ಸಾರಾಂಶ
ಸಮಾಜದಲ್ಲಿ ಸಾಮರಸ್ಯ ಕಾಪಾಡುವುದು ಬಹಳ ಮುಖ್ಯ. ವಿವಿಧ ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳ ಜನರು ಒಟ್ಟಿಗೆ ಸೌಹಾರ್ದಯುತವಾಗಿ ಬದುಕ ಬೇಕಾದರೆ, ಸಮಾಜದಲ್ಲಿ ಏನಾಗುತ್ತಿದೆ ಎಂಬುದನ್ನು ಮಾಧ್ಯಮವು ಪ್ರತಿಬಿಂಬಿಸುತ್ತದೆ.
ಭಟ್ಕಳ:
ಮಾಧ್ಯಮವು ಸಮಾಜದ ಕೈಗನ್ನಡಿಯಾಗಿದ್ದು, ಸಮಾಜದಲ್ಲಿ ಸಾಮರಸ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಆರ್. ಮಾನ್ವಿ ಹೇಳಿದರು.ಅವರು ತಾಲೂಕಿನ ಹಡೀಲ ಪ್ರಾಥಮಿಕ ಶಾಲೆಯಲ್ಲಿ ಅಂಜುಮನ್ ಪದವಿ ಕಾಲೇಜಿನ ಎನ್ನೆಸ್ಸೆಸ್ ಶಿಬಿರದಲ್ಲಿ ಸಮಾಜದ ಸಾಮರಸ್ಯ ಕಾಪಾಡುವಲ್ಲಿ ಮಾಧ್ಯಮಗಳ ಪಾತ್ರ ವಿಷಯದ ಕುರಿತು ಉಪನ್ಯಾಸ ನೀಡಿದರು.ಸಮಾಜದಲ್ಲಿ ಸಾಮರಸ್ಯ ಕಾಪಾಡುವುದು ಬಹಳ ಮುಖ್ಯ. ವಿವಿಧ ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳ ಜನರು ಒಟ್ಟಿಗೆ ಸೌಹಾರ್ದಯುತವಾಗಿ ಬದುಕ ಬೇಕಾದರೆ, ಸಮಾಜದಲ್ಲಿ ಏನಾಗುತ್ತಿದೆ ಎಂಬುದನ್ನು ಮಾಧ್ಯಮವು ಪ್ರತಿಬಿಂಬಿಸುತ್ತದೆ. ಮಾಧ್ಯಮವು ಸಮಾಜದಲ್ಲಿ ಜಾಗೃತಿ ಮೂಡಿಸುವುದು, ಸಾರಾಂಶ ನೀಡುವುದು, ವಿಮರ್ಶೆ ಮಾಡುವುದು ಮುಂತಾದ ಕಾರ್ಯ ಮಾಡುತ್ತದೆ. ಈ ಕಾರ್ಯಗಳ ಮೂಲಕ ಮಾಧ್ಯಮವು ಸಾಮಾಜಿಕ ಸಾಮರಸ್ಯ ಕಾಪಾಡಲು ಸಹಾಯ ಮಾಡುತ್ತದೆ. ಮಾಧ್ಯಮಗಳು ಯಾವಾಗಲೂ ವಸ್ತುನಿಷ್ಠತೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.ಭಟ್ಕಳದ ಇತಿಹಾಸ ಕುರಿತು ಉಪನ್ಯಾಸ ನೀಡಿದ ಕನ್ನಡ ಸಾಹಿತ್ಯ ಪರಿಷತ್‌ನ ಶ್ರೀಧರ ಶೇಟ್, ನಾವು ರಷ್ಯಾ, ಅಮೆರಿಕದ ಇತಿಹಾಸ ಓದುತ್ತೇವೆ. ಆದರೆ ನಮ್ಮದೇ ಊರಿನ ಇತಿಹಾಸ ಮರೆಯುತ್ತೇವೆ. ಯಾರು ಇತಿಹಾಸ ಓದುವುದಿಲ್ಲವೋ ಅವರು ಇತಿಹಾಸ ಸೃಷ್ಟಿಸಲಾರರು ಎಂದು ಹೇಳಿದರು.ಅಂಜುಮನ್ ಪದವಿ ಕಾಲೇಜಿನ ಎಸ್‌ಎನ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಆರ್.ಎಸ್. ನಾಯಕ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕಾರ್ಯಾಲಯ ಅಧೀಕ್ಷಕ ಖಮರುದ್ದೀನ್, ಶಿಕ್ಷಕ ರಾಮ ಗೌಡ ಉಪಸ್ಥಿತರಿದ್ದರು.