆಯಿಂದ 10 ಜನರಿಗೆ ಮಾತ್ರ ಅವಕಾಶ ಇದೆ. 20ರಿಂದ 40 ವರ್ಷದ ವಯೋಮಾನದ ವೈಚಾರಿಕ, ವೈಜ್ಞಾನಿಕ ಚಿಂತನೆ, ಮನೋಭಾವನೆ ಯುವಕ- ಯುವತಿಯರು, ಮಹಿಳೆಯರು, ಗೃಹಿಣಿಯರು ಭಾಗವಹಿಸಬಹುದು. ಆಸಕ್ತರು ಹೆಚ್ಚಿನ ಮಾಹಿತಿಗೆ, ಹೆಸರು ನೋಂದಾಯಿಸಲು ಡಾ. ಬಿ.ಟಿ.ಲೋಲಾಕ್ಷಮ್ಮ (ಮೊ.94818- 67847), ಬಸವರಾಜ ಹಟ್ಟಿಗೌಡ್ರು (94484- 41841), ನಿಂಗರೆಡ್ಡಿ (98453- 57656), ಮಂಜುನಾಥ ಸ್ವಾಮಿ (94803- 66979), ಡಾ. ಎಸ್.ನಾಗರಾಜ (81970-72972) ಅವರನ್ನು ಸಂಪರ್ಕಿಸಲು ಡಾ. ಎ.ಬಿ.ರಾಮಚಂದ್ರಪ್ಪ ಮನವಿ ಮಾಡಿದರು.

ಪರಿಷತ್‌ನ ಡಾ. ಬಿ.ಟಿ.ಲೋಲಾಕ್ಷಮ್ಮ ಮಾತನಾಡಿ, ಮಹಿಳೆಯರು ಅತಿ ಬೇಗ ಮೌಢ್ಯಕ್ಕೊಳಗಾಗುವುದು ಹೆಚ್ಚಾಗಿ ಕಂಡುಬರುತ್ತಿದೆ. ಮಹಿಳೆಯರಲ್ಲಿ ವೈಜ್ಞಾನಿಕ, ವೈಚಾರಿಕ ಚಿಂತನೆ ಬೆಳೆಸಲು ಶಿಬಿರಗಳನ್ನು ನಡೆಸಲಾಗುತ್ತಿದೆ. ಓರ್ವ ರೈತ ಮಹಿಳೆ, ಇಬ್ಬರು ಪಿಎಚ್‌.ಡಿ ಅಧ್ಯಯನ ಮಾಡುತ್ತಿರುವ ಮಹಿಳೆಯರು ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ವೇದಿಕೆಯ ಎಸ್.ಹನುಮಂತಪ್ಪ ಕೊರೂರು, ಚಂದ್ರಕಲಾ, ಪವನ್, ಸಂತೋಷ್, ಎಂ.ಆರ್.ಶ್ರೀರಂಗಪ್ಪ ಇತರರು ಇದ್ದರು.

- - -

-1ಕೆಡಿವಿಜಿ4: