ಸಂಘದ ಹಣ ದುರ್ಬಳಕೆ: ಕಾನೂನು ಕ್ರಮಕ್ಕೆ ಆಗ್ರಹ

| Published : May 27 2024, 01:17 AM IST

ಸಾರಾಂಶ

ಕನಕಪುರ: ಸಂಘದ ಹಣ ದುರುಪಯೋಗ ಪಡಿಸಿಕೊಂಡವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಕಬ್ಬಾಳೇಗೌಡ ತಿಳಿಸಿದ್ದಾರೆ.

ಕನಕಪುರ: ಸಂಘದ ಹಣ ದುರುಪಯೋಗ ಪಡಿಸಿಕೊಂಡವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಕಬ್ಬಾಳೇಗೌಡ ತಿಳಿಸಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ 2022-23ನೇ ಸಾಲಿನ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸಂಘದ ಹಣ ದುರುಪಯೋಗ ಪಡಿಸಿಕೊಂಡ 9 ಮಂದಿ ಮೇಲೆ ದೂರು ದಾಖಲು ಮಾಡಲಾಗಿದೆ. ಸೊಸೈಟಿ ಹಣ ದುರುಪಯೋಗಪಡಿಸಿಕೊಂಡ ಹಣ ಮತ್ತೆ ವಾಪಸ್ ಪಡೆಯಲು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸರ್ವ ಸದಸ್ಯರ ಆಗ್ರಹದಂತೆ ಈ ಹಿಂದೆ ನಡೆದಿರುವ ಎಲ್ಲಾ ಅವ್ಯವಹಾರಗಳ ಸಮಗ್ರ ತನಿಖೆ ನಡೆಸಲು 63, 64, 65ರ ಕಲಂ ಅಡಿಯಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸೊಸೈಟಿಯನ್ನು ಸಂಪೂರ್ಣವಾಗಿ ಕಂಪ್ಯೂಟರೀಕೃತಗೊಳಿಸಲಾಗಿದೆ. ಸೊಸೈಟಿ ಸುಧಾರಣೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸೊಸೈಟಿ ಸರ್ವ ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸರ್ವ ಸದಸ್ಯರಲ್ಲಿ ಭಾಗವಹಿಸಿದ ಅನೇಕ ಸದಸ್ಯರು ಸೊಸೈಟಿಯಲ್ಲಿ ನಡೆದಿರುವ ಅವ್ಯವಹಾರಗಳನ್ನು ಪಾರದರ್ಶಕವಾಗಿ ತನಿಖೆ ನಡೆಸುವಂತೆ ಆಗ್ರಹಿಸಿದರು. ಸಭೆಯಲ್ಲಿ ಸಂಘದ ಸದಸ್ಯರಿಗೆ ಬ್ಯಾಂಕಿನ ಸಿಬ್ಬಂದಿ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದವು. ಆರೋಪಗಳಿಗೆ ಉತ್ತರಿಸಿದ ಅಧ್ಯಕ್ಷರು ಸಹಕಾರ ನಿಯಮಗಳಡಿ ಕೇಳುವ ಯಾವುದೇ ಮಾಹಿತಿಗಳನ್ನು ನೀಡಲು ಅಭ್ಯಂತರವಿಲ್ಲ. ನಿಯಮ ಉಲ್ಲಂಘಿಸಿ ಕೇಳುವ ಮಾಹಿತಿ ಒದಗಿಸಲು ಸಾಧ್ಯವಿಲ್ಲವೆಂದು ತಿಳಿಸಿದರು.

2022 23ನೇ ಸಾಲಿನ ಲೆಕ್ಕಪರಿಶೋಧನಾ ವರದಿ, ಲೆಕ್ಕ ಪರಿಶೋಧಕರ ನೇಮಕ ಸೇರಿದಂತೆ ಇನ್ನಿತರ ವಿಷಯಗಳನ್ನು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಸೊಸೈಟಿ ಉಪಾಧ್ಯಕ್ಷ ಚೂಡಾಮಣಿ, ನಿರ್ದೇಶಕರಾದ ಡಾ. ವಿಜಯಕುಮಾರ್, ರಾಮಚಂದ್ರ ಉಪಾಧ್ಯ, ಜೆ.ನಟರಾಜು, ರಜಿನಿ, ರಾಮಚಂದ್ರು, ಮಂಜುಳಾ, ಬೋರಪ್ಪ, ಡಿ ಶ್ರೀನಿವಾಸ್, ಸ್ಟುಡಿಯೋ ಚಂದ್ರು, ಹೇಮಶೇಖರ್, ಪ್ರಧಾನ ಕಾರ್ಯದರ್ಶಿ ಎಂ.ಶೋಭಾ ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ02:

ಕನಕಪುರದಲ್ಲಿ ಅರ್ಬನ್ ಕೋ ಆಪರೇಟಿವ್ ಸೊಸೈಟಿಯ ಸರ್ವ ಸದಸ್ಯರ ವಿಶೇಷ ಸಭೆ ನಡೆಯಿತು.