ಸಾರಾಂಶ
ಚನ್ನಪಟ್ಟಣ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಚನ್ನಪಟ್ಟಣ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಟಿ.ಎಸ್.ರಾಜು ವಿರುದ್ಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬೆನ್ನಲ್ಲೆ ರಾಜು ತಲೆಮರೆಸಿಕೊಂಡಿದ್ದಾರೆ.
ಚನ್ನಪಟ್ಟಣ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಚನ್ನಪಟ್ಟಣ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಟಿ.ಎಸ್.ರಾಜು ವಿರುದ್ಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬೆನ್ನಲ್ಲೆ ರಾಜು ತಲೆಮರೆಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿರುವ ಮಹಿಳೆ, ಗಣೇಶ ಹಬ್ಬದ ಪ್ರಯುಕ್ತ ಮನೆಗೆ ಬಂದಿದ್ದರು. ಸೆ.೭ರಂದು ರಾತ್ರಿ ಗಣೇಶಮೂರ್ತಿ ವಿಸರ್ಜನೆಗೂ ಮುನ್ನ ಮೆರವಣಿಗೆ ವೇಳೆ ಮಹಿಳೆ ಮನೆ ಬಳಿ ತಾಯಿಯೊಂದಿಗೆ ನಿಂತಿದ್ದರು. ತಾಯಿ ಮನೆಯೊಳಗೆ ಹೋದ ವೇಳೆ ಮಹಿಳೆ ಪಕ್ಕ ಬಂದು ನಿಂತಿದ್ದ ರಾಜು ಯಾವಾಗ ಬಂದೆ ಎಂದು ಮಹಿಳೆ ಹೆಗಲ ಮೇಲೆ ಕೈಹಾಕಿ, ಕೈಹಿಡಿದು ಎಳೆದಾಡಿ ಅನುಚಿತವಾಗಿ ವರ್ತಿಸಿದ್ದಲ್ಲದೆ, ಮೊಬೈಲ್‌ನಲ್ಲಿ ಫೋಟೋ ತೆಗೆದು ಸ್ನೇಹಿತರಿಗೆ ಕಳಿಸಿದ್ದು, ಈ ಕುರಿತು ಪ್ರಶ್ನಿಸಿದಾಗ, ನನ್ನ ಮೊಬೈಲ್ ನನ್ನಿಷ್ಟ ಎಂದು ರಾಜು ಪ್ರತಿಕ್ರಿಯಿಸಿದ್ದಾನೆಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಆತನ ವರ್ತನೆ ಕುರಿತು ಮನೆಯೊಳಗಿದ್ದ ಅಣ್ಣನಿಗೂ ಮಹಿಳೆ ವಿಷಯ ತಿಳಿಸಿದ್ದು, ರಾಜುವನ್ನು ತರಾಟೆಗೆ ತೆಗೆದುಕೊಂಡು ಮೊಬೈಲ್ ಕಿತ್ತಿಕೊಂಡಿದ್ದಾರೆನ್ನಲಾಗಿದೆ. ಈ ಹಿಂದೆಯೂ ಸಹ ತನ್ನೊಂದಿಗೆ ಆತ ಅನುಚಿತವಾಗಿ ವರ್ತಿಸಿದ್ದು, ಲೋಕಸಭಾ ಚುನಾವಣೆ ವೇಳೆ ಸಹ ನನಗೆ ಕರೆ ಮಾಡಿ, ಮೈಸೂರು ಕಾಫಿ ಡೇಗೆ ಕರೆದಿದ್ದರು. ನನ್ನೊಂದಿಗೆ ಅಸಭ್ಯವಾಗಿ ವರ್ತಿಸುವ ರಾಜು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಾಕ್ಸ್...................ಅಧ್ಯಕ್ಷ ಸ್ಥಾನದಿಂದ ರಾಜು ಅಮಾನತು
ಚನ್ನಪಟ್ಟಣ: ಮಹಿಳೆಯ ವಿರುದ್ಧ ಅನುಚಿತವಾಗಿ ವರ್ತಿಸಿದ ಪ್ರಕರಣ ದಾಖಲಾದ ಬೆನ್ನೆಲ್ಲೆ ಟಿ.ಎಸ್.ರಾಜು ಅವರನ್ನು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಲಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಸೋಮವಾರ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್.ಆನಂದಸ್ವಾಮಿ ಬಿಜೆಪಿ ಗ್ರಾಮಾಂತರ ಮಂಡಳದ ಅಧ್ಯಕ್ಷ ಸ್ಥಾನದಿಂದ ಟಿ.ಎಸ್.ರಾಜು ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ಪೊಟೋ೯ಸಿಪಿಟಿ೪:
ಟಿ.ಎಸ್.ರಾಜು (ಮಗ್‌ಶಾಟ್ ಮಾತ್ರ)