ಸಾರಾಂಶ
ಎಸ್ಸಿ.ಎಸ್ಟಿ. ಸಮುದಾಯದವರು ಇರುವ ಕಡೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ । ಪಿಡಬ್ಲ್ಯೂಡಿ ಕಾರ್ಯಪಾಲಕ ಎಂಜಿನಿಯರ್‌ಗೆ ಮನವಿ ಸಲ್ಲಿಕೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮೇ 3 ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗಕ್ಕೆ ಸಂಬಂಧಪಟ್ಟ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಸಂಸ ಮುಖಂಡರು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಡಿ.ಎನ್.ಶ್ರೀ ಧರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ವೆಂಕಟೇಶ್, ಪ್ರತಿ ವರ್ಷ ಕೋಟ್ಯಂತರ ರು. ಕಾಮಗಾರಿ ಗಳನ್ನು ಎಸ್‌ಸಿಪಿ ಮತ್ತು ಟಿಎಸ್‌ಪಿ ಸಮುದಾಯದ ಹೆಸರಿನಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗಾಗಿ ಹಣ ಬಿಡುಗಡೆ ಗೊಂಡರೂ ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ ಎಂದು ಹೇಳಿದರು.ಎಸ್ಸಿ, ಎಸ್ಟಿ ಸಮುದಾಯದವರು ವಾಸಿಸುವ ಸ್ಥಳದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡದೇ, ಸಾಮಾನ್ಯ ವರ್ಗದ ಜನರು ವಾಸಿಸುವ ಪ್ರದೇಶಗಳಲ್ಲಿ ಕಾಮಗಾರಿ ಮಾಡಲಾಗಿದೆ. ಈ ಪ್ರಕರಣಗಳು ಪ್ರತಿ ವರ್ಷ ವಂಚನೆ ಹಾಗೂ ಭಾರೀ ಭ್ರಷ್ಟಚಾರಗಳಿಂದ ಕೂಡಿರುತ್ತದೆ ಎಂದು ಆರೋಪಿಸಿದರು.ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗೆ ದೂರು ನೀಡಿದರೂ ಯಾವುದೇ ತನಿಖೆ ಅಥವಾ ಕ್ರಮಗಳನ್ನು ಜರುಗಿಸದ ಕಾರಣ 2 ವರ್ಷಗಳ ಸಾಲಿನಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳಲ್ಲಿ ಭಾರೀ ಭ್ರಷ್ಟಾಚಾರ ನಡೆಸಲಾಗಿದೆ. ಮಾಹಿತಿ ಹಕ್ಕಿನಡಿ ಅರ್ಜಿಸಲ್ಲಿಸಿದರೆ ಯಾವುದೇ ಕಾಮಗಾರಿ ಮಂಜೂರಾಗಿಲ್ಲ ಎಂದು ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು.ಎಂಎಂಡಿ ಹಳ್ಳಿ ಮಲ್ಲೇಶ್ವರ ದೇವಸ್ಥಾನದಿಂದ ದುಂಗೆರೆ ಕಾಲೋನಿ ಸಂಪರ್ಕ ರಸ್ತೆ, ಈಶ್ವರಹಳ್ಳಿ ಗ್ರಾಪಂ ವಡೇರಹಳ್ಳಿ ರಸ್ತೆ, ಮೂಗ್ತಿಹಳ್ಳಿ ಗ್ರಾಪಂ ಶಿರಗುಂದ ಕಾಲೋನಿ ಕಾಂಕ್ರೀಟ್ ರಸ್ತೆ, ದುಂಗೆರೆಯಿಂ ದ ಎಂಎಂಡಿ ಹಳ್ಳಿ ರಸ್ತೆಯ ಉಳಿಕೆ ಕಾಮಗಾರಿ, ಚಿಕ್ಕಕುರುಬರಹಳ್ಳಿಯಿಂದ ಬಿಳೇಕಲ್ಲು ರಸ್ತೆ ಅಭಿವೃದ್ಧಿ , ನಗರದ ಹೌಸಿಂಗ್ ಬೋರ್ಡ್ ಸಂಜೀವಿನಿ ಶಾಲೆ ಹಿಂಭಾಗವಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾ ರ್ಥಿ ನಿಲಯಕ್ಕೆ ಸಾಗುವ ರಸ್ತೆ ಅಭಿವೃ್ದ್ಧಿ ಸೇರಿದಂತೆ ಹಲವು ಕಡೆಗಳಲ್ಲಿ ಅನುದಾನ ದುರ್ಬಳಕೆ ಮಾಡಿ ಕೊಳ್ಳಲಾಗಿದೆ ಎಂದರು.ಇಷ್ಟೆಲ್ಲಾ ಅವ್ಯವಹಾರ ಗಮನಿಸಿದರೆ ಸಂಬಂಧಪಟ್ಟ ಇಂಜಿನಿಯರ್‌ಗಳು ಭ್ರಷ್ಟಚಾರ ಮರೆಮಾಚಲು ಮುಂದಾಗಿರುವುದು ಸ್ಪಷ್ಟವಾಗಿದೆ. ಮಾಹಿತಿ ಮೇರೆಗೆ ಪರಿಶೀಲಿಸಲಾದ ಕಾಮಗಾರಿಗಳ ಪಟ್ಟಿಯಲ್ಲಿ ಅಕ್ರಮ ನಡೆದಿದ್ದು, ಎಸ್ಸಿ, ಎಸ್ಟಿ ಪಂಗಡಗಳಿಗೆ ಭಾರಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ದಿನೇಶ್, ಹರೀಶ್, ಪುಟ್ಟಸ್ವಾಮಿ, ಶಿವಕುಮಾರ್ ಇದ್ದರು.ಪೋಟೋ ಫೈಲ್ ನೇಮ್ 3 ಕೆಸಿಕೆಎಂ 1ಎಸ್ಸಿ, ಎಸ್ಟಿ ಜನಾಂಗಕ್ಕೆ ಸಂಬಂಧಪಟ್ಟ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಸಂಸ ಮುಖಂಡರು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಡಿ.ಎನ್.ಶ್ರೀ ಧರ್ ಗೆ ಶುಕ್ರವಾರ ಮನವಿ ಸಲ್ಲಿಸಿದರು.