ಸಾರಾಂಶ
ಯಾರೋ ದುಷ್ಕರ್ಮಿಗಳು ಅಡಿಕೆ ತೋಟಕ್ಕೆ ನುಗ್ಗಿ ಸುಮಾರು ೨೪೦ ಗಿಡಗಳನ್ನು ಕಡಿದು ನಾಶ ಪಡಿಸಿದ ಅಮಾನವೀಯ ಘಟನೆ ತಾಲೂಕಿನ ನಂದಿಪುರ ಗ್ರಾಮದಲ್ಲಿ ನಡೆದಿದೆ.
ಮುಂಡಗೋಡ: ಯಾರೋ ದುಷ್ಕರ್ಮಿಗಳು ಅಡಿಕೆ ತೋಟಕ್ಕೆ ನುಗ್ಗಿ ಸುಮಾರು ೨೪೦ ಗಿಡಗಳನ್ನು ಕಡಿದು ನಾಶ ಪಡಿಸಿದ ಅಮಾನವೀಯ ಘಟನೆ ತಾಲೂಕಿನ ನಂದಿಪುರ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕಾತೂರ ಗ್ರಾಪಂ ವ್ಯಾಪ್ತಿಯ ನಂದಿಪುರ ಗ್ರಾಮದ ರತ್ನಾ ಬಸವರಾಜ ಓಣಿಕೇರಿ ಎಂಬವರಿಗೆ ಸೇರಿದ ಸಿಂಗನಳ್ಳಿ ಗ್ರಾಮ ಸರ್ವೇ ನಂ.೩೫.ಅ ರಲ್ಲಿ ೩.೧೯ ಎಕರೆ ಪ್ರದೇಶದಲ್ಲಿ ಸುಮಾರು ೧೮೦೦ ಅಡಿಕೆ ಗಿಡಗಳನ್ನು ಬೆಳೆಯಲಾಗಿದ್ದು, ಯಾರೋ ದುಷ್ಕರ್ಮಿಗಳು ತೋಟಕ್ಕೆ ನುಗ್ಗಿ ಉದ್ದೇಶಪೂರಕವಾಗಿ ಸುಮಾರು ೨೪೦ ಅಡಿಕೆ ಗಿಡಗಳನ್ನು ಕಡಿದು ನಾಶಪಡಿಸಿ ಹೋಗಿದ್ದಾರೆ. ಇವು ಸುಮಾರು ೩ ವರ್ಷದ ಅಡಿಕೆ ಗಿಡಗಳಾಗಿದ್ದು, ಇನ್ನೇನು ಫಸಲು ನೀಡುವ ಹಂತಕ್ಕೆ ಬಂದಿದ್ದವು. ಈ ಕೃತ್ಯದಿಂದ ಲಕ್ಷಾತರ ರೂಪಾಯಿ ಹಾನಿಯಾಗಿದೆ.ಈ ಬಗ್ಗೆ ಶುಕ್ರವಾರ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾರು ಉದ್ದೇಶಕ್ಕೆ ಗಿಡಗಳನ್ನು ಕಡಿದು ನಾಶ ಮಾಡಿದ್ದಾರೆ ಎಂಬುವುದು ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದೆ.೯ಎಮ್.ಎನ್.ಡಿ೧೨
ಮುಂಡಗೋಡದಲ್ಲಿ ದುಷ್ಕರ್ಮಿಗಳು ಅಡಿಕೆ ತೋಟಕ್ಕೆ ನುಗ್ಗಿ ೨೪೦ ಗಿಡಗಳನ್ನು ಕಡಿದು ನಾಶಪಡಿಸಿರುವುದು.